ಸುಂಟಿಕೊಪ್ಪ, ನ. ೭: ಸುಂಟಿಕೊಪ್ಪ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಸರಿಯಾದ ಸಮಯದಲ್ಲಿ ಮಳೆ ಇಲ್ಲದಿದ್ದು ಇದೀಗ ನವೆಂಬರ್ ತಿಂಗಳಿನಲ್ಲಿ ಸುರಿಯುತ್ತಿರುವ ಮಳೆಯಿಂದ ತೋಟಗಳಲ್ಲಿ ಅರೇಬಿಕಾ ಕಾಫಿ ಹಣ್ಣಾಗಿ ನೆಲಕಚ್ಚುತ್ತಿವೆ. ಇದರಿಂದ ರೈತರು ಆತಂಕಗೊAಡಿದ್ದಾರೆ.
ಈಗಾಗಲೇ ತೋಟಗಳಲ್ಲಿ ಕಾಫಿ ಫಸಲು ಕೊಯ್ಯುವ ಸಮಯವಾಗಿದ್ದು, ಕೊಯ್ದ ಕಾಫಿಯನ್ನು ಒಣಗಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ಭಾಗದಲ್ಲಿ ಬೆಳಗ್ಗಿನಿಂದ ಮೋಡ ಕವಿದಿದ್ದು ರಾತ್ರಿ ಮಳೆ ಪ್ರಾರಂಭವಾಗುತ್ತದೆ.
ಅದೇ ರೀತಿ ಅಲ್ಪಸ್ವಲ್ಪ ಗದ್ದೆಗಳಲ್ಲಿ ನಾಟಿ ಮಾಡಿದ್ದು, ಪೈರುಗಳೂ ಸಹ ಮಳೆಯಿಂದ ಉದುರಿ ಹೋಗುವ ಪರಿಸ್ಥಿತಿ ಎದುರಾಗಿದೆ. ಸುಂಟಿಕೊಪ್ಪ ವ್ಯಾಪ್ತಿಗೆ ಬರುವ ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು-ಶಿರಂಗಾಲ, ಹೇರೂರು, ಹೊರೂರು, ಅತ್ತೂರು-ನಲ್ಲೂರು, ಕೆದಕಲ್, ಹರದೂರು, ಗರಗಂದೂರು ಭಾಗಗಳಲ್ಲಿ ಇರುವ ಸಣ್ಣ ಬೆಳೆಗಾರರು ಹಾಗೂ ದೊಡ್ಡ ಬೆಳೆಗಾರರು ಇದೀಗ ರಾತ್ರಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಬೆಳೆದ ಫಸಲನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ರಾತ್ರಿ ಗುಡುಗಿನ ಆರ್ಭಟದೊಂದಿಗೆ ಸುರಿಯುವ ಅಕಾಲಿಕ ಮಳೆ ರೈತರಲ್ಲಿ ಆತಂಕ ಭಾವನೆ ಮೂಡಿಸಿದೆ. - ರಾಜು ರೈ