ಮಡಿಕೇರಿ, ನ. ೧: ಟಿ. ಶೆಟ್ಟಿಗೇರಿ ಸಿದ್ಧಾಶ್ರಮದಲ್ಲಿ (ಸಿದ್ಧಾರೂಢ ಆಶ್ರಮ) ಶ್ರೀ ನಿರ್ಗುಣನಂದ ಸ್ವಾಮೀಜಿಯವರ ೪೧ನೇ ಪುಣ್ಯತಿಥಿಯನ್ನು ಆಚರಿಸಲಾಯಿತು.

ಬೆಳಿಗ್ಗೆ ನಿತ್ಯಪೂಜೆ ಬಳಿಕ ಅಭಿಷೇಕ, ಹಣ್ಣುಕಾಯಿ, ಮಂಗಳಾರತಿ, ಆನಂತರ ಗಣಪತಿ ಹೋಮ ಮತ್ತು ಪಲ್ಲಕ್ಕಿ ಹಾಗೂ ಅವರ ಗದ್ದುಗೆಗೆ ಮಹಾಮಂಗಳಾರತಿ ಮಾಡಲಾಯಿತು. ಮಧ್ಯಾಹ್ನ ೧ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.