ಮಡಿಕೇರಿ, ನ. ೧ : ನಿನ್ನೆ ದಿನ ಸ್ಟುವರ್ಟ್ ಹಿಲ್‌ನಲ್ಲಿ ಕಟ್ಟಡ ಕೆಲಸದ ಸಂದರ್ಭ ಬರೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಜಾಗದ ಮಾಲೀಕ ಪ್ರದೀಪ್, ಗುತ್ತಿಗೆದಾರ ಮನು ಎಂಬವರುಗಳ ವಿರುದ್ಧ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ವಹಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಸಂಜೆ ಕೆಲಸ ಮಾಡುತ್ತಿದ್ದ ಸಂದರ್ಭ ಮಣ್ಣು ಕುಸಿದು ಆನಂದ, ಬಸವರಾಜ್, ಲಿಂಗಪ್ಪ ಎಂಬವರುಗಳು ಸಾವನ್ನಪ್ಪಿದ್ದರು. ಮಂಜು ಹಾಗೂ ರಾಜು ಎಂಬವರುಗಳು ಗಾಯಗೊಂಡು ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದರು. ಮೃತರ ಪೈಕಿ ಬಸವರಾಜ್ ಎಂಬವರು ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಬಸರಕೋಡು ಗ್ರಾಮದವರಾಗಿದ್ದು, ಲಿಂಗಪ್ಪ ಗದಗ ಜಿಲ್ಲೆಯ ಮುಳುಗುಂದ ತಾಲೂಕಿನ ಬಸವಪುರದವರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅವರುಗಳ ಸಂಬAಧಿಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ಆನಂದ ಎಂಬವರು ಹಾವೇರಿ ಮೂಲದವರು ಎಂದಷ್ಟೆ ಮಾಹಿತಿ ಲಭ್ಯವಾಗಿದ್ದು, ಅವರ ಸಂಬAಧಿಕರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟ ರಾಜು ಹಾಗೂ ಮಂಜು ಎಂಬವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರಸಭೆಯಿಂದ ಕಟ್ಟಡ ಕೆಲಸದ ಸಂಬAಧ ಅಗತ್ಯವಾದ ಅನುಮತಿಗಳನ್ನು ಮಾಲೀಕರು ಪಡೆದಿದ್ದಾರೆಯೆ ಎಂಬ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.