ಗೋಣಿಕೊಪ್ಪಲು, ಅ. ೨೦: ಗೋಣಿಕೊಪ್ಪ ದಸರಾ ಹಿನ್ನೆಲೆ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಜನೋತ್ಸವದ ಮೆರುಗನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.

ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ೪೫ನೇ ವರ್ಷದ ದಸರಾ ಅಂಗವಾಗಿ ಪಟ್ಟಣದಲ್ಲಿ ನಡೆದ ೭ನೇ ವರ್ಷದ ಮಕ್ಕಳ ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಮಕ್ಕಳ ಬುದ್ಧಿಶಕ್ತಿ ವೃದ್ಧಿಸುವಂತಹ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ ವಿವಿಧ ಸ್ಪರ್ಧೆಗಳನ್ನು ಸಾಧಕ ವಿದ್ಯಾರ್ಥಿಗಳ ಮೂಲಕವೇ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಮುಂಜಾನೆಯೆ ಶಾಲಾ ವಿದ್ಯಾರ್ಥಿಗಳು ಕೈಯಲ್ಲಿ ಪೆನ್ಸಿಲ್, ಪೆನ್, ರಂಗೋಲಿ ಪುಡಿಗಳನ್ನು ಹಿಡಿದು ದಸರಾ ವೇದಿಕೆ ಬಳಿ ಆಗಮಿಸಿ ಸ್ಪರ್ಧೆಗಿಳಿದಿದ್ದರು. ನಿಗದಿತ ಸಮಯದಲ್ಲಿ ವಿವಿಧ ಸ್ಪರ್ಧೆಗಳು ಆರಂಭವಾಗುತ್ತಿದ್ದAತೆಯೇ ಶಾಲಾ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಚಿತ್ರಕಲೆ, ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ರಂಗೋಲಿ ಸ್ಪರ್ಧೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತೋರಿಸಿದರು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸಲು ವಿವಿಧ ಶಾಲೆಯ ಶಿಕ್ಷಕರು ಶ್ರಮವಹಿಸಿದ್ದರು. ಮಕ್ಕಳ ಪ್ರೋತ್ಸಾಹಕ್ಕೆ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಆಗಮಿಸಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಕಣ್ತುಂಬಿಕೊAಡರು.

ಮಕ್ಕಳ ದಸರಾ ಸಮಿತಿಯ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ಅಧ್ಯಕ್ಷತೆಯಲ್ಲಿ ಮಕ್ಕಳ ದಸರಾ ಯಶಸ್ವಿಗೆ ಆರಂಭದಿAದಲೂ ಶ್ರಮಿಸಿದ್ದರು. ಪ್ರತಿಭಾವಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಸರಾ ಉದ್ಘಾಟನೆಗಳನ್ನು ಮಾಡುವ ಮೂಲಕ ಗಮನ ಸೆಳೆದರು.

ರಂಗೋಲಿ ಚಿತ್ತಾರ - ವಿಜ್ಞಾನದ ಅಚ್ಚರಿ

ಮಕ್ಕಳ ದಸರಾ ಅರ್ಥಪೂರ್ಣ ಗೊಳಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ, ಚಿತ್ರ ಕಲಾ ಸ್ಪರ್ಧೆಗಳು ನಡೆದವು.

ಬಣ್ಣಗಳನ್ನು ಬಳಸಿಕೊಂಡು ಮಕ್ಕಳ ಕರಗಳಲ್ಲಿ ಸುಂದರ ರಂಗೋಲಿಗಳು ಅನಾವರಣ ಗೊಂಡವು. ಇನ್ನೂ ವಿಜ್ಞಾನದ ಅಚ್ಚರಿಗಳನ್ನು ಹೊತ್ತು ತಂದ ವಿದ್ಯಾರ್ಥಿಗಳ ಮಾದರಿಗಳನ್ನು ಪ್ರದರ್ಶಿಸಿ ಬೇಷ್ ಎನಿಸಿಕೊಂಡರು. ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಚಾಕಚಕ್ಯತೆ ಮೆರೆದರು. ಮಕ್ಕಳ ದಸರಾ ನೋಡಲು ಸಾರ್ವಜನಿಕರು ಆಗಮಿಸಿದ್ದರು.

ಸಾಧಕ ವಿದ್ಯಾರ್ಥಿಗಳಿಂದ ಉದ್ಘಾಟನೆ

ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಆಯೋಜನೆಗೊಂಡಿದ್ದ ರಂಗೋಲಿ ಸ್ಪರ್ಧೆಯನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪೊನ್ನಂಪೇಟೆಯ ಬಬಿತ ಕೆ.ಆರ್. ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿರುವುದು ನನಗೆ ಖುಷಿ ತಂದಿದೆ. ವಿದ್ಯೆಯೇ ವಿದ್ಯಾರ್ಥಿಗಳಿಗೆ ಆಸ್ತಿಯಾಗಿರುತ್ತದೆ. ವಿದ್ಯೆಯ ಆಸ್ತಿಯನ್ನು ಕಸಿದು ಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ತಮ್ಮ ವಿದ್ಯಾಭ್ಯಾಸವನ್ನು ಕಠಿಣ ಶ್ರಮದೊಂದಿಗೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಜ್ಞಾನ ವಸ್ತು ಪ್ರದರ್ಶನವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಕೀರ್ತಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಪಾರ ಜ್ಞಾನ ಹೊಂದುವAತೆ ಕರೆ ನೀಡಿದರು.

ರಂಗೋಲಿ ಸ್ಪರ್ಧೆಯು ಮೂರು ವಿಭಾಗದಲ್ಲಿ ನಡೆಯಿತು. ನೂರಾರು ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ಭಾಗವಹಿಸಿದ್ದರು.

