ಮಡಿಕೇರಿ, ಅ. ೨೧: ಪೊಲೀಸ್ ಹುತಾತ್ಮ ದಿನಾಚರಣೆ ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆಯಿತು.

ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಪೊಲೀಸ್ ಇಲಾಖೆ ವಿವಿಧ ವಿಭಾಗವನ್ನು, ಸಾರ್ವಜನಿಕ ವಲಯವನ್ನು ಪ್ರತಿನಿಧಿಸುವವರು ಹಾಗೂ ನಿವೃತ್ತ ಸೇನಾಧಿಕಾರಿ, ಪೊಲೀಸರು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.

ಈ ಸಂದರ್ಭ ಚನ್ನನಾಯಕ ನೇತೃತ್ವದ ಪೊಲೀಸ್ ಪಡೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ (ವಾಲಿ ಫೈಯರಿಂಗ್) ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಭಾರತದ ಗಡಿ ಪ್ರದೇಶ ಲಡಾಕ್‌ನಲ್ಲಿ ಸಿಆರ್‌ಪಿಎಫ್ ಉಪನಿರೀಕ್ಷಕ ಕರುಣ್ ಸಿಂಗ್ ನೇತೃತ್ವದ ತಂಡ ಕರ್ತವ್ಯದ ಸಂದರ್ಭ ಭಾರತದ ಮೇಲೆ ಚೀನಾ ದಾಳಿ ನಡೆಸಿದಾಗ ಸೀಮಿತ ಶಸ್ತಾçಸ್ತçದಲ್ಲಿ ಧೈರ್ಯ ಹಾಗೂ ಸಾಹಸದಿಂದ ಹೋರಾಡಿ ಗಡಿಯನ್ನು ಉಳಿಸಿದರು. ಈ ಸಂದರ್ಭ ೧೦ ಮಂದಿ ಮೃತಪಟ್ಟು, ೯ ಮಂದಿ ಗಾಯಗೊಂಡರು. ಅವರ ದಿಟ್ಟ ಸಾಹಸ, ಶೌರ್ಯವನ್ನು ಸ್ಮರಿಸಲು ಸ್ಮಾರಕ ನಿರ್ಮಿಸಲಾಯಿತು. ಈ ಹಿನ್ನೆಲೆ ಪ್ರತಿವರ್ಷ ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಕಳೆದ ಒಂದು ವರ್ಷದಲ್ಲಿ ಕರ್ತವ್ಯದ ಸಂದರ್ಭ ರಾಜ್ಯದಲ್ಲಿ ೧೧ ಸೇರಿದಂತೆ ದೇಶದಲ್ಲಿ ೧೨೯ ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹೇಳಿದ ಅವರು, ಅಪರಾಧ ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣೀತ್ ನೇಗಿ, ಪ್ರಾಣತ್ಯಾಗ ಮಾಡಿದ ಪೊಲೀಸರ ಸೇವೆಯನ್ನು ನಿತ್ಯ ಸ್ಮರಿಸಬೇಕು. ಪೊಲೀಸ್ ಹುದ್ದೆ ಕಷ್ಟದ ಕೆಲಸ. ಆಂತರಿಕ ದುಷ್ಟಶಕ್ತಿಗಳನ್ನು ದಮನ ಮಾಡುವುದರಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಪೊಲೀಸ್ ಇಲಾಖೆ ವಿವಿಧ ವಿಭಾಗಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಅಪರಾಧ ತಡೆಗೆ ಶ್ರಮಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್ಪಿ ಜಗದೀಶ್, ನಗರಸಭಾ ಅಧ್ಯಕ್ಷೆ ನೆರವಂಡ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅನಿತಾ ಪೂವಯ್ಯ, ಪೊಲೀಸ್ ಇಲಾಖೆ ಸಹಾಯಕ ಆಡಳಿತಾಧಿಕಾರಿ ನಂಜುAಡ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಶ್ರೀಧರ್, ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಪೂಣಚ್ಚ, ವಾರ್ತಾಧಿಕಾರಿ ಚಿನ್ನಸ್ವಾಮಿ, ಫೆಡರೇಷನ್ ಆಫ್ ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ವಕೀಲರ ಸಂಘದ ಅಧ್ಯಕ್ಷ ನಿರಂಜನ್, ರೋಟರಿ ಕ್ಲಬ್ ಅಧ್ಯಕ್ಷೆ ಗೀತಾ ಗಿರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಮಧುಕರ್ ಶೇಟ್, ಚೇಂಬರ್ ಆಫ್ ಕಾಮರ್ಸ್ನ ಅಂಬೇಕಲ್ ನವೀನ್ ಕುಶಾಲಪ್ಪ, ನಿವೃತ್ತ ಎಸಿಪಿ ಮೊಣ್ಣಪ್ಪ ಸೇರಿದಂತೆ ಇನ್ನಿತರರು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.