ಗೋಣಿಕೊಪ್ಪ ವರದಿ, ಅ. ೨೧: ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಹಾಗೂ ಮಾನಿಲ್ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಆಯೋಜಿಸಿರುವ ಕೊಡವ, ಅಮ್ಮಕೊಡವ ವಾಲಿಬಾಲ್ ಟೂರ್ನಿಯಲ್ಲಿ ೧೭ ತಂಡಗಳು ಸೆಣೆಸಾಟ ನಡೆಸಿದವು.

ಸ್ಥಳೀಯ ಕಾಫಿ ಬೆಳೆಗಾರ ತೀತರಮಾಡ ಟಿ. ಜಗದೀಶ್ ಉದ್ಘಾಟಿಸಿದರು. ದಾನಿ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಪಾಲ್ಗೊಂಡು ಮಾತನಾಡಿ, ನಿರಂತರವಾಗಿ ಟೂರ್ನಿ ನಡೆಸುವುದರಿಂದ ಬಾಂಧವ್ಯ ವೃದ್ಧಿಸುತ್ತದೆ ಎಂದರು.

ಸಮಿತಿ ಗೌ. ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್ ಮಾತನಾಡಿ, ಕೈಲ್‌ಪೊಳ್ದ್ ನಮ್ಮೆ ಪ್ರಯುಕ್ತ ಕೊಡವ, ಅಮ್ಮಕೊಡವ ವಾಲಿಬಾಲ್ ಟೂರ್ನಿ ನಡೆಸಲಾಗುತ್ತಿದೆÀ. ೧೦ ವರ್ಷಗಳಲ್ಲಿ ಸಾಕಷ್ಟು ಪ್ರತಿಭೆಗಳು ಪ್ರದರ್ಶನ ನೀಡಿವೆ. ಜನಾಂಗಗಳ ಒಗ್ಗಟ್ಟಿಗೆ ಪೂರಕವಾಗಿದೆ ಎಂದರು.

ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಯುವಕ ಸಂಘ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಪೂವಯ್ಯ ಇದ್ದರು.