ಕೋವರ್ ಕೊಲ್ಲಿ ಇಂದ್ರೇಶ್

ಬೀದರ್, ನ. ೧ : ಕಳೆದ ಮೂರು ವಾರಗಳಿಂದ ವನ್ಯಜೀವಿಗಳ ಹಲ್ಲು, ಉಗುರು, ಅಂಗಾAಗಗಳು, ಚರ್ಮ ಹಾಗೂ ಕೊಂಬುಗಳನ್ನು ಇಟ್ಟುಕೊಂಡಿರುವ ಆರೋಪದ ಮೇಲೆ ರಾಜ್ಯಾದ್ಯಂತ ವಿವಿಧೆಡೆ ಮೊಕದ್ದಮೆಗಳನ್ನು ದಾಖಲಿಸಿ ಅಂತಹ ವ್ಯಕ್ತಿಗಳನ್ನು ಬಂಧಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ತಡೆ ನೀಡಿದ್ದಾರೆ.

ಅರಣ್ಯಾಧಿಕಾರಿಗಳ ಕ್ರಮಕ್ಕೆ ಮುಖ್ಯವಾಗಿ ಮಲೆನಾಡು ಭಾಗದ ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ಈ ಪ್ರದೇಶದಲ್ಲಿ ಈ ಹಿಂದೆ ಬೇಟೆಗೆ ಮುಕ್ತ ಅವಕಾಶವಿದ್ದು ೧೯೭೨ ರಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದಾಗ ಆ ಉತ್ಪನ್ನಗಳ ಕುರಿತು ಸರ್ಕಾರಕ್ಕೆ ಘೋಷಣಾ ಪತ್ರ ಸಲ್ಲಿಸಬೇಕಿತ್ತು. ಪುನಃ ಸರ್ಕಾರ ೨೦೦೩ ರಲ್ಲಿ ಘೋಷಣಾ ಪತ್ರ ಸಲ್ಲಿಸಲು ಅವಕಾಶ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸದೇ ಘೋಷಣಾ ಪತ್ರ ಸಲ್ಲಿಸಿರಲಿಲ್ಲ. ಇದೀಗ ಇಲಾಖೆಯ ಕಠಿಣ ಕ್ರಮದಿಂದಾಗಿ ಜನತೆ ಆತಂಕದಲ್ಲಿ ಬದುಕುವಂತಾಗಿತ್ತು.

ನಿನ್ನೆಯಷ್ಟೇ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅರಣ್ಯ ಇಲಾಖೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಅವರಿಗೆ ಎಫ್‌ಐಆರ್ ದಾಖಲಿಸುವ ಅಧಿಕಾರ ಇಲ್ಲ ಎಂದು ಹೇಳಿದ್ದರು. ಬುಧವಾರ ಬೀದರ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ ಅವರು ಈ ಘೋಷಣಾ ಪತ್ರದ ಕರಡು ನಿಯಮಾವಳಿಗಳನ್ನು ಸಿದ್ದ ಪಡಿಸಿದ್ದು ಜನತೆಗೆ ಮತ್ತೊಂದು ಅವಕಾಶ ನೀಡುವುದಾಗಿ ತಿಳಿಸಿದರು. ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಂಡಿರುವ ಜನರಿಗೆ ಅವುಗಳ ಬಗ್ಗೆ ಘೋಷಣೆ ಮಾಡಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ, ಕಾಯ್ದೆಯಲ್ಲಿ ೨೦೦೩ ಮತ್ತು ೨೦೨೨ ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ೨೦೨೨ ತಿದ್ದುಪಡಿ ಅನ್ವಯ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಧರಿಸುವುದು, ಬಳಸುವುದು, ಸಂಗ್ರಹ-ಸಾಗಾಣಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಹೇಳಿದ ಸಚಿವರು , ವರ್ತೂರು ಸಂತೋಷ್ ಪ್ರಕರಣ ಜರುಗುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಇರಲಿಲ್ಲ ಎಂದರು. ಪ್ರಕರಣದ ಬಳಿಕ ಎಲ್ಲರಿಗೂ ಗೊತ್ತಾಗಿರುವುದರಿಂದ ಅವುಗಳನ್ನು ಹೊಂದಿರುವವರು ಸರ್ಕಾರಕ್ಕೆ ಹಿಂತಿರುಗಿಸಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ ಮತ್ತು ಗಡುವು ತೀರಿದ ಬಳಿಕ ಸರ್ಕಾರ ಒಂದು ಸುತ್ತೋಲೆಯನ್ನು ಹೊಡಿಸಲಿದೆ ಕೋವರ್ ಕೊಲ್ಲಿ ಇಂದ್ರೇಶ್