ವಿಜೇತರ ವಿವರ

ಚಿತ್ರಕಲಾ ಸ್ಪರ್ಧೆಯ ೧ ರಿಂದ ೫ನೇ ತರಗತಿ, ವಿಸ್ಮಿತಾ (ಪ್ರ), ದಿತ್ಯ ಕಾವೇರಿ (ದ್ವಿ), ಸಫಾ ಫಾತಿಮ, (ತೃ), ೬-೮ನೇ ತರಗತಿ, ಶಿವಾನಿ (ಪ್ರ), ನೀಲ್ (ದ್ವಿ). ಪ್ರತಿಕ್ಷ ಪೂವಮ್ಮ (ತೃ) ೯-೧೦ನೇ ತರಗತಿ ತಫಸಿಯ (ಪ್ರ), ಪೂರ್ಣಶ್ರೀ (ದ್ವಿ), ಮೋಕ್ಷಿತ (ತೃ) ಸ್ಥಾನ ಗಳಿಸಿಕೊಂಡರು.

೧-೫ನೇ ತರಗತಿ, ಯುವನಿಕ (ಪ್ರ), ರಶ್ಮಿ (ದ್ವಿ), ಋತ್ವಿಕ್ ರೋಹಾನ್ (ತೃ), ೬-೮ನೇ ತರಗತಿ, ತನುಶ್ರೀ (ಪ್ರ), ನಿತ್ಯ (ದ್ವಿ). ಕೃತಿಕ (ತೃ) ೯-೧೦ನೇ ತರಗತಿ ದರ್ಶಿತಾ (ಪ್ರ), ಮಂಜುಳ (ದ್ವಿ), ಧನಲಕ್ಷಿö್ಮ (ತೃ) ಸ್ಥಾನ,

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ೫-೭ನೇ ತರಗತಿ, ಆರಾಧ್ಯ (ಪ್ರ), ಪ್ರಣಾಮ್ (ದ್ವಿ)ಕವನ್ ನಾಯಕ್ (ತೃ), ೮-೧೦ನೇ ತರಗತಿ, ಡೇರಿನ್ ಸೈಮನ್ (ಪ್ರ) ಶ್ವೇತನ್ (ದ್ವಿ). ತೇಜಸ್ವಿಭಟ್ (ತೃ) ಸ್ಥಾನ ಪಡೆದರು.

ಗೀತಗಾಯನದಲ್ಲಿ ೧-೫ನೇ ತರಗತಿ, ಸೈನಿಕ್ ಮತ್ತು ತಂಡ ವೀರಾಜಪೇಟೆ (ಪ್ರ), ನಾಟ್ಯ ಸಂಕಲ್ಪ ತಂಡ (ದ್ವಿ), ಸರ್ವದೈವತಾ ಶಾಲೆ ಅರುವತ್ತೋಕ್ಕಲು (ತೃ), ೬-೮ನೇ ತರಗತಿ, ಮಾಘಶ್ರೀ ತಂಡ (ಪ್ರ), ನಾಟ್ಯಸಂಕಲ್ಪ ತಂಡ (ದ್ವಿ). ಪವಿತ್ರನ್ ತಂಡ ಪವಿತ್ರ ಮತ್ತು ತಂಡ (ತೃ) ೯-೧೦ನೇ ತರಗತಿ ಚಿಗುರು ಮತ್ತು ತಂಡ (ಪ್ರ), ಮೇಘನಾ ಮತ್ತು ತಂಡ (ದ್ವಿ), ಎಂ.ಎA.ಸ್ಮಾರಕ ಪ್ರೌಢಶಾಲೆ ಟಿ.ಶೆಟ್ಟಿಗೇರಿ (ತೃ) ಸ್ಥಾನ ಪಡೆಯಿತು.

ಜಾನಪದ ನೃತ್ಯ ೧-೫ನೇ ತರಗತಿ ವಿಭಾಗದಲ್ಲಿ ಸೈಕ್ಲೋನ್ (ಪ್ರ), ನಾಟ್ಯ ಸಂಕಲ್ಪ (ದ್ವಿ), ಮಾನ್ವಿತ ಮತ್ತು ತಂಡ (ತೃ), ೬-೧೦ ವಿಭಾಗದಲ್ಲಿ ಚಿಗುರು ತಂಡ (ಪ್ರ), ದೀಪು ತಂಡ (ದ್ವಿ), ನಾಟ್ಯ ಸಂಕಲ್ಪ (ತೃ) ಸ್ಥಾನ ಪಡೆದುಕೊಂಡಿತು.

ವಿಜೇತ ತಂಡಕ್ಕೆ ಕಾವೇರಿ ದಸರಾ ಸಮಿತಿ ವತಿಯಿಂದ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ದಸರಾ ಸಮಿತಿ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಗ್ರಾ.ಪಂ. ಅಧ್ಯಕ್ಷೆ ಸೌಮ್ಯಬಾಲು, ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷ ಶಿವಾಜಿ, ಕಾರ್ಯದರ್ಶಿ ಕಂದಾ ದೇವಯ್ಯ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳಾದ ರಮೇಶ್, ಶೀಲಾ ಬೋಪಣ್ಣ, ಧ್ಯಾನ್ ಸುಬ್ಬಯ್ಯ, ಎಂ. ಮಂಜುಳ, ಚಂದನ ಮಂಜುನಾಥ್, ಧನಲಕ್ಷಿö್ಮ, ದಿಲನ್ ಚಂಗಪ್ಪ ಓಮನ ಮತ್ತಿತರರು ಪಾಲ್ಗೊಂಡಿದ್ದರು.