ಮಡಿಕೇರಿ, ಅ. ೨೦: ಇಡೀ ಮೈದಾನದಲ್ಲಿ ಮಕ್ಕಳದ್ದೆ ದರ್ಬಾರ್, ಎತ್ತ ನೋಡಿದರೂ ಚಿಣ್ಣರದ್ದೆ ಕಾರುಬಾರು, ಸಂತೆಯಲ್ಲAತೂ ಬಗೆಬಗೆಯ ಉತ್ಪನ್ನ, ಅದನ್ನು ಮಾರಾಟ ಮಾಡುವವರನ್ನು ನೋಡುವುದೆ ಮತ್ತೊಂದು ವಿಶೇಷ, ಒಂದೆಡೆ ಮಂಟಪಗಳ ವೈಭವ, ಇನ್ನೊಂದೆಡೆ ಮಕ್ಕಳ ಕಲಾ ವೈವಿಧ್ಯತೆಯ ಅನಾವರಣ..

ಹೌದು..ಇಂದು ಮಡಿಕೇರಿ ದಸರಾದಲ್ಲಿ ಅಕ್ಷರಶಃ ಚಿಣ್ಣರ ಚಿಲಿಪಿಲಿ ಮೂಡಿತ್ತು. ಮಡಿಕೇರಿ ದಸರಾ ಸಮಿತಿ ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜರುಗಿದ ಮಕ್ಕಳ ದಸರಾ ಕೇವಲ ಮಕ್ಕಳನ್ನು ಮಾತ್ರವಲ್ಲ, ಎಲ್ಲಾ ವಯೋಮಾನದವರನ್ನು ತನ್ನೆಡೆ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಂತೆಯಲ್ಲಿ ಭರ್ಜರಿ ವ್ಯಾಪಾರ

೧೦೦ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಮಕ್ಕಳು ವಿವಿಧ ಬಗೆಯ ವಸ್ತು, ಉತ್ಪನ್ನ, ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ವ್ಯಾಪಾರದ ಅನುಭವವನ್ನು ಪಡೆದುಕೊಂಡರು. ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ನಡೆಯಿತು. ಬೆಳಿಗ್ಗಿನಿಂದಲೇ ವಿದ್ಯಾರ್ಥಿಗಳು ವಿವಿಧ ವಸ್ತುಗಳನ್ನು ತಂದು ಮಾರಾಟ ಆರಂಭಿಸಿದರು. ಗ್ರಾಮೀಣ ಪ್ರದೇಶದ ತರಕಾರಿ, ಸೊಪ್ಪು, ಹಣ್ಣು ಇನ್ನಿತರ ವಸ್ತುಗಳು ವಿಶೇಷವಾಗಿದ್ದವು. ಮಾರುಕಟ್ಟೆಯಲ್ಲಿ ಸಿಗದ ನಾಡುತರಕಾರಿಗಳು ಇಂದು ಲಭ್ಯವಾದವು.

ತರಕಾರಿ, ಹಣ್ಣು, ಸೊಪ್ಪು ಜೊತೆಗೆ ಆಕರ್ಷಕ ಗಿಡಗಳು, ಕಬ್ಬು ಮಾರಾಟವೂ ಜೋರಾಗಿತ್ತು. ಇದರೊಂದಿಗೆ ಮಕ್ಕಳ ಅಂಗಡಿಗಳಲ್ಲಿ ಬಾಯಲ್ಲಿ ನೀರು ತರಿಸುವ ಚಾಟ್ಸ್, ಆಹಾರ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪದಾರ್ಥಗಳು ಜನರನ್ನು ಸೆಳೆಯುತ್ತಿದ್ದವು. ಮಸಾಲ ಪುರಿ, ಪಾನಿಪುರಿ, ಚುರುಮುರಿ, ಗಿರ್ಮಿಟ್, ಜಾಮೂನ್, ಕರಿದ ತಿಂಡಿಗಳು, ಕೇಕ್, ತಂಪುಪಾನೀಯ ಸೇರಿದಂತೆ ಇನ್ನಿತರ ಪದಾರ್ಥಗಳ ಮಾರಾಟ ಜೋರಾಗಿತ್ತು.

ಮಕ್ಕಳ ಮಂಟಪ ವೈಭವ

ಮಡಿಕೇರಿ ದಸರಾ ಎಂದರೆ ನೆನಪಾಗುವುದೇ ದಶಮಂಟಪ ವೈಭವ. ಅದೇ ರೀತಿಯಲ್ಲಿ ಮಕ್ಕಳ ದಸರಾದಲ್ಲಿ ಮಕ್ಕಳ ಮಂಟಪಗಳು ಜನಮನ ಸೆಳೆದವು.

ಮಕ್ಕಳೇ ರಚಿಸಿದ ಮಂಟಪದಲ್ಲಿ ಪೌರಾಣಿಕ ಕಥಾಸಾರಾಂಶವನ್ನು ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ತಂಡವಾಗಿ ತಾವೇ ಕಲಾಕೃತಿಯನ್ನು ಮಾಡಿ ಅದಕ್ಕೊಂದು ಕಥಾ ಹಿನ್ನೆಲೆಯನ್ನಿಟ್ಟು ಮಾಡಿದ ಮಂಟಪಗಳು ದೃಶ್ಯ ವೈಭವಕ್ಕೆ ಸಾಕ್ಷಿಯಾಯಿತು.

ಟೀಂ ಭಗವತಿ ‘ಗಜಾಸುರನ ವಧೆ’, ದೇಚೂರು ರಾಕರ್ಸ್ ‘ಹನುಮಂತ-ಸುರಸೆ’, ಟೀಂ ಏಕದಂತ ‘ಗಣಪತಿಯಿಂದ ತಾಳಸುರನ ವಧೆ’, ಟೀಂ ಉಡೋತ್ ‘ಗಣಪತಿ ದಂತ ಭಗ್ನ’, ಟೀಂ ಅಗ್ನಿ ‘ಅಂದಕಾಸುರನ ವಧೆ’, ಟೀಂ ವಿವಿ ಕ್ರಿಯೇಟರ್ಸ್ ‘ಅಂದಕಾಸುರನ ವಧೆ’, ಟೀಂ ೧೪ ‘ನರಹಂತಕ ದೇವಾಂತಕ’, ಜಿಬಿ ಬಾಯ್ಸ್ ‘ಮಹಿಷಾಸುರನ ಮರ್ಧನ’, ಟೀಂ ಭಗವತಿ ‘ಗಜಾಸುರನ ವಧೆ’, ಕಿಂಗ್ ಮೇಕರ್ಸ್ ‘ಗೋಮಾತೆ ಮಹಾತ್ಮೆ’, ಟೀಂ ಬಾಲಗಜ ‘ಗಣೇಶದಿಂದ ರಾಕ್ಷಸನ ಸಂಹಾರ’. ಕೂರ್ಗ್ ದಸರಾ ಬಾಯ್ಸ್ ‘ಪಾರ್ವತಿ ಶತಾಂಬರಿ ರೂಪ’, ಉದ್ಭವ ಚೈಲ್ಡ್ ಬಾಯ್ಸ್ ‘ಗಜಾಸುರನ ಸಂಹಾರ’, ಟೀಂ ಆರ್.ಆರ್. ಬ್ರದರ್ಸ್ ‘ಸಿಂಧೂರ ಗಣಪತಿ’, ಟೀಂ ಡ್ರಾö್ಯಗನ್ಸ್ ‘ಶುಂಭ-ನಿಶುAಭ’, ಗ್ಯಾಂಗ್‌ಸ್ಟರ್ ಬಾಯ್ಸ್ ‘ಕಿರಣ್ಯಾಕ್ಷನ ಸಂಹಾರ’, ಬ್ಲ್ಯಾಕ್ ಸ್ಪೆöÊಡರ್ ‘ಗಣಪತಿಯ ಸಾಹಸ’ ಎಂಬ ಪೌರಾಣಿಕ ಹಿನ್ನೆಲೆಯನ್ನು ಪ್ರಸ್ತುತಪಡಿಸಿದರು.

ಆಕರ್ಷಿಸಿದ ಪುಟಾಣಿಗಳ ವೇಷಭೂಷಣ

ಮಕ್ಕಳ ದಸರಾದಲ್ಲಿ ಪುಟಾಣಿಗಳ ಛದ್ಮವೇಷ ಆಕರ್ಷಿಸಿತು. ಪೌರಾಣಿಕ, ಐತಿಹಾಸಿಕ ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಸಂದೇಶ ಸಾರುವ ವಿಚಾರಗಳ ಬಗ್ಗೆ ವೇಷ ಧರಿಸಿ ಪುಟಾಣಿಗಳು ಮೋಡಿ ಮಾಡಿದರು. ೫೦ಕ್ಕೂ ಹೆಚ್ಚು ಪುಟಾಣಿಗಳು ವೇಷ ಧರಿಸಿ ಕಣ್ಮನ ಸೆಳೆದರು.

ಇದರೊಂದಿಗೆ ಮಣ್ಣಿನಲ್ಲಿ ಕಲಾಕೃತಿ ರಚನೆ ಸ್ಪರ್ಧೆಯು ವಿಶೇಷವಾಗಿತ್ತು. ಮಕ್ಕಳ ಕರಗಳಲ್ಲಿ ಗಣೇಶ, ಬುದ್ಧ, ಶಿವ, ಮೊಸಳೆ, ಮತ್ಸö್ಯಕನ್ಯೆ, ಆನೆ ಸೇರಿದಂತೆ ವೈವಿಧ್ಯಮಯ ಕಲಾಕೃತಿಗಳು ಪುಟಾಣಿಗಳ ಕರಗಳಲ್ಲಿ ಮೂಡಿಬಂದವು.