ಮಡಿಕೇರಿ, ಅ. ೧೮: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ತೋರಿದ ಕರ್ನಾಟಕ ರಾಜ್ಯದ ಕ್ರೀಡಾಪಟುಗಳನ್ನು ಇಂದು ರಾಜ್ಯ ಸರಕಾರದ ವತಿಯಿಂದ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು.

ಸಿ.ಎಂ. ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾಪಟು ಗಳನ್ನು ಸನ್ಮಾನಿಸಲಾಯಿತು. ರಾಜ್ಯದ ಒಟ್ಟು ೧೦ ಕ್ರೀಡಾಪಟುಗಳು ಪದಕ ವಿಜೇತರ ಸಾಲಿನಲ್ಲಿದ್ದಾರೆ. ಇವರ ಪೈಕಿ ಕೊಡಗು ಜಿಲ್ಲೆಯವರಾದ ಟೆನ್ನಿಸ್‌ಪಟು ರೋಹನ್ ಬೋಪಣ್ಣ, ಭಾರತ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಸುರೇಶ್ ಹಾಗೂ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಚೇನಂಡ ವಿಶು ಕುಟ್ಟಪ್ಪ ಅವರು ಸನ್ಮಾನ - ನಗದು ಪುರಸ್ಕಾರ ಪಡೆದರು.

ಚಿನ್ನದ ಪದಕ ಗಳಿಸಿದ ಮಡಿಕೇರಿ, ಅ. ೧೮: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ತೋರಿದ ಕರ್ನಾಟಕ ರಾಜ್ಯದ ಕ್ರೀಡಾಪಟುಗಳನ್ನು ಇಂದು ರಾಜ್ಯ ಸರಕಾರದ ವತಿಯಿಂದ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು.

ಸಿ.ಎಂ. ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾಪಟು ಗಳನ್ನು ಸನ್ಮಾನಿಸಲಾಯಿತು. ರಾಜ್ಯದ ಒಟ್ಟು ೧೦ ಕ್ರೀಡಾಪಟುಗಳು ಪದಕ ವಿಜೇತರ ಸಾಲಿನಲ್ಲಿದ್ದಾರೆ. ಇವರ ಪೈಕಿ