ಮಡಿಕೇರಿ, ಅ. ೨೧: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ಹಂತ ಕುಂದದಿAದ ಆರಂಭಗೊAಡಿತು.
ಬೊಟ್ಟಿಯತ್ನಾಡ್ (ಕುಂದ), ಕುತ್ನಾಡ್ (ಬಿ. ಶೆಟ್ಟಿಗೇರಿ) ಮತ್ತು ಬೆರಳಿನಾಡ್(ಕಂಡAಗಾಲ)ನ ಮೂರು ನಾಡುಗಳ ಮಂದ್ ``ಕೈಮುಡಿಕೆ ಮಂದ್"ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಯಿತು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಭೆ ಆರಂಭಿಸಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಕೊಡವ ಲ್ಯಾಂಡ್ ಸೇರಿದಂತೆ ೯ ಬೇಡಿಕೆಗಳ ಹಕ್ಕೊತ್ತಾಯಗಳನ್ನು ವಿವರಿಸಿದರು.
ಕೊಡವರು ಕೊಡವ ನೆಲದ ಪ್ರಾಚೀನ ಬುಡಕಟ್ಟು ಜನರಾಗಿದ್ದು, ಕೊಡವ ಮಂದ್ಗಳು, ಜಲದೇವತೆ ಕಾವೇರಿ, ಸೂರ್ಯ, ಚಂದ್ರ, ಭೂಮಿತಾಯಿಯಷ್ಟೇ ಪವಿತ್ರವೂ ಆಗಿದ್ದಾರೆ. ಪ್ರಾಚೀನ ಬುಡಕಟ್ಟು ಕೊಡವ ಜನಾಂಗವನ್ನು ಈ ದೇಶದ ಜನ ಹಾಗೂ ಸರ್ಕಾರ ಸಂವಿಧಾನದ ೫೧ ಎ.ಎಫ್. ವಿಧಿ ಮತ್ತು ವಿಶ್ವ ರಾಷ್ಟç ಸಂಸ್ಥೆಯ ಸನದ್ನ ಪ್ರಕಾರ ರಕ್ಷಿಸಿ ಪೋಷಿಸಿ ಕಾಪಾಡಬೇಕಾಗಿದೆ ಎಂದರು.
ಪಾದಯಾತ್ರೆಯಲ್ಲಿ ಕಡೆಮಾಡ ಕುಸುಮ್ ಜೋಯಪ್ಪ, ಅಜ್ಜಿನಿಕಂಡ ಇನಿತಾ ಮಾಚಯ್ಯ, ನಾಡ್ ತಕ್ಕರಾದ ಪಂದಿಮಾಡ ರಮೇಶ್, ನಾಡ್ ತಕ್ಕ ಅಡ್ಡಂಡ ಪ್ರಕಾಶ್, ತೀತಮಾಡ ವಾಸು, ಕೊಲ್ಲಿರ ಬೋಪಣ್ಣ, ಕಡೆಮಾಡ ಅನಿಲ್, ತೀತಮಾಡ ಪೂವಣ್ಣ, ತೀತಮಾಡ ಕರುಂಬಯ್ಯ, ತೀತಮಾಡ ಉಮೇಶ್, ತೀತಮಾಡ ಗಣೇಶ್, ತೀತಮಾಡ ಅಮಿತ್ ಉತ್ತಪ್ಪ, ನಾಮೇರ ಗಣೇಶ್, ಚೆಪುö್ಪಡಿರ ಸುನಿಲ್ ತಿಮ್ಮಯ್ಯ, ಕರ್ತಮಾಡ ಪವನ್ ಚೆಂಗಪ್ಪ, ತೀತಿಮಾಡ ಗಾಂಧಿ ಗಣೇಶ್, ಕಡೇಮಾಡ ಪೊನ್ನಪ್ಪ, ನಾಮೇರ ಕಾವೇರಪ್ಪ, ಮದ್ರಿರ ಗಿರೀಶ್ ಗಣಪತಿ, ಚೊಟ್ಟೆಪಂಡ ಶರತ್, ಅಪ್ಪೆಯಂಗಡ ಮಾಲೆ, ಕಾಂಡೇರ ಸುರೇಶ್, ಕಿರಿಯಮಾಡ ಶರಿನ್, ಮದ್ರಿರ ಕರುಂಬಯ್ಯ, ಅಜ್ಜಿನಿಕಂಡ ಮಾಚಯ್ಯ, ಅರೆಯಡ ಗಿರೀಶ್, ಚಂಬAಡ ಜನತ್, ಅಪ್ಪಾರಂಡ ತಿಮ್ಮಯ್ಯ, ಅರೆಯಡ ಸಾವನ್, ಗುಮ್ಮಟ್ಟಿರ ಕಿಲನ್, ಕಡೇಮಾಡ ಅಕ್ಷಯ್, ಕಡೇಮಾಡ ದೇವಯ್ಯ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪು ಮತ್ತು ಕೋವಿಯೊಂದಿಗೆ ಪಾಲ್ಗೊಂಡರು. ಸಭೆಯಲ್ಲಿ ೯ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.