ಬೀದರ್, ನ. ೧ : ಕಳೆದ ಮೂರು ವಾರಗಳಿಂದ ವನ್ಯಜೀವಿಗಳ ಹಲ್ಲು, ಉಗುರು, ಅಂಗಾAಗಗಳು, ಚರ್ಮ ಹಾಗೂ ಕೊಂಬುಗಳನ್ನು ಇಟ್ಟುಕೊಂಡಿರುವ ಆರೋಪದ ಮೇಲೆ ರಾಜ್ಯಾದ್ಯಂತ ವಿವಿಧೆಡೆ ಮೊಕದ್ದಮೆಗಳನ್ನು ದಾಖಲಿಸಿ ಅಂತಹ ವ್ಯಕ್ತಿಗಳನ್ನು ಬಂಧಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ತಡೆ ನೀಡಿದ್ದಾರೆ.

ಅರಣ್ಯಾಧಿಕಾರಿಗಳ ಕ್ರಮಕ್ಕೆ ಮುಖ್ಯವಾಗಿ ಮಲೆನಾಡು ಭಾಗದ ಕೃಷಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ ಈ ಪ್ರದೇಶದಲ್ಲಿ ಈ ಹಿಂದೆ ಬೇಟೆಗೆ ಮುಕ್ತ ಅವಕಾಶವಿದ್ದು ೧೯೭೨ ರಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದಾಗ ಆ ಉತ್ಪನ್ನಗಳ ಕುರಿತು ಸರ್ಕಾರಕ್ಕೆ ಘೋಷಣಾ ಪತ್ರ ಸಲ್ಲಿಸಬೇಕಿತ್ತು. ಪುನಃ ಸರ್ಕಾರ ೨೦೦೩ ರಲ್ಲಿ ಘೋಷಣಾ ಪತ್ರ ಸಲ್ಲಿಸಲು ಅವಕಾಶ ನೀಡಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸದೇ ಘೋಷಣಾ ಪತ್ರ ಸಲ್ಲಿಸಿರಲಿಲ್ಲ. ಇದೀಗ ಇಲಾಖೆಯ ಕಠಿಣ ಕ್ರಮದಿಂದಾಗಿ ಜನತೆ ಆತಂಕದಲ್ಲಿ ಬದುಕುವಂತಾಗಿತ್ತು.

ನಿನ್ನೆಯಷ್ಟೇ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅರಣ್ಯ ಇಲಾಖೆಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಅವರಿಗೆ ಎಫ್‌ಐಆರ್ ದಾಖಲಿಸುವ ಅಧಿಕಾರ ಇಲ್ಲ ಎಂದು ಹೇಳಿದ್ದರು. ಬುಧವಾರ ಬೀದರ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ ಅವರು ಈ ಘೋಷಣಾ ಪತ್ರದ ಕರಡು ನಿಯಮಾವಳಿಗಳನ್ನು ಸಿದ್ದ ಪಡಿಸಿದ್ದು ಜನತೆಗೆ ಮತ್ತೊಂದು ಅವಕಾಶ ನೀಡುವುದಾಗಿ ತಿಳಿಸಿದರು. ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಂಡಿರುವ ಜನರಿಗೆ ಅವುಗಳ ಬಗ್ಗೆ ಘೋಷಣೆ ಮಾಡಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ, ಕಾಯ್ದೆಯಲ್ಲಿ ೨೦೦೩ ಮತ್ತು ೨೦೨೨ ರಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ೨೦೨೨ ತಿದ್ದುಪಡಿ ಅನ್ವಯ ವನ್ಯಜೀವಿ ಉತ್ಪನ್ನಗಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಧರಿಸುವುದು, ಬಳಸುವುದು, ಸಂಗ್ರಹ-ಸಾಗಾಣಿಕೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಹೇಳಿದ ಸಚಿವರು , ವರ್ತೂರು ಸಂತೋಷ್ ಪ್ರಕರಣ ಜರುಗುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಇರಲಿಲ್ಲ ಎಂದರು. ಪ್ರಕರಣದ ಬಳಿಕ ಎಲ್ಲರಿಗೂ ಗೊತ್ತಾಗಿರುವುದರಿಂದ ಅವುಗಳನ್ನು ಹೊಂದಿರುವವರು ಸರ್ಕಾರಕ್ಕೆ ಹಿಂತಿರುಗಿಸಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ ಮತ್ತು ಗಡುವು ತೀರಿದ ಬಳಿಕ ಸರ್ಕಾರ ಒಂದು ಸುತ್ತೋಲೆಯನ್ನು ಹೊಡಿಸಲಿದೆ