ಮಡಿಕೇರಿ, ಅ. ೨೧: ಅಖಿಲ ಕೊಡವ ಸಮಾಜದ ಅಧ್ಯಕ್ಷರಾಗಿ ಹಲವು ದಶಕಗಳ ಕಾಲ ಕಾರ್ಯ ನಿರ್ವಹಿಸುವುದರೊಂದಿಗೆ ಜಿಲ್ಲೆಯ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಗುರುತಿಸಲ್ಪಟ್ಟಿದ್ದ ಕೆದಮುಳ್ಳೂರು ಗ್ರಾಮದವರಾದ ಮಾತಂಡ ಎಂ. ಮೊಣ್ಣಪ್ಪ ಅವರು ಶನಿವಾರದಂದು ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದಾಗಿ ಕೆಲವು ಸಮಯದಿಂದ ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದ ಮೊಣ್ಣಪ್ಪ (೭೬) ಅವರು ಇದೀಗ ಕಣ್ಮರೆಯಾಗಿದ್ದಾರೆ.

ಮೂಲತಃ ಬೊಳ್ಳುಮಾಡು ಗ್ರಾಮದವರಾದ ಕೆದಮುಳ್ಳೂರು ತೋರ ಗ್ರಾಮದಲ್ಲಿ ವಾಸವಿದ್ದ ಇವರು ೧೯೭೩ ರಿಂದ ೨೦೨೨ರ ತನಕ ಅಖಿಲ ಕೊಡವ ಸಮಾಜ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ವರ್ಷವಷ್ಟೇ ಸ್ವಯಂ ನಿವೃತ್ತಿ ಘೋಷಿಸಿದ ಮಾತಂಡ ಮೊಣ್ಣಪ್ಪ ಅವರು ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಕೊಡಗು ಏಕೀಕರಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯಲ್ಲಿ ನಂತರ ತಲಕಾವೇರಿ - ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ, ಬೆಪ್ಪುನಾಡ್ ತಕ್ಕನಾಗಿ, ಬೆಪ್ಪುನಾಡ್ ಕೊಡವ ಸಮಾಜ ಅಧ್ಯಕ್ಷರಾಗಿ, ದೇಶತಕ್ಕರಾಗಿ ಕಾರ್ಯನಿರ್ವಹಿಸಿದ್ದರು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಲವಾರು ಇತರ ಸಂಘ-ಸAಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊಡವ ಸಮಾಜ ಒಕ್ಕೂಟದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಡವ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆರಂಭವಾದ ಹಳ್ಳಿಗಟ್ಟುವಿನ ಸಿ.ಐ.ಟಿ ಕಾಲೇಜು ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಜಮ್ಮ ಸಮಸ್ಯೆ, ಕೋವಿ ಹಕ್ಕಿನ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಇವರು ಜನಪರ ಹೋರಾಟಗಾರರೂ ಆಗಿದ್ದರು. ಎಲ್ಲಾ ಜಾತಿ ಜನಾಂಗದೊAದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಕುಂಜಿಲ ಗ್ರಾಮದ ಮುಖ್ಯ ಶಿಕ್ಷಕಿ ಕೋಟೆರ ಕಮಲ ತಂಗಮ್ಮ ಅವರನ್ನು ವಿವಾಹವಾಗಿದ್ದು ಇವರಿಗೆ ಈರ್ವರು ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ. ತಾ. ೨೨ ರಂದು (ಇಂದು) ಕೆದಮುಳ್ಳೂರು ತೋರದಲ್ಲಿರುವ ಮೃತರ ಸ್ವಗೃಹದಲ್ಲಿ ೧ ಗಂಟೆಯವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನ ನಡೆದು, ಬಳಿಕ ಅಪರಾಹ್ನ ೨ ಗಂಟೆಗೆ ವೀರಾಜಪೇಟೆ ಕೊಡವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಇವರ ನಿಧನಕ್ಕೆ ತಲಕಾವೇರಿ - ಭಾಗಮಂಡಲ ಪುನರ್‌ಪ್ರತಿಷ್ಠಾಪನಾ ಸಮಿತಿಯ ಮಾಜಿ ಗೌರವ ಕಾರ್ಯದರ್ಶಿ, ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಪದಾಧಿಕಾರಿಗಳಾಗಿದ್ದ ಮಂಡೇಪAಡ ಸುಗುಣ ಮುತ್ತಣ್ಣ, ಮಂಡೀರ ದೇವಿ ಪೂಣಚ್ಚ, ಡಾ. ಸಣ್ಣುವಂಡ ಕಾವೇರಪ್ಪ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.