ಸೋಮವಾರಪೇಟೆ, ನ. ೧: ಇಲ್ಲಿನ ಸಿಎಸ್‌ಐ ಸಂತ ಜಾನ್ ದೇವಾಲ ಯದಲ್ಲಿ ಫಲೋತ್ಸವ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಯಾಸಿಸ್‌ನ ಉಪಾಧ್ಯಕ್ಷ ವಿಕ್ಟರ್ ಅವರು ದೇವರ ವಾಕ್ಯ ಸಂದೇಶವನ್ನು ನೀಡಿದರು. ಸ್ಥಳೀಯ ಸಭಾ ಪಾಲಕರಾದ ಸ್ಯಾಮುವೆಲ್ ಹಾಗೂ ಸಹಾಯಕ ಸಭಾ ಪಾಲಕರಾದ ಪ್ರಿಯದರ್ಶಿನಿ ಅವರು ಹಬ್ಬದ ಆರಾಧನೆಯನ್ನು ನಡೆಸಿದರು.

ನಂತರ ಸಭೆಗೆ ಆಗಮಿಸಿದ್ದ ಭಕ್ತಾದಿಗಳು ತಂದAತಹ ವಸ್ತುಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡಿ ದೇವಾಲಯದ ಅಭಿವೃದ್ಧಿಗೆ ಬಳಸುವ ತೀರ್ಮಾನ ಕೈಗೊಳ್ಳಲಾಯಿತು. ದೇವಾಲಯದಲ್ಲಿ ಭಕ್ತಾದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಡಯಾಸಿಸ್ ಕೌನ್ಸಿಲ್ ಸದಸ್ಯ ಸಾಲೋಮನ್ ಡೇವಿಡ್, ಏರಿಯಾ ಕೌನ್ಸಿಲ್ ಸದಸ್ಯ ಅನಿಲ್, ಕಾರ್ಯದರ್ಶಿ ಚಾರ್ಲಿ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.