ಮಡಿಕೇರಿ, ನ. ೧: ಐತಿಹಾಸಿಕ ಮಡಿಕೇರಿ ದಸರಾಕ್ಕೆ ರಾಜ್ಯ ಸರಕಾರದಿಂದ ಈ ಬಾರಿ ಒಟ್ಟು ರೂ. ೯೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಹಂಚಿಕೆಯ ಪ್ರಕ್ರಿಯೆಗಳು ಆರಂಭಗೊAಡಿವೆ.

ಘೋಷಿತ ಅನುದಾನ ಸರಕಾರದಿಂದ ಜಿಲ್ಲಾಡಳಿತಕ್ಕೆ ಬಿಡುಗಡೆಯಾಗಿದ್ದು, ಅಗತ್ಯ ದಾಖಲೆಗಳ ಸಲ್ಲಿಕೆ ಬಳಿಕವಷ್ಟೇ ಹಣವನ್ನು ಸಂಬAಧಪಟ್ಟವರಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಹರಿಸುತ್ತಿದ್ದು, ಮಡಿಕೇರಿ ದಸರಾ ಸಮಿತಿ ಮೂಲಕ ಅಗತ್ಯ ದಾಖಲೆ ಪಡೆದುಕೊಳ್ಳುವ ಕೆಲಸವನ್ನು ಆರಂಭಿಸಿದೆ.

ಅ. ೧೫ ರಿಂದ ೨೪ರ ತನಕ ಮಡಿಕೇರಿ ನಗರದಲ್ಲಿ ಅದ್ದೂರಿಯಾಗಿ ದಸರಾ ಆಚರಣೆ ನಡೆದಿದ್ದು, ವಿವಿಧ ಉಪಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿವೆ. ವಿಜಯ ದಶಮಿ ದಿನದಂದು ಶೋಭಾಯಾತ್ರೆ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಆಚರಣೆ ಹಿಂದೆ ಅನೇಕರ ಶ್ರಮವಿದ್ದು, ಕಲಾವಿದರು, ವ್ಯಾಪಾರಿಗಳು ಹಣ ಪಡೆಯದೆ ಸಹಾಯ ಮಾಡಿದ್ದಾರೆ. ಬಿಲ್ ಸಲ್ಲಿಕೆಯ ನಂತರವಷ್ಟೆ ಅವರಿಗೆ ಹಣ ಸಂದಾಯವಾಗಲಿದೆ.

ಬಿಲ್‌ಗಳು ಸಲ್ಲಿಕೆಯಾಗಿಲ್ಲ

ದಸರಾ ಕಳೆದು ಒಂದು ವಾರ ಕಳೆದರೂ ಮಡಿಕೇರಿ ದಸರಾ ಸಮಿತಿಯಿಂದ ಯಾವುದೇ ಬಿಲ್‌ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇದುವರೆಗೂ ಸಲ್ಲಿಕೆಯಾಗಿಲ್ಲ. ಗೋಣಿಕೊಪ್ಪ ದಸರಾ ಸಮಿತಿಯಿಂದ ಕೆಲವೊಂದಿಷ್ಟು ಬಿಲ್‌ಗಳು ಮಾತ್ರ ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಬಾರ ನಿರ್ದೇಶಕ ಚಿನ್ನಸ್ವಾಮಿ ತಿಳಿಸಿದ್ದಾರೆ.

ದಸರಾ ಸಮಿತಿ ಬಿಲ್ ನೀಡಿದ ಬಳಿಕ ನಿಯಮ ಬದ್ಧವಾಗಿ ಕಡತ ತಯಾರಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ನೀಡಲಾಗುವುದು. ಅವರು ಪರಿಶೀಲಿಸಿ ಸಹಿ ಮಾಡಿದ ಬಳಿಕ ಹಣ ಖಜಾನೆ ಮೂಲಕ ಕೆ೨ ಆಧಾರದಲ್ಲಿ ನೇರವಾಗಿ ಅವರವರ ಖಾತೆಗಳಿಗೆ ಬಿಡುಗಡೆಯಾಗಲಿದೆ.

ಉಪಸಮಿತಿಗಳು, ದಶಮಂಟಪ ಸಮಿತಿಗಳು ಸೇರಿದಂತೆ

ದಸರಾ ಸಂಬAಧ ಖರ್ಚಾದ ಎಲ್ಲಾ ರೀತಿಯ ಬಿಲ್‌ಗಳು ಮೊದಲು ಮಡಿಕೇರಿ ದಸರಾ ಸಮಿತಿ ಪಡೆಯಬೇಕಾಗಿದ್ದು, ಆನಂತರ ಅದನ್ನು ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿ ಮುಂದಿನ ಪ್ರಕ್ರಿಯೆ ನಡೆಸಬೇಕಾಗಿದೆ. ಟಿ ಹೆಚ್.ಜೆ. ರಾಕೇಶ್