ಗೋಣಿಕೊಪ್ಪಲು, ಅ. ೨೧: ಸಾಕಷ್ಟು ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಗಳಿಗೆ ವಿರಾಮ ಹೇಳುವ ಮೂಲಕ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆದ ಮಹಿಳಾ ದಸರಾದಲ್ಲಿ ಪಾಲ್ಗೊಂಡು ಸಂಭ್ರಮದಿAದ ದಿನ ಕಳೆದರು.

ಮುಂಜಾನೆಯಿAದಲೇ ನಗರದ ಪ್ರಾಥಮಿಕ ಶಾಲಾ ಮೈದಾನಕ್ಕೆ ಆಗಮಿಸಿದ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೆಚ್ಚಿನ ತಂಡಗಳು ಭಾಗವಹಿಸುವ ಮೂಲಕ ಮಹಿಳೆಯರು ಶಕ್ತಿ ಪ್ರದರ್ಶನ ತೋರಿದರು.

ಬಿಸಿಲನ್ನು ಲೆಕ್ಕಿಸದ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಹಾಕಿ ಕೂರ್ಗ್ ಉಪಾಧ್ಯಕ್ಷರಾದ ಮಾಪಂಗಡ ಯಮುನಾ ಚಂಗಪ್ಪ ಹಾಗೂ ಅತಿಥಿಗಳು ಒಂದು ತಂಡವಾಗಿ ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿ ಗಮನ ಸೆಳೆದರು.

ಪ್ರದರ್ಶನ ಪಂದ್ಯದಲ್ಲಿ ಅತಿಥಿಗಳ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಮಹಿಳೆಯರ ಥ್ರೋಬಾಲ್‌ನಲ್ಲಿ ಗ್ರಾಮೀಣ ಭಾಗದ ವಿವಿಧ ತಂಡಗಳು ಭಾಗವಹಿಸಿ ತೀವ್ರ ಪೈಪೋಟಿ ನೀಡಿದವು. ಮನ್ನಕ್ಕಮನೆ ಸೌಮ್ಯಬಾಲು ಅಧ್ಯಕ್ಷತೆಯಲ್ಲಿ ೮ ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಮಾಜಿ ೩ಐದನೇ ಪುಟಕ್ಕೆ (ಮೊದಲ ಪುಟದಿಂದ) ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಪಕ್ಷದ ಶಿಸ್ತು ಸಮಿತಿ ಸದಸ್ಯರಾದ ಪಟ್ಟಡ ರೀನಾ ಪ್ರಕಾಶ್, ಹಾಕಿ ಕೂರ್ಗ್ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಡಾ. ಗ್ರೀಷ್ಮ ಬೋಜಮ್ಮ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೆರ ಉತ್ತರೆ ಅಪ್ಪಚ್ಚು, ಗ್ರಾ.ಪಂ. ಉಪಾಧ್ಯಕ್ಷೆ ವೈ.ಎಂ.ಸವಿತ, ಸದಸ್ಯೆ ಚೈತ್ರ ಬಿ.ಚೇತನ್ ಉಪಸ್ಥಿತರಿದ್ದರು.

ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಾರ್ಯದರ್ಶಿ ಕೊಣಿ ಯಂಡ ಬೋಜಮ್ಮ, ಸ್ವಾಗತಿಸಿ, ವಂದಿಸಿದರು.ಮಹಿಳಾ ದಸರಾ ಅಂಗವಾಗಿ ಹೂವಿನ ಅಲಂಕಾರ ಸ್ಪರ್ಧೆ, ನೃತ್ಯ ಸ್ಪರ್ಧೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದವು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಸಾಹಿತಿ ರಜಿತಾ ಕಾರ್ಯಪ್ಪ, ಮಹಿಳಾ ಪತ್ರಿಕಾ ವಿತರಕಿ ಜಮುನಾ ವಸಂತ್, ಗಾಯಕಿ ಪುತ್ತಮನೆ ವಿದ್ಯಾಜಗದೀಶ್, ನ್ಯಾಷನಲ್ ಅಕಾಡೆಮಿ ಮುಖ್ಯಸ್ಥೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಹಿರಿಯ ಪೌರಕಾರ್ಮಿಕರಾದ ಗೌರಿ ಗಣೇಶ್, ಕ್ರೀಡಾ ಸಾಧಕಿ ಎಂ. ಮಾಚಮ್ಮ, ಸೂಪರ್ ಸ್ಟಾರ್ ರೈತ ಮಹಿಳೆ ರಶ್ಮಿ ಭಾನುಪ್ರಕಾಶ್, ಕ್ರೀಡಾ ಸಾಧಕಿ ತೆಕ್ಕಡೆ ತುಳಸಿ, ಪ್ರಥಮ ಉದ್ಯೋಗ ಖಾತ್ರಿ ಗುತ್ತಿಗೆದಾರ ಮಹಿಳೆ ಧನಲಕ್ಷಿö್ಮ, ಅಥ್ಲೆಟಿಕ್ ಶ್ರಾವ್ಯ ನಾಚಪ್ಪ, ಮಹಿಳಾ ಛಾಯಾಗ್ರಾಹಕಿ ಜಯಲಕ್ಷಿö್ಮ, ಯೋಗ ಸಾಧಕಿ ಅಮೃತ ರಾಕೇಶ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಹಿಳಾ ದಸರಾ ಸಮಿತಿ ಸದಸ್ಯರುಗಳಾದ ಧನಲಕ್ಷಿö್ಮ, ಕೊಣಿಯಂಡ ಬೋಜಮ್ಮ ಉತ್ತಪ್ಪ, ನೂರೇರ ಧನ್ಯ ರವೀಂದ್ರ, ಮಂಜುಳ.ಎA, ನೂರೇರ ರತಿ ಅಚ್ಚಪ್ಪ, ಪುಷ್ಪ ಮನೋಜ್, ಸಪೂರ ಭಾನು, ಸುಲೈಖ, ಗೀತಾ ಜಿ.ಕೆ ಹಾಜರಿದ್ದರು. ಶಿಕ್ಷಕಿ ಆಲೀಮ ಯೋಗಾಭ್ಯಾಸದ ಬಗ್ಗೆ ಮಾಹಿತಿ ನೀಡಿದರು. ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. - ಹೆಚ್.ಕೆ.ಜಗದೀಶ್