ಮಡಿಕೇರಿ, ಅ. ೨೧: ನಗರದ ಗಾಂಧಿ ಮೈದಾನದಲ್ಲಿ ಯುವ ದಸರಾ ಅಂಗವಾಗಿ ಆಯೋಜಿಸಿದ್ದ ‘ಬೈಕ್ ಸ್ಟಂಟ್’ ನೋಡುಗರ ಮೈನವಿರೇಳಿಸಿತು.
ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಯುವ ದಸರಾ ಸಮಿತಿ ಆಶ್ರಯದಲ್ಲಿ ಆಯೋಜಿತಗೊಂಡಿದ್ದ ಬೈಕ್ ಸ್ಟಂಟ್ಗೆ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಚಾಲನೆ ನೀಡಿದರು.
ನವೀಕೃತ ಬೈಕ್ಗಳಲ್ಲಿ ಸವಾರರು ಮೈಜುಮ್ಮೆನಿಸುವ ಸಾಹಸಗಳನ್ನು ಮಾಡಿ ನೆರೆದಿದ್ದವರನ್ನು ಮನರಂಜಿಸಿದರು. ಮಡಿಕೇರಿಯ ‘ಪವರ್ ಸ್ಟೊçÃಕ್’ ತಂಡದ ಸಂಜಯ್, ಮಹೇಶ್ ಹಾಗೂ ಜಿಶಾಂತ್ ವೀಲಿಂಗ್, ಸ್ಟಾಪಿ ಜೊತೆಗೆ ವಿಭಿನ್ನ ರೀತಿಯ ಸಾಹಸಗಳನ್ನು ಮಾಡಿದರು.
ಇದಕ್ಕೂ ಮುನ್ನ ಡುಕಟಿ, ನಿಂಜಾ ಹಾಗೂ ಡೆನಿಲಿ ಅಂತಹ ಸೂಪರ್ ಬೈಕ್ ಜೊತೆಗೆ ರಾಯಲ್ ಎನ್ಫೀಲ್ಡ್, ರಾಜ್ಧೂತ್, ಯಮಹ ಆರ್.ಎಕ್ಸ್ ಸೇರಿದಂತೆ ಇನ್ನಿತರ ವಿಂಟೇಜ್ ಬೈಕ್ಗಳ ಜಾಥಾ ನಗರದ ಮುಖ್ಯಬೀದಿಯಲ್ಲಿ ಸಾಗಿತು.
ಈ ಸಂದರ್ಭ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಸದಸ್ಯರುಗಳಾದ ಡಿ.ಜೆ. ಸೋಮು, ಅಂಜೆಟ್ಟೀರ ಲೋಕೇಶ್, ಆರ್.ಬಿ. ರವಿ, ಯಕ್ಷಿತ್, ಮೋಹನ್, ಲಿನೇಶ್, ಜಿಶಾಂತ್, ಅರ್ಜುನ್, ಶರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಂದೇಶ ಸಾರಿದ ಸೈಕಲ್ ಜಾಥಾ
ಯುವ ದಸರಾ ಸಮಿತಿ ಮತ್ತು ಗ್ರೀನ್ ಸಿಟಿ ಫೋರಂ ಆಯೋಜಿಸಿದ ‘ಸೈಕ್ಲೊಥನ್’ ಕಾರ್ಯಕ್ರಮದಲ್ಲಿ ಇಂದು ಸುಮಾರು ೫೬ ಮಂದಿ ಸೈಕಲ್ ವಿಹಾರಿಗಳು ನಗರ ಸಂಚಾರ ಮಾಡಿ ಸಂದೇಶ ಸಾರಿದರು.
ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಯುವ ದಸರಾ ಅಂಗವಾಗಿ, ಸಮಾಜದಲ್ಲಿನ ಮಾದಕ ದ್ರವ್ಯದ ಪಿಡುಗಿನ ವಿರುದ್ಧ, ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಸೈಕ್ಲೋಥನ್ ಹಿಂದಿದೆ ಎಂದು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಹೇಳಿದರು.
ಉದ್ಘಾಟನೆ ಸಂದರ್ಭ ಗ್ರೀನ್ ಸಿಟಿ ಅಧ್ಯಕ್ಷ ಜಯ ಚಿಣ್ಣಪ್ಪ, ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಪ್ರಮುಖರಾದ ಜಾನ್ಸನ್ ಪಿಂಟೋ, ಯುವ ದಸರಾ ಪದಾಧಿಕಾರಿಗಳು, ಶಕ್ತಿ ದಿನಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಹಾಜರಿದ್ದರು. ಸೈಕಲ್ ಜಾಥಾ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು.