ಕುಶಾಲನಗರ, ಅ. ೨೧: ಕುಶಾಲನಗರ ಮಡಿಕೇರಿ ರಸ್ತೆಯ ಕಾವೇರಿ ನಿಸರ್ಗಧಾಮ ಬಳಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಆದ ಘಟನೆ ನಡೆದಿದೆ.
ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ (ಏಂ೧೨ಃ೯೫೪೬) ಮತ್ತು ಮಡಿಕೇರಿಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ (ಏಂ ೪೨ಆ ೦೩೫೮) ಡಿಕ್ಕಿಯಾಗಿದ್ದು, ವಾಹನಗಳಿಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ.
ಈ ಸಂದರ್ಭ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸುವಲ್ಲಿ ಕ್ರಮ ಕೈಗೊಂಡರು.
ಲಾರಿ ಚಾಲಕನ ಅತಿ ವೇಗ, ನಿರ್ಲಕ್ಷö್ಯ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಚಾಲಕ ಶಿವರಾಜ ಎಂಬವರು ದೂರು ನೀಡಿದ್ದು ಲಾರಿ ಚಾಲಕ ಮಹಮ್ಮದ್ ಎಂಬಾತನ ಮೇಲೆ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸAಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ ಮತ್ತು ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.