ದೇವ-ಮಾನವ, ಸುರ-ಅಸುರರ ಸಂಘರ್ಷದ ಕತೆಗಳು ಭಿನ್ನ-ಭಿನ್ನ ಸ್ವರೂಪ ಹಾಗೂ ನೆಲೆಗಳಲ್ಲಿ ಪ್ರತಿಬಿಂಬಿತವಾಗಿವೆ. ಅನಾದಿಕಾಲ ದಿಂದಲೂ ಭರತಖಂಡದಲ್ಲಿ ಶಕ್ತಿ ಪೂಜೋತ್ಸವವು ಅಖಂಡವಾಗಿ ನಡೆದು ಬಂದಿರುತ್ತದೆ. ಶಕ್ತಿ ದೇವಿಯ ಆರಾಧನೆ ಮೂಲಕ ರಾಕ್ಷಸೀ ಪ್ರವೃತ್ತಿಯ ವಿರುದ್ಧ ಹೋರಾಟಕ್ಕೆ ಬಲ ಮೂಡುತ್ತದೆ. ಆ ಚೈತನ್ಯ ಭರಿತ ಶಕ್ತಿಯನ್ನೇ ನಾವು ದೇವರು ಎಂದು ಪೂಜಿಸುವದು. ಆ ದೈವವನ್ನು ಒಲಿಸಿಕೊಳ್ಳಲು ಸಾಕ್ಷಾತ್ಕರಿಸಿಕೊಳ್ಳಲು ಹಲವು ಮಾರ್ಗಗಳಿವೆ. ಜಪ-ತಪ-ಧ್ಯಾನ-ಪೂಜೆ-ಸ್ತೋತ್ರ ಇತ್ಯಾದಿ. ಎಲ್ಲದರ ಉದ್ದೇಶ ಆ ಪರತತ್ವವನ್ನು ಹೊಂದುವದು. ಭಕ್ತರು ಕಲ್ಪಿಸಿದ ರೂಪದಲ್ಲಿ ಪ್ರಕಟವಾಗಿ ಅವರನ್ನು ಅನುಗ್ರಹಿಸುವದೇ ಪರತತ್ವ ಅಥವಾ ಪರಬ್ರಹ್ಮನ ಕಾರ್ಯ. ಅಂತೆಯೇ ಪರಬ್ರಹ್ಮ ಸ್ವರೂಪಿಣಿಯಾದ ಜಗನ್ಮಾತೆಯು ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳಿಗಾಗಿ ದುಷ್ಟ ನಿಗ್ರಹ-ಶಿಷ್ಟ ರಕ್ಷಣೆಗಾಗಿ ಅನೇಕ ಅವತಾರ ಗಳನ್ನೆತ್ತಿರುವಳು. ಎಲ್ಲಾ ಅವತಾರ ಗಳು ಪರಬ್ರಹ್ಮ ತತ್ವವೊಂದರಿAದಲೇ ಆವಿರ್ಭವಿಸಿ ಅದನ್ನೆ ಪ್ರತಿಪಾದಿಸುತ್ತದೆ.
ಹಿಂದೂ ಸಂಸ್ಕೃತಿಯ ಪ್ರಸಿದ್ಧ ಉತ್ಸವ, ಆಚರಣೆ ಗಳಲ್ಲಿ ಶಕ್ತಿಯ ಆರಾಧನೆಯ ನವರಾತ್ರಿ ಅಥವಾ ದಸರಾ ಮಹತ್ವವನ್ನು ಪಡೆದುಕೊಂಡಿರುವAತಹ ಪರ್ವ. ಆಸುರೀ ಶಕ್ತಿಗಳ ಮೇಲೆ ದೈವೀ ಶಕ್ತಿಯ ಸಮರವನ್ನು ಸಾರಿ ಹೇಳುವ ಹಬ್ಬ. ಶರದೃತುವಿನ ಆಶ್ವಯುಜ ಶುದ್ಧ ಪ್ರತಿಪದೆಯಿಂದ ನವದಿನ ಪರ್ಯಂತ ಅಚರಿಸುವ ಪರ್ವವೇ ‘ಶರನ್ನವರಾತ್ರಿ’. ಜೀವನದಲ್ಲಿ ನವತ್ವವನ್ನುಂಟು ಮಾಡುವ ಹಬ್ಬ ನವರಾತ್ರಿಯಾಗಿದೆ. ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನ ದುಃಖನಾಶಿನಿಯಾದ ದುರ್ಗಾಪೂಜೆಯ ಆರಾಧನೆ ಯೊಂದಿಗೆ ಶ್ರದ್ಧೆ ತೋರಿದರೆ, ಜನ್ಮಾಂತರಗಳ ಪ್ರಾರಬ್ಧ ನಾಶವಾಗುತ್ತದೆ. ಅನಂತರ ಸುಕೃತ-ಸನ್ಮಂಗಳಕ್ಕಾಗಿ ಮಹಾಲಕ್ಷಿö್ಮಯನ್ನು ಮೂರು ದಿನ ಪೂಜಿಸುತ್ತಾರೆ. ಲಕ್ಷಿö್ಮÃ ಪ್ರಸನ್ನಳಾದರೆ ಮಾತ್ರ ಸುಖ-ಸಂತೋಷ ಸಾಧ್ಯ. ಜ್ಞಾನ ಪ್ರಾಪ್ತಿಯಾಗದೇ ಸ್ವ-ಸ್ವರೂಪದ ಅರಿವು ಆಗುವದಿಲ್ಲ, ಅದಕ್ಕಾಗಿ ಸುಜ್ಞಾನ ಪ್ರಾಪ್ತಿಗಾಗಿ ವಿದ್ಯಾಧಿದೇವತೆ ಶಾರದೆಯ ಆರಾಧನೆಯನ್ನು ಮೂರು ದಿನ ಮಾಡಲಾಗುತ್ತದೆ. ಈ ದೇವತೆಗಳನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿದಾಗ ಪೂರ್ಣಸ್ವರೂಪ ಜ್ಞಾನ ಉಂಟಾಗಿ ಇಹಪರ ಸೌಖ್ಯ ಹೊಂದಲು ಸಾಧ್ಯ.
ದುರ್ಗಾಪೂಜೆಯಿಂದ ಕೇವಲ ಐಹಿಕ ಸುಖಗಳಷ್ಟೇ ಅಲ್ಲದೇ ಹಂತಹAತವಾಗಿ ಅಧ್ಯಾತ್ಮಿಕ ಪ್ರಗತಿಯತ್ತ ಸಾಗುವದು ಸಾಧಕರ ಗುರಿಯಾಗಿ ರುತ್ತದೆ. ನವರಾತ್ರಿಯ ಮೊದಲ ದಿನ ನವದುರ್ಗೆಯರಲ್ಲಿ ಮೊದಲನೆಯವ ಳಾದ ‘ಶೈಲಪುತ್ರಿ’ಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಸಾಧಕರು ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ದುರ್ಗಾದೇವಿಯ ಎರಡನೆಯ ಸ್ವರೂಪ ‘ಬ್ರಹ್ಮಚಾರಿಣಿ’. ಬಿದಿಗೆ ಅಥವಾ ದ್ವಿತೀಯ ತಿಥಿಯಲ್ಲಿ ಈಕೆಯ ಪೂಜೆ. ಅಂದು ಸಾಧಕನ ಮನಸ್ಸು ‘ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ದೇವಿಯ ಕೃಪೆಯಿಂದ ಆತನಿಗೆ ಸ್ಥಿರ ಬುದ್ಧಿಯು ಮೂಡುತ್ತದೆ. ದೇವಿಯ ಮೂರನೆಯ ಸ್ವರೂಪ ‘ಚಂದ್ರಘAಟಾ’. ತೃತೀಯ ದಿನದಂದು ಈಕೆಯ ಪೂಜೆ ನಡೆಯುತ್ತದೆ. ಅಂದು ಸಾಧಕನ ಮನಸ್ಸು ‘ಮಣಿಪೂರ’ ಚಕ್ರವನ್ನು ಪ್ರವೇಶಿಸುತ್ತದೆ. ಆಗ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ಈಕೆಯ ಘಂಟಾ ಧ್ವನಿಯು ಭಕ್ತರ ಪ್ರೇತಬಾಧೆಗಳನ್ನು ನಿವಾರಿಸುತ್ತದೆ. ದೇವಿಯ ನಾಲ್ಕನೆಯ ಸ್ವರೂಪ ‘ಕೂಷ್ಮಾಂಡಾ’. ಈ ದೇವಿಗೆ ನವರಾತ್ರಿಯ ನಾಲ್ಕನೆಯ ದಿನದ ಪೂಜೆ. ಅಂದು ಸಾಧಕನ ಮನಸ್ಸು ‘ಅನಾಹತ’ ಚಕ್ರದಲ್ಲಿ ನೆಲೆಸಿರುತ್ತದೆ. ಅಂದು ಸಾಧಕನು ಪವಿತ್ರ ಹಾಗೂ ನಿಶ್ಚಲ ಮನಸ್ಸಿನಿಂದ ದೇವಿಯನ್ನು ಆರಾಧಿಸಿದರೆ ಆಯಸ್ಸು, ಬಲ, ಆರೋಗ್ಯ ವೃದ್ಧಿಯಾಗುತ್ತದೆ. ಬೇಗನೆ ಪ್ರಸನ್ನಳಾಗುವ ಈ ದೇವಿಯ ಕೃಪೆಯಿಂದ ಸಾಧಕನು ಸುಲಭವಾಗಿ ಪರಮಪಥದಲ್ಲಿ ಸಾಗಬಹುದು. ಜಗನಾತ್ಮೆಯ ಐದನೆಯ ಸ್ವರೂಪವೇ ‘ಸ್ಕಂಧಮಾತ’. ಶಿವಪುತ್ರ ಕಾರ್ತಿಕೇಯನ ತಾಯಿಯಾದ್ದರಿಂದ ಸ್ಕಂಧಮಾತೆಯೆAದು ಆರಾಧಿಸಲಾಗು ತ್ತದೆ. ನವರಾತ್ರಿಯ ಐದನೆಯ ದಿನ ಈ ದೇವಿಯ ಸ್ವರೂಪದ ಪೂಜೆ ನಡೆಯುತ್ತದೆ. ಅಲ್ಲದೆ ಲಲಿತಾದೇವಿಯ ಆರಾಧನೆಯ ದಿನವೂ ಆಗಿದ್ದು, ಲಲಿತಾ ಪಂಚಮಿಯೆAದೂ ಕರೆಯುತ್ತಾರೆ. ಅಂದು ಸಾಧಕನ ಮನಸ್ಸು ‘ವಿಶುದ್ಧ’ ಚಕ್ರದಲ್ಲಿ ನೆಲೆಸಿರುತ್ತದೆ. ಆಗ ಅಲ್ಲಿ ಸಮಸ್ತ ಬಾಹ್ಯ ಕ್ರಿಯೆಗಳು ಹಾಗೂ ಚಿತ್ತ ಪ್ರವೃತ್ತಿಗಳು ಲಯವಾಗುತ್ತದೆ. ಮನಸ್ಸು ಸಂಪೂರ್ಣವಾಗಿ ದೇವಿಯಲ್ಲಿ ತಲ್ಲೀನವಾಗಿ ಬಂಧನಗಳಿAದ ಮುಕ್ತಿಯನ್ನು ಪಡೆಯಬಹುದು. ಜಗನ್ಮಾತೆಯ ಆರನೆಯ ಸ್ವರೂಪವೇ ಕಾತ್ಯಾಯಿನಿ. ನವರಾತ್ರಿಯ ಆರನೆಯ ದಿನ ಈ ದೇವಿಯನ್ನು ಪೂಜಿಸಲಾಗುತ್ತದೆ. ಅಂದು ಸಾಧಕನ ಮನಸ್ಸು ‘ಆಜ್ಞಾ’ಚಕ್ರದಲ್ಲಿ ನೆಲೆಸಿರುತ್ತದೆ. ಸಂಪೂರ್ಣ ಶರಣಾಗತಿಯನ್ನು ಹೊಂದುವ ಸಾಧಕನಿಗೆ ದೇವಿಯ ದರ್ಶನ ಪ್ರಾಪ್ತವಾಗುತ್ತದೆ. ಚತುರ್ವಿಧ ಪುರುಷಾರ್ಥ ಗಳೂ ಲಭಿಸುತ್ತವೆ. ಸಮಸ್ತ ಲೌಕಿಕ ದುರಿತಗಳು ಮಾಯವಾಗಿ ಪರಮ ಪದವು ಲಭ್ಯವಾಗುತ್ತದೆ. ದುರ್ಗೆಯ ಏಳನೆಯ ಸ್ವರೂಪವೇ ‘ಕಾಳರಾತ್ರಿ’. ನವರಾತ್ರಿಯ ಸಪ್ತಮೀ ತಿಥಿಯಂದು ಈಕೆಯ ಆರಾಧನೆ ನಡೆಯುತ್ತದೆ. ಅಂದು ಸಾಧಕನ ಮನಸ್ಸು ‘‘ಸಹಸ್ರಾರ’’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಬ್ರಹ್ಮಾಂಡದ ಎಲ್ಲಾ ಸಿದ್ಧಿಗಳ ದ್ವಾರಗಳು ಅವನಿಗಾಗಿ ತೆರೆದುಕೊಳ್ಳುತ್ತವೆ. ಸಾಧಕನ ಮನಸ್ಸು ಸಂಪೂರ್ಣವಾಗಿ ಮಾತೆಯ ಸ್ವರೂಪದಲ್ಲಿ ಸ್ಥಿರವಾಗುತ್ತದೆ. ಸಮಸ್ತ ಪಾಪಗಳಿಂದ ಮುಕ್ತನಾಗಿ ಆತ ಶುದ್ಧಾಂತಃಕರಣ ಹೊಂದುತ್ತಾನೆ. ಜಗನ್ಮಾತೆಯ ಎಂಟನೆಯ ಸ್ವರೂಪವೇ ‘ಮಹಾಗೌರಿ’. ನವರಾತ್ರಿಯ ಅಷ್ಟಮಿಯಂದು ಈ ದೇವಿಯ ಆರಾಧನೆ ನಡೆಯುತ್ತದೆ. ಆ ದಿನ ದುರ್ಗೆಯ ಆರಾಧನೆಯ ಮಹತ್ವದ ಘಟ್ಟವಾಗಿದ್ದು ದುರ್ಗಾಷ್ಟಮಿ ಯೆಂದೂ ಕರೆಯಲಾಗುತ್ತದೆ. ಈಕೆಯ ಶಕ್ತಿ ಅಪಾರ ಹಾಗೂ ಕ್ಷಿಪ್ರ ಫಲವನ್ನು ದಯಪಾಲಿಸುವಳು. ಭಕ್ತರ ಎಲ್ಲಾ ಪಾಪಗಳೂ ದೂರವಾಗಿ ಅಪಾರ ಪುಣ್ಯ ಪ್ರಾಪ್ತಿಯಾಗುತ್ತದೆ. ಜಗನ್ಮಾತೆಯ ಒಂಭತ್ತನೆಯ ಸ್ವರೂಪವೇ ‘ಸಿದ್ಧಿದಾತ್ರೀ’ ನವರಾತ್ರಿಯ ನವಮಿ ತಿಥಿಯಂದು ಈಕೆಯ ಆರಾಧನೆ ನಡೆಯುತ್ತದೆ. ಶ್ರದ್ಧೆಯಿಂದ ಸಾಧನೆ ಮಾಡುವ ಸಾಧಕರಿಗೆ ಸಮಸ್ತ ಸಿದ್ಧಿಗಳು ಪ್ರಾಪ್ತವಾಗುತ್ತದೆ. ಅವರ ಲೌಕಿಕ ಅಲೌಕಿಕ ಬಯಕೆಗಳೆಲ್ಲವೂ ಈಡೇರುತ್ತದೆ. ಅಂದು ಯಂತ್ರ ದೇವಿಯ ಆರಾಧನಾ ದಿನವಾಗಿದ್ದು ದೇವಿಯ ಆಯುಧಗಳಿಗೂ ಪೂಜೆ ನಡೆಯುತ್ತದೆ. ಈ ಎಲ್ಲಾ ಆರಾಧನೆಗಳ ಬಳಿಕ ಆಸುರೀ ಶಕ್ತಿ ವಿರುದ್ಧ ಸಾಧಿಸಲ್ಪಡುವ ಗೆಲುವನ್ನು ವಿಜಯದಶಮಿ ಎಂದು ಪರಿಗಣಿಸಲಾಗಿದೆ. ಅದೇ ದಿನ ಸಾಧಕ- ಆರಾಧಕನೂ ಕೂಡ ತನ್ನೆಲ್ಲ ಜನ್ಮ ಜನ್ಮಾಂತರಗಳ ದುಷ್ಕೃತಗಳನ್ನು ನೀಗಿ ಸುಕೃತವನ್ನು ಗಳಿಸಿ ಜೀವನದಲ್ಲಿ ಸಫಲತೆ ಪಡೆಯುತ್ತಾನೆ.
-ಎಸ್. ಕೆ. ಅಶ್ವಿನಿ, ಮಡಿಕೇರಿ.