ಕಣಿವೆ, ನ. ೬: ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ಕನಸಿನ ಕೊಡಗಿನ ಪ್ರಸಿದ್ಧ ಕೃಷಿ ಕ್ಷೇತ್ರ ಕೂಡಿಗೆಯಲ್ಲಿ ಕೃಷಿ ಕಾಲೇಜು ತೆರೆಯಬೇಕೆಂದು ಕುಶಾಲನಗರ ಕಾಂಗ್ರೆಸ್ ಪ್ರಮುಖರು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಮನವಿ ಮಾಡಿದರು.

ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿರುವ ಕಾಂಗ್ರೆಸ್ ಮುಖಂಡ ಮಂಜುನಾಥ ಗುಂಡೂರಾವ್ ಅವರ ನಿವಾಸಕ್ಕೆ ಶನಿವಾರ ಖಾಸಗಿ ಭೇಟಿ ನೀಡಿದ ಸಂದರ್ಭ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಸಂಬAಧಿಯೂ ಆದ ಮಂಜುನಾಥ್, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮತ್ತಿತರರು ಸಚಿವರಲ್ಲಿ ಕೋರಿಕೊಂಡು ಕೂಡಿಗೆಯಲ್ಲಿನ ಕೃಷಿ ಕ್ಷೇತ್ರದ ಇತಿಹಾಸದ ಬಗ್ಗೆ ವಿವರಿಸಿ ಇಲ್ಲೊಂದು ಕೃಷಿ ಕಾಲೇಜು ತೆರೆದಲ್ಲಿ ಕೃಷಿಯತ್ತ ಆಸಕ್ತಿ ಇರುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಕನಸು ಕೈಗೂಡಿದಂತಾಗುತ್ತದೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು ಈ ಬಗ್ಗೆ ಮುಖ್ಯ ಮಂತ್ರಿಗಳ ಬಗ್ಗೆ ಚರ್ಚಿಸಿ ಈ ಸಂಬAಧ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. ನಮ್ಮ ಸರ್ಕಾರ ನಾಡಿನಾದ್ಯಂತ ಮಹಿಳೆಯರಿಗೆ ನೀಡುತ್ತಿರುವ ಗೃಹಲಕ್ಷಿö್ಮ ಯೋಜನೆ, ಉಚಿತ ಬಸ್ ಸಂಚಾರ ಸೇರಿದಂತೆ ಎಲ್ಲಾ ಗ್ಯಾರೆಂಟಿ ಯೋಜನೆಗಳ ಹಣವನ್ನು ರೈತರ ಮನೆ ಬಾಗಿಲಿಗೆ ನೀಡಲಾಗುತ್ತಿದೆ.

ರೈತರು ಬಳಸುವ ಕೃಷಿ ಪಂಪ್ ಸೆಟ್ ಮೇಲೆ ದರ ವಿಧಿಸುವ ಯೋಜನೆ ಕೊಡಗಿನ ರೈತರಿಗೆ ಅನ್ವಯಿಸಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ ಎಂದು ಸಚಿವರು ಹೇಳಿದರು.

ಈ ಸಂದರ್ಭ ಮಂಡ್ಯ ಶಾಸಕ ರವಿ ಗಣಿಗ, ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ದಿನೇಶ್, ಮಾಜಿ ಸದಸ್ಯರಾದ ಶಿವು, ನಂಜುAಡಸ್ವಾಮಿ ಪ್ರಮುಖರಾದ ಕಿರಣ್, ಜಿ.ಬಿ. ಪ್ರಕಾಶ್, ಜೋಷಿ, ರೋಷನ್ ಮೊದಲಾದವರಿದ್ದರು.