ವೀರಾಜಪೇಟೆ, ಅ. ೨೧ : ಮದ್ಯದ ಅಮಲಿನಲ್ಲಿ ಯುವಕನೋರ್ವ ರಾತ್ರಿ ವೇಳೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ರಾಮನಗರ ಗ್ರಾಮ ದಲ್ಲಿ ನಡೆದಿದೆ. ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಹೆಗ್ಗಳ ಗ್ರಾಮದ ನಿವಾಸಿ ಪ್ರದೀಶ್ (೩೧) ನೇಣಿಗೆ ಶರಣಾದ ಯುವಕ.
ಮೃತ ಯುವಕ ಕೂಲಿ ಕಾರ್ಮಿಕನಾಗಿದ್ದು, ಮದ್ಯಪಾನ ಮಾಡುವ ಚಟವಿತ್ತು ಎನ್ನಲಾಗಿದೆ. ಮೂರು ಬಾರಿ ಆತ್ಮಹತ್ಯೆ ಮಾಡಿ ಕೊಳ್ಳಲು ಮುಂದಾಗಿದ್ದ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ತಾ. ೨೦ ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಆಗಮಿಸಿ ತಾಯಿಯೊಂದಿಗೆ ಜಗಳ ವಾಡಿದ್ದು, ತಾಯಿ ರಾತ್ರಿಯ ಊಟ ಮುಗಿಸಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪ್ರದೀಶ್ ತಾಯಿಯ ಸೀರೆಯನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀರಾಜಪೇಟೆ ನಗರ ಠಾಣೆಯಲ್ಲಿ ಮೃತನ ತಾಯಿ ರಾಧ ನೀಡಿರುವ ದೂರಿನ ಅನ್ವಯ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.