ಮೈಸೂರು, ನ. ೧: ಕೊಡಗು ಗೌಡ ಸಮಾಜ ವತಿಯಿಂದ ನಗರದ ವಿಜಯನಗರ ೨ನೇ ಹಂತದಲ್ಲಿರುವ ಸಮಾಜದ ಭವನದಲ್ಲಿ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ನಡೆಯಿತು.
ಆಚರಣೆಯ ನೇತೃತ್ವವನ್ನು ಸಮಾಜದ ಅಧ್ಯಕ್ಷ ತೋಟಂಬೈಲ್ ಮನೋಹರ್ ವಹಿಸಿ ಮಾತನಾಡಿ, ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಮನೆತನ, ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಅವರ ಹೋರಾಟ ಅವರನ್ನು ಅಮಾನವೀಯವಾಗಿ ಗಲ್ಲಿಗೇರಿಸಲ್ಪಟ್ಟ ಬಗ್ಗೆ ಕೂಲಂಕಷವಾಗಿ ತಿಳಿಸಿದರು. ಮುಖ್ಯ ಭಾಷಣಕಾರರಾಗಿ ಚಂಡೀರ ಬಸಪ್ಪ ಮಾತನಾಡಿ, ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ವಾತಂತ್ರö್ಯ ಪೂರ್ವ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಟ ಮತ್ತು ಗಲಿಗೇರಿಸಲ್ಪಟ್ಟ ಸನ್ನಿವೇಶವನ್ನು ಎಳೆಯಾಗಿ ಬಿಡಿಸಿ ಹೇಳಿದರು. ಸಮಾಜದ ಉಪಾಧ್ಯಕ್ಷ ಕುಯ್ಯಮುಡಿ ರಾಮಪ್ಪ, ಕಾರ್ಯ ದರ್ಶಿ ಕುಂಟಿಕಾನ ಗಣಪತಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಕೊಡಗು ಗೌಡ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಮಾಜದ ಸದಸ್ಯರು, ಕೊಡಗು ಗೌಡ ಕ್ಷೇಮಾ ಭಿವೃದ್ಧಿ ಸಂಘ ಹೂಟಗಳ್ಳಿ ಮೈಸೂರಿನ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂಟುಪುಣಿ ಶೀಲಾ ರಮೇಶ್ ಪ್ರಾರ್ಥಿಸಿದರು, ಸಮಾಜದ ನಿರ್ದೇಶಕÀ ಹೊಸೋಕ್ಲು ಸೋಮಣ್ಣ ಸ್ವಾಗತಿಸಿದರು, ನಿರ್ದೇಶಕ ಕೊಂಬಾರನ ಬಸಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.