*ಗೋಣಿಕೊಪ್ಪ, ನ. ೬: ಅಂಕಗಳ ಓದಿಗಷ್ಟೆ ಸೀಮಿತವಾಗದೆ ಮನೋ ನೆಮ್ಮದಿ, ಮನೋ ಧೃಡತೆ ಸಿಗುವ ಹವ್ಯಾಸವನ್ನು ಬೆಳೆಸಿಕೊಂಡಾಗ ಸಂಭ್ರಮ, ಸಂತೋಷದ ಜೀವನ ನಡೆಸಬಹುದು ಎಂದು ಕವಿ, ಸಾಹಿತಿ ಜಗದೀಶ್ ಜೋಡುಬೀಟಿ ತಿಳಿಸಿದರು.

ಅರುವತ್ತೊಕ್ಲು ಸರ್ವದೈವತಾ ಇಂಗ್ಲೀಷ್ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ಅಂತರ ಶಾಲೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ತನ್ನ ಆತ್ಮಶಕ್ತಿಯನ್ನು ಅರಿತುಕೊಳ್ಳಲಾಗದಷ್ಟು ನಿಶಕ್ತಿಯಾಗಿದ್ದಾನೆ. ಕೇವಲ ಪರೀಕ್ಷೆಗಳಿಗಾಗಿ ತೊಡಗಿಸಿಕೊಳ್ಳುವ ಅಂಕದ ಓದಿನಿಂದ ಈ ವ್ಯವಸ್ಥೆ ರೂಪಗೊಳ್ಳುತ್ತಿದೆ. ಹೀಗಾಗಿ ಉನ್ನತ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದರೂ ಆತ್ಮಹತ್ಯೆಗೆ ಶರಣಾಗುವುದನ್ನು ಕಾಣುತ್ತಿದ್ದೇವೆ.

ಓದುವ ಹವ್ಯಾಸದ ಜೊತೆಗೆ ಕ್ರೀಡೆ, ಸಂಸ್ಕೃತಿ, ಸಾಹಿತ್ಯ ಇತÀರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಬದುಕಲು ಬೇಕಾದ ದೃಢತೆಯನ್ನು ಕಲ್ಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಹೊರಗೆಡವಲು ಉತ್ತಮ ವೇದಿಕೆ ಅವಶ್ಯಕತೆ ಇದೆ. ಅಂತಹ ವೇದಿಕೆಯನ್ನು ಸರ್ವದೈವತ ಶಾಲೆ ಸೃಷ್ಟಿಸುತ್ತಿದೆ ಎಂದರು.

ವಿದ್ಯಾಸAಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೂ ವಿದ್ಯೆಯ ಜೊತೆಗೆ ಬದುಕುವ ಕಲೆಯನ್ನು ತಿಳಿಸಿಕೊಡಬೇಕೆಂಬ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ನೆಲೆಯಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟವನ್ನು ಆಯೋಜಿಸಿದೆ ಎಂದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪೊನ್ನಿಮಾಡ ಪ್ರದೀಪ್ ಮಾತನಾಡಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ಭಾಗವಹಿಸಿದ್ದರು. ಸಂಸ್ಥೆಯ ಶಿಕ್ಷಕರು, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.