ಸೋಮವಾರಪೇಟೆ, ನ. ೬: ಇಲ್ಲಿನ ಪುಷ್ಪಗಿರಿ ಜೆ.ಸಿ.ಐ ಸಂಸ್ಥೆ ವತಿಯಿಂದ ತಾ.೧೬ ರಿಂದ ೨೧ರವರೆಗೆ ‘ಭರವಸೆಯ ಜೆ.ಸಿ.ಐ ಸಪ್ತಾಹ ೨೦೨೩’ ನಂಜಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೬ ರ ಸಂಜೆ ೬.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ೭.೩೦ ಗಂಟೆಯಿAದ ಯುಕೆಜಿ ವರೆಗೆ, ೧ ರಿಂದ ೫ನೇ ತರಗತಿ ಹಾಗೂ ೬ ರಿಂದ ೧೦ನೇ ತರಗತಿಯ ವರೆಗೆ ಮೂರು ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆ ನಡೆಯಲಿದೆ.

ತಾ. ೧೭ರ ಬೆಳಿಗ್ಗೆ ೧೦.೩೦ಕ್ಕೆ ೪ ರಿಂದ ೭, ೮ರಿಂದ ೧೦ ಹಾಗೂ ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ಚದುರಂಗ ಸ್ಪರ್ಧೆ ನಡೆಯಲಿದೆ. ಇದರಲ್ಲಿ ವಿಜೇತರಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಸಂಜೆ ೬.೩೦ ರಿಂದ ಮನೋಹರ್ ಮತ್ತು ತಂಡದವರಿAದ ಲಹರಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ತಾ. ೧೮ ರಂದು ಬೆಳಿಗ್ಗೆ ೧೦.೩೦ಕ್ಕೆ ೪ ರಿಂದ ೭, ೮ ರಿಂದ ೧೦ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ೧೧.೩೦ಕ್ಕೆ ಬರವಣಿಗೆ ಸ್ಪರ್ಧೆ ನಡೆಯಲಿದೆ. ೧೨ಕ್ಕೆ ೭ನೇ ತರಗತಿವರೆಗೆ, ೮ ರಿಂದ ೧೦ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಮಕ್ಕಳ ಕವಿಗೋಷ್ಠಿ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಕ್ಕೆ ೫ನೇ ತರಗತಿ, ೬ ರಿಂದ ೧೦ ಹಾಗೂ ಕಾಲೇಜು ಮತ್ತು ಸಾರ್ವಜನಿಕರಿಗೆ ಸೋಲೋ ನೃತ್ಯ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಮೊದಲು ನೋಂದಾಯಿಸಿದ ೧೦ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ತಾ. ೧೯ ರಂದು ಬೆಳಿಗ್ಗೆ ಜೆ.ಸಿ.ಐ ವೇದಿಕೆ ಎದುರು ಬೆಳಿಗ್ಗೆ ೭ಕ್ಕೆ ೪ ರಿಂದ ೭ ಹಾಗೂ ೮ರಿಂದ ೧೦ನೇ ತರಗತಿಯವರೆಗಿನ ಮಕ್ಕಳ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಉದ್ಯಮಿ ಹರಪಳ್ಳಿ ರವೀಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ೧೦-೩೦ಕ್ಕೆ ಸ್ಥಳೀಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ೪ ರಿಂದ ೭ ಹಾಗೂ ೮ರಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ, ನಿಧಾನವಾಗಿ ಸೈಕಲ್ ಚಲಿಸುವ ಸ್ಪರ್ಧೆ ನಡೆಯಲಿದೆ.

ಪುರುಷರಿಗೆ ನಿಧಾನವಾಗಿ ಮೋಟಾರ್ ಸೈಕಲ್ ಚಲಿಸುವ ಸ್ಪರ್ಧೆ, ಸಾರ್ವಜನಿಕರಿಗೆ ೪ ಚಕ್ರ ವಾಹನ ಹಿಂದೆ ಚಲಿಸುವ ಸ್ಪರ್ಧೆ ನಡೆಯಲಿದೆ. ಸಂಜೆ ೬ ಕ್ಕೆ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ.

ತಾ. ೨೦ರಂದು ಬೆಳಿಗ್ಗೆ ೧೦-೩೦ಕ್ಕೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ. ಸಂಜೆ ೬-೩೦ಕ್ಕೆ ಕರೋಕೆ ಗಾಯನ ಸ್ಪರ್ಧೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ.

ತಾ. ೨೧ರಂದು ಬೆಳಿಗ್ಗೆ ೧೦-೩೦ಕ್ಕೆ ನಾರಿಗೊಂದು ಸವಾಲು ಕಾರ್ಯಕ್ರಮ ಅಂಗನವಾಡಿ ಶಿಕ್ಷಕರು ಹಾಗೂ ಸಾರ್ವಜನಿಕ ಮಹಿಳೆಯರಿಗೆ ನಡೆಯಲಿದೆ. ಸಂಜೆ ೬-೩೦ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ: ೭೩೩೭೭೭೦೬೧೩, ೯೯೭೨೮೩೨೯೫೬ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಗದಾಂಭ ಗುರುಪ್ರಸಾದ್, ವಿನುತ ಸುದೀಪ್, ಕೆ.ಎ. ಪ್ರಕಾಶ್, ಪವಿತ್ರ ಲಕ್ಷಿö್ಮÃಕುಮಾರ್ ಹಾಗೂ ನೆಲ್ಸನ್ ಡಿಸೋಜ ಇದ್ದರು.