ಸೋಮವಾರಪೇಟೆ, ನ. ೧ : ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆ ಎಲ್ಲರ ಧ್ಯೇಯವಾಗಬೇಕು ಎಂದು ತಾಲೂಕು ದಂಡಾಧಿಕಾರಿಗಳಾದ ಎಸ್.ಎನ್. ನರಗುಂದ್ ಕರೆ ನೀಡಿದರು.

ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.

ಕನ್ನಡದ ಶಾಲು, ಕನ್ನಡದ ತಿಲಕ ಇಡುವುದರ ಮೂಲಕ ಕನ್ನಡದ ಮೇಲಿನ ಅಭಿಮಾನ ತೋರಿದರೆ ಸಾಲದು; ಕನ್ನಡ ನಮ್ಮ ಉಸಿರಾಗಬೇಕು-ಬದುಕಾಗಬೇಕು ಎಂದ ಅವರು, ಕನ್ನಡ ಕೇವಲ ಭಾಷೆಯೊಂದರ ಪ್ರಶ್ನೆಯಲ್ಲ; ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯಾಗಿದೆ. ಇದನ್ನು ಎಂದಿಗೂ ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಕನ್ನಡ ನಾಡಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಪೋಷಕರ ಆಸಕ್ತಿ ದೂರವಾಗುತ್ತಿದೆ. ಅಂತರರಾಜ್ಯ ಗಡಿ ವಿವಾದ, ನದಿ ವಿವಾದ, ಪ್ರಾದೇಶಿಕ ಅಸಮತೋಲನ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸೇರಿದಂತೆ ಕನ್ನಡಿಗರಿಗೆ ಪೂರಕವಾಗಿ ಬಂದ ವರದಿಗಳನ್ನು ಕಾರ್ಯಗತಗೊಳಿಸಬೇಕಿದೆ. ಕನ್ನಡಿಗರಿಗೆ ಸ್ಫ್ಪೂರ್ತಿಯ ಚಿಲುಮೆಯಾಗಿದ್ದ ನಂಜುAಡಪ್ಪ ವರದಿ, ಸರೋಜಿನಿ ಮಹಿಷಿ ವರದಿಗಳನ್ನು ಕಾರ್ಯಗತಗೊಳಿಸಬೇಕಿದೆ ಎಂದು ತಹಶೀಲ್ದಾರ್ ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಗೀತಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪ.ಪಂ. ಸದಸ್ಯರುಗಳಾದ ಪಿ.ಕೆ. ಚಂದ್ರು, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಬಿ.ಆರ್. ಮಹೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಸೋಮವಾರಪೇಟೆಯ ಹಿರಿಯ ಸಾಹಿತಿ, ಕವಿ ನ.ಲ. ವಿಜಯ, ಬೆಟ್ಟದಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಸತೀಶ್ ಕಾಜೂರು ಅವರುಗಳನ್ನು ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ವಿಶ್ವಮಾನವ ಕುವೆಂಪು ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟçಗೀತೆ, ಪೊಲೀಸ್, ಗೃಹರಕ್ಷಕ ದಳ, ಸ್ಕೌಟ್ ಮಕ್ಕಳು, ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ, ಸಾಂದೀಪನಿ ಶಾಲಾ ವಿದ್ಯಾರ್ಥಿಗಳಿಂದ ಧ್ವಜ ಗೀತೆ, ಓಎಲ್‌ವಿ ಶಾಲಾ ವಿದ್ಯಾರ್ಥಿಗಳಿಂದ ರೈತ ಗೀತೆ ಗಾಯನ ನಡೆಯಿತು.

ಸೋಮವಾರಪೇಟೆ ಭಾಗದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಜರುಗಿತು. ಕನ್ನಡ ರಾಜ್ಯೋತ್ಸವ ಅಂಗವಾಗಿ ಓಎಲ್‌ವಿ ಶಾಲೆಯ ವಿದ್ಯಾರ್ಥಿಗಳಿಂದ ತಾಯಿ ಭುವನೇಶ್ವರಿ ಹಾಗೂ ಕರ್ನಾಟಕದ ಐತಿಹಾಸಿಕ ಸ್ಥಳಗಳ ಸ್ತಬ್ಧಚಿತ್ರ, ಸಂತ ಜೋಸೆಫರ ಶಾಲೆಯಿಂದ ಹೊಯ್ಸಳರ ಶಿಲ್ಪಕಲಾ ವೈಭವ, ಎಸ್‌ಜೆಎಂ ಶಾಲೆಯಿಂದ ಕನ್ನಡ ನೆಲ ಜಲ ಕುರಿತ ಸ್ತಬ್ಧಚಿತ್ರ, ಮಸಗೋಡು ಚನ್ನಮ್ಮ ಶಾಲೆಯಿಂದ ಕನ್ನಡದ ಪ್ರಸಿದ್ಧ ವಚನಕಾರರು, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಿAದ ಇಸ್ರೋ ಚಂದ್ರಯಾನ-೩, ಜ್ಞಾನವಿಕಾಸದಿಂದ ಕೊಡಗಿನ ವೈಶಿಷ್ಟö್ಯಗಳು, ಸಾಂದೀಪನಿ ಶಾಲೆಯಿಂದ ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ರಾಜಮಾತೆ ಚಿನ್ನ ನೀಡಿದ ದೃಷ್ಟಾಂತ, ಸರ್ಕಾರಿ ಪ್ರಾಥಮಿಕ ಶಾಲೆಯ ಪಾರಂಪರಿಕ ಕುಲಕಸುಬು, ಸರ್ಕಾರಿ ಪ್ರೌಢಶಾಲೆಯಿಂದ ಕೊಡಗಿನ ಕಾವೇರಿಗೆ ಸಂಬAಧಿಸಿದAತೆ ಮೂಡಿಬಂದ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯಿತು.