ವೀರಾಜಪೇಟೆ, ನ. ೧: ಕನ್ನಡ ನಾಡು, ನುಡಿ ಕನ್ನಡಿಗರ ಅಸ್ಮಿತೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆಯ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಬಣ್ಣಿಸಿದರು.

ವೀರಾಜಪೇಟೆಯ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯೋತ್ಸವ ಕನ್ನಡಿಗರ ಸ್ವಾಭಿಮಾನದ ಸಂಕೇತ ವಾಗಿದೆ. ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು, ಕವಿಗಳಿಂದ ಕನ್ನಡ ನಾಡು ಕಂಗೊಳಿಸುತ್ತಿದೆ ಎಂದು ವರ್ಣಿಸಿದರು.

ಕನ್ನಡವನ್ನು ಕಲಿಸಿ, ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ಗಡಿನಾಡಾದ ವೀರಾಜಪೇಟೆಯಲ್ಲಿ ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಬೆಳೆಸುವಂತಾಗಬೇಕು ಎಂದರು.

ಧ್ವಜಾರೋಹಣಾ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ವೀರಾಜಪೇಟೆ ತಹಶೀಲ್ದಾರ್ ಹೆಚ್. ಆರ್. ರಾಮಚಂದ್ರ, ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿ ಕೊಡುªಭಾಷೆಗೆ ಧಕ್ಕೆ ಬರುವ ರೀತಿಯಲ್ಲಿ ನಾವು ನಡೆದುಕೊಳ್ಳಬಾರದು. ಕನ್ನಡ ಭಾಷೆಯ ಬಗ್ಗೆ ಶ್ರದ್ಧೆ, ಭಕ್ತಿ, ಗೌರವ ಇರಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿದರು.

ವಿವಿಧ ಶಾಲೆಗಳ ಎನ್.ಸಿ.ಸಿ., ಸ್ಕೌಟ್ಸ್, ಗೈಡ್ಸ್, ಭಾರತ್ ಸೇವಾದಳ, ಹಾಗೂ ಪೊಲೀಸ್ ಇಲಾಖೆ ವತಿಯಿಂದ ಕವಾಯತು, ಪಥ ಸಂಚಲನ ನಡೆಯಿತು.

ಪ್ರಥಮ ಗೌರವ ರಕ್ಷೆಯನ್ನು ನಗರ ಪೊಲೀಸ್ ಠಾಣೆಯ ರವೀಂದ್ರ ಅವರ ನಾಯಕತ್ವದಲ್ಲಿ ಸಲ್ಲಿಸಲಾಯಿತು.

ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಪಟ್ಟಣದ ಮಾರಿಯಮ್ಮ ದೇವಾಲಯದಿಂದ ಮೆರವಣಿಗೆ ಹೊರಟು ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ ಮೂಲಕ ತಾಲೂಕು ಮೈದಾನಕ್ಕೆ ಬಂತು. ವಿವಿಧ ಶಾಲಾ ಮಕ್ಕಳು ಮಾಡಿದ ಸ್ತಬ್ಧ ಚಿತ್ರಗಳು ಆಕರ್ಷಿಸಿದವು.

ಶಿಕ್ಷಣ ಇಲಾಖೆಯ ಹಾಗೂ ವಿನಾಯಕ ಪ್ರೌಢಶಾಲೆಯ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರ Àಲ್ಲಿ ಸರ್.ಎಂ ವಿಶ್ವೇಶ್ವರಯ್ಯ, ದಿವಾನ್ ಪೂರ್ಣಯ್ಯನಂಥ ಆಡಳಿತಗಾರರ ಪಾತ್ರ ಮಹತ್ವವಾದದ್ದು. ಕರ್ನಾಟಕದ ಸಂಗೀತವನ್ನು ಪ್ರಪಂಚಕ್ಕೆ ನೀಡಿದ ಪುಣ್ಯಭೂಮಿ ಕನ್ನಡ ನಾಡಾಗಿದೆ. ಯಕ್ಷಗಾನ, ನೃತ್ಯ, ನಾಟಕಗಳಲ್ಲಿಯು ಕರ್ನಾಟಕದ ಕೊಡುಗೆ ಅಪಾರ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕನ್ನಡ ಭಾಷೆಗೆ ೨,೫೦೦ ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಎಲ್ಲರ ಗಮನ ಸೆಳೆಯಿತು. ವಿವಿಧ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾ ಯಿತು. ಸಂತ ಅನ್ನಮ್ಮ ಶಾಲೆಯ ಮಕ್ಕಳು ಹಾಗೂ ನಾಡಗೀತೆ ಹಾಡಿದರು. ಜೆಪಿಎನ್‌ಎಂ ಶಾಲೆಯ ಮುಖ್ಯ ಶಿಕ್ಷಕ ಲಾಲ್ ಕುಮಾರ್ ಪ್ರಾರ್ಥಿಸಿ, ರೈತಗೀತೆ, ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಶಂಕರಿ ಪೊನ್ನಪ್ಪ, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ಪುರಸಭೆಯ ಸದಸ್ಯರುಗಳು, ಕಂದಾಯ ಇಲಾಖೆಯ ಪರಿವೀಕ್ಷಕ ಎಂ.ಎಲ್. ಹರೀಶ್ ಹಾಗೂ ಸಿಬ್ಬಂದಿಗಳು, ತಾಲೂಕು ಆಸ್ಪತ್ರೆಯ ವೈದ್ಯೆ ಹೇಮಪ್ರಿಯ, ಬಿಆರ್‌ಪಿ ಗೀತಾಂಜಲಿ, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.