ಮಡಿಕೇರಿ, ನ. ೧: ಮಡಿಕೇರಿ ನಗರದಲ್ಲಿ ರೋಟರಿ ಮಡಿಕೇರಿ ವುಡ್ಸ್ ನಗರದ ಹಲವು ಕಡೆಗಳಲ್ಲಿ ಪೋಲಿಯೋ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾಬರ್ ಗಳನ್ನು ಅಳವಡಿಸಲಾಯಿತು.
ನಗರದ ಪ್ರಥಮ ಪ್ರಜೆ ಹಾಗೂ ರೋಟರಿ ಮಿಸ್ಟಿ ಹಿಲ್ಸ್ನ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ರೋಟರಿ ವುಡ್ಸ್ನ ಈ ಸಮಾಜ ಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೋಟರಿ ಸಂಸ್ಥೆಯು ಪೋಲಿಯೋ ನಿರ್ಮೂಲನೆಗಾಗಿ ಹಲವಾರು ವರ್ಷಗಳಿಂದ ಈ ಅಭಿಯಾನವನ್ನು ಮಾಡುತ್ತಾ ಬಂದಿದ್ದು, ಆ ಮೂಲಕ ಹೆಚ್ಚಿನ ಯಶಸ್ಸು ಸಿಕ್ಕಿದ್ದು ವಿಶ್ವ ಮಟ್ಟದಲ್ಲಿ ಕೇವಲ ಒಂದೆರಡು ದೇಶಗಳಲ್ಲಿ ಬಿಟ್ಟರೆ ಉಳಿದ ದೇಶ ಗಳಲ್ಲಿ ಪೋಲಿಯೊ ಮುಕ್ತವಾಗಿ ರುವುದು ಕಂಡು ಬರುತ್ತಿದೆ. ರೋಟರಿ ಸಂಸ್ಥೆಯ ಈ ಅಭಿಯಾನ ಮುಂದಿನ ದಿನಗಳಲ್ಲಿಯೂ ಅತ್ಯಂತ ಪರಿಣಾಮ ಕಾರಿ ಯಾಗುವುದರೊಂದಿಗೆ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ವುಡ್ಸ್ ಅಧ್ಯಕ್ಷರಾದ ವಸಂತ್ ಕುಮಾರ್, ಕಾರ್ಯದರ್ಶಿ ಹರೀಶ್ ಕಿಗ್ಗಾಲ್, ಪಲ್ಸ್ ಪೋಲಿಯೋ ಛೇರ್ಮನ್ ಡಾ. ಶಿಲ್ಪಾ, ಕ್ಲಬ್ ಸರ್ವಿಸ್ ಛೇರ್ಮನ್ ಕಶ್ಯಪ್ ಮತ್ತು ಹಲವಾರು ಸದಸ್ಯರು ಭಾಗವಹಿಸಿದ್ದರು.