ಭಾಗಮಂಡಲ, ಅ. ೨೧: ೩೨ ರಾಷ್ಟçಗಳು ಭಾಗವಹಿಸುತ್ತಿರುವ ಯುಎಇ ನಲ್ಲಿ ನಡೆಯಲಿರುವ ಮಿನಿ ಫುಟ್ಬಾಲ್ ವರ್ಲ್ಡ್ ಕಪ್ ೨೦೨೩ರಲ್ಲಿ ಆಟವಾಡಲು ರಾಷ್ಟಿçÃಯ ತಂಡದ ಪರವಾಗಿ ಜಿಲ್ಲೆಯ ಈರ್ವರು ಆಯ್ಕೆಯಾಗಿದ್ದಾರೆ. ಯು.ಎ.ಇ ನಲ್ಲಿ ಅಕ್ಟೋಬರ್ ೨೬ ರಿಂದ ನವಂಬರ್ ೪ ರವರೆಗೆ ವರ್ಲ್ಡ್ ಕಪ್ ಟೂರ್ನಿ ನಡೆಯಲಿದ್ದು, ಕೊಡಗಿನ ಬಲ್ಲಮಾವಟಿಯ ವೇದಾಂತ ಹಾಗೂ ಕುಶಾಲನಗರದ ಶಾಹಿಬ್ ಆಯ್ಕೆಯಾಗಿದ್ದಾರೆ.
ವೇದಾಂತ್, ಬಲ್ಲಮಾವಟಿಯ ಎಡಿಕೇರಿ ಜಗನ್ನಾಥ್-ವಸಂತಿ ದಂಪ ತಿಯ ಪುತ್ರ. ಶಾಹಿಬ್, ಅಮೀರ್ ಹಾಗೂ ನೂರ್ಜಾನ್ ದಂಪತಿಯ ಪುತ್ರ.