ಮಡಿಕೇರಿ, ಅ. ೨೧: ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪ ಶೋಭಾಯಾತ್ರೆಯನ್ನು ನಿಯಮ ಪಾಲನೆಯೊಂದಿಗೆ, ಸಾಮಾಜಿಕ ಬದ್ಧತೆ ವಹಿಸಿ ನಡೆಸಲಾಗುವುದು ಎಂದು ಮಡಿಕೇರಿ ದಶಮಂಟಪ ಸಮಿತಿ ಅಧ್ಯಕ್ಷ ಹೆಚ್. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸ ಬೇಕಾಗಿರುವುದು ನಮ್ಮ ಕರ್ತವ್ಯ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪೊಲೀಸ್ ಇಲಾಖೆ ಕೂಡ ನಮ್ಮೊಂದಿಗೆ ಸಹಕಾರ ನೀಡುತ್ತಿದೆ. ಈ ನಿಟ್ಟಿನಲ್ಲಿ ನಿಯಮ ಪಾಲನೆ ನಮ್ಮ ಆದ್ಯತೆಯಾಗಿದೆ. ಮಂಟಪಗಳಲ್ಲಿ ನಿಯಮಿತವಾಗಿ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ. ಲೇಸರ್ ಲೈಟ್ ಬಳಕೆ, ಹೆಚ್ಚುವರಿ ಕ್ರೇನ್ ಬಳಕೆ, ಪಟಾಕಿ ಬಳಕೆಗೆ ನಿಷೇಧ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಂಟಪಗಳು ಕಡ್ಡಾಯವಾಗಿ ೨ ಟ್ರಾö್ಯಕ್ಟರ್ಗಳನ್ನು ಮಾತ್ರ ಬಳಸಬೇಕು, ಟ್ರಾö್ಯಕ್ಟರ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳಲ್ಲಿ ಕಲಾಕೃತಿ ಪ್ರದರ್ಶಿಸುವಂತಿಲ್ಲ, ಚಲನವಲನಕ್ಕೆ ಬಳಸುವ ಕ್ರೇನ್ಗಳನ್ನು ಟ್ರಾö್ಯಕ್ಟರ್ ನಲ್ಲಿಯೇ ಅಳವಡಿಸಬೇಕು, ೧ ವಾಹನ ಹಾಗೂ ಬೆಳಕಿನ ವ್ಯವಸ್ಥೆಗೆ ಒಂದು ಲಘು ವಾಹನ ಬಳಸಬಹುದು, ಬೆಳಕಿನ ವ್ಯವಸ್ಥೆ ಹಾಗೂ ಧ್ವನಿವರ್ಧಕಕ್ಕೆ ಯಾವುದೇ ಕಟ್ಟಡ ಉಪಯೋಗಿ ಸಿಕೊಳ್ಳುವಂತಿಲ್ಲ, ಕಲಾಕೃತಿಗಳನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ನಿಲ್ಲಿಸಿ ಪ್ರದರ್ಶನ ಮಾಡುವಂತಿಲ್ಲ. ಎಲ್ಲವೂ ೨ ಟ್ರಾö್ಯಕ್ಟರ್ನಲ್ಲೇ ಇರಬೇಕು, ಮಂಟಪಗಳಲ್ಲಿ ಅಬ್ಬರ ಧ್ವನಿ ಬಳಕೆಯಲ್ಲಿ ಪೊಲೀಸ್ ಇಲಾಖೆ ನಿಯಮದಂತೆ ಇತಿಮಿತಿ ಅನುಸರಿಸಬೇಕು, ಪಾಶ್ಚಾತ್ಯ ಸಂಗೀತ, ಚಿತ್ರಗೀತೆ ಹೊರತುಪಡಿಸಿ ಭಕ್ತಿ ಗೀತೆಗೂ ಪ್ರಾತಿನಿದ್ಯ ನೀಡಬೇಕು, ಮಂಟಪಗಳಲ್ಲಿ ಅಪಾಯಕಾರಿ ಸಿಡಿಮದ್ದು ಬಳಸುವಂತಿಲ್ಲ, ತೀರ್ಪುಗಾರರು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬಂದಾಗ ಪ್ರದರ್ಶನ ಮತ್ತು ವೀಕ್ಷಣೆಗೆ ಸಮಿತಿ ಪದಾಧಿಕಾರಿಗಳೆ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ಪ್ರತಿ ಮಂಟಪ ಸಮಿತಿಯವರ ಮಂಟಪದ ಕಥಾಸಾರಾಂಶವನ್ನು ನಾಲ್ಕು ದಿನ ಮುನ್ನ ತೀರ್ಪುಗಾರರಿಗೆ ನೀಡಬೇಕು, ಸಮಯ ಪಾಲನೆ ದೃಷ್ಠಿಯಿಂದ ಪ್ರದರ್ಶನದ ಅವಧಿಯಲ್ಲಿ ೨೨ ನಿಮಿಷಕ್ಕೆ ಸೀಮಿತಗೊಳಿಸಬೇಕು, ಇತರ ಮಂಟಪದ ಪ್ರದರ್ಶನದ ಸಂದರ್ಭ ಹಿಂದೆ ಹಾಗೂ ಮುಂದೆ ಇರುವ ಮಂಟಪಗಳು ತಮ್ಮ ಧ್ವನಿವರ್ಧಕವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು, ಪ್ರತಿ ಮಂಟಪವೂ ದೇವಾಲಯದ ಆವರಣದಲ್ಲಿ ಮಂಟಪ ತಯಾರಿ ನಡೆಸಿ ಶೋಭಾಯಾತ್ರೆಗೆ ಆಗಮಿಸಬೇಕು ಎಂದರು.
ಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಜಗದೀಶ್, ಕಾರ್ಯದರ್ಶಿ ಆನಂದ್, ರಘುಪತಿ, ಕೋದಂಡರಾಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಗೋಪಿನಾಥ್ ಹಾಜರಿದ್ದರು.
ಎಲ್ಲೆಲ್ಲಿ ತೀರ್ಪುಗಾರಿಕೆ ಪ್ರದರ್ಶನ?
೧೦ ಮಂಟಪಗಳಿಗೂ ತೀರ್ಪುಗಾರಿಗೆ ಸ್ಥಳವನ್ನು ನಿಗದಿ ಮಾಡಲಾಗಿದ್ದು, ಅಲ್ಲಲ್ಲಿಯೇ ಪ್ರದರ್ಶನ ನೀಡಬೇಕು. ಜೊತೆಗೆ ಕನಿಷ್ಟ ೪ ರಿಂದ ೫ ಪ್ರದರ್ಶನ ಜನರಿಗೆ ನೀಡಬೇಕೆಂದು ದಶಮಂಟಪ ಸಮಿತಿ ಮನವಿ ಮಾಡಿದೆ. ಹೆಚ್ಚು ಪ್ರದರ್ಶನ ನೀಡುವ ಸಮಿತಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಮಂಜುನಾಥ್ ತಿಳಿಸಿದ್ದಾರೆ. ಶ್ರೀಪೇಟೆ ರಾಮಮಂದಿರಕ್ಕೆ ರಾತ್ರಿ ೧೦ ಗಂಟೆಗೆ ಗಾಂಧಿ ಮೈದಾನ ಮುಂಭಾಗ, ೧೧ ಗಂಟೆಗೆ ದೇಚೂರು ಶ್ರೀರಾಮಮಂದಿರಕ್ಕೆ ೩ಐದನೇ ಪುಟಕ್ಕೆ
ಎಲ್ಲೆಲ್ಲಿ ತೀರ್ಪುಗಾರಿಕೆ ಪ್ರದರ್ಶನ?
೧೦ ಮಂಟಪಗಳಿಗೂ ತೀರ್ಪುಗಾರಿಗೆ ಸ್ಥಳವನ್ನು ನಿಗದಿ ಮಾಡಲಾಗಿದ್ದು, ಅಲ್ಲಲ್ಲಿಯೇ ಪ್ರದರ್ಶನ ನೀಡಬೇಕು. ಜೊತೆಗೆ ಕನಿಷ್ಟ ೪ ರಿಂದ ೫ ಪ್ರದರ್ಶನ ಜನರಿಗೆ ನೀಡಬೇಕೆಂದು ದಶಮಂಟಪ ಸಮಿತಿ ಮನವಿ ಮಾಡಿದೆ. ಹೆಚ್ಚು ಪ್ರದರ್ಶನ ನೀಡುವ ಸಮಿತಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಮಂಜುನಾಥ್ ತಿಳಿಸಿದ್ದಾರೆ. ಶ್ರೀಪೇಟೆ ರಾಮಮಂದಿರಕ್ಕೆ ರಾತ್ರಿ ೧೦ ಗಂಟೆಗೆ ಗಾಂಧಿ ಮೈದಾನ ಮುಂಭಾಗ, ೧೧ ಗಂಟೆಗೆ ದೇಚೂರು ಶ್ರೀರಾಮಮಂದಿರಕ್ಕೆ ೩ಐದನೇ ಪುಟಕ್ಕೆ
ಎಲ್ಲೆಲ್ಲಿ ತೀರ್ಪುಗಾರಿಕೆ ಪ್ರದರ್ಶನ?
(ಮೊದಲ ಪುಟದಿಂದ) ಆಂಜನೇಯ ದೇವಾಲಯ ಮುಂಭಾಗ, ಶ್ರೀ ಕೋಟೆ ಗಣಪತಿ ೧೧.೪೫ಕ್ಕೆ ನಗರ ಪೊಲೀಸ್ ಠಾಣೆ ಮುಂಭಾಗ, ೧೨.೩೦ಕ್ಕೆ ಶ್ರೀಚೌಡೇಶ್ವರಿ ದೇವಾಲಯ ಹೊಟೇಲ್ ಪಾಪ್ಯುಲರ್ ಮುಂಭಾಗ, ಶ್ರೀ ಕೋಟೆ ಮಾರಿಯಮ್ಮ ೧.೧೫ಕ್ಕೆ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣ ಮುಂಭಾಗ, ಶ್ರೀ ಕೋದಂಡ ರಾಮ ದೇವಾಲಯ ೧.೪೫ಕ್ಕೆ ಮೆಟ್ರೋ ಫ್ರೆಶ್ ಮುಂಭಾಗ, ಶ್ರೀ ಕರವಲೆ ಭಗವತಿ ೨.೧೫ಕ್ಕೆ ಸಿಂಧೂರ್ ಬಟ್ಟೆ ಮಳಿಗೆ ಮುಂಭಾಗ, ೩ ಗಂಟೆಗೆ ದಂಡಿನ ಮಾರಿಯಮ್ಮ ಸಮಿತಿ ಕೊಡವ ಸಮಾಜ ಮುಂಭಾಗ, ಶ್ರೀ ಕಂಚಿಕಾಮಾಕ್ಷಿ ದೇವಾಲಯ ೩.೩೦ಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ, ಶ್ರೀ ಚೌಟಿ ಮಾರಿಯಮ್ಮ ೪ ಗಂಟೆಗೆ ಕಾವೇರಿ ಕಲಾಕ್ಷೇತ್ರ ಮುಂಭಾಗ ಪ್ರದರ್ಶನ ನೀಡಬೇಕಾಗಿದೆ.
ತೀರ್ಪುಗಾರರು ಆಗಮಿಸಿ ೫ ನಿಮಿಷಗಳಲ್ಲಿ ಮಂಟಪ ಸಿದ್ಧತೆ ಆಗದಿದ್ದಲ್ಲಿ ತೀರ್ಪುಗಾರರು ತೀರ್ಪುಗಾರಿಕೆ ನೀಡದೆ ಮುಂದೆ ತೆರಳಲಿದ್ದಾರೆ ಎಂದು ಹೇಳಿದರು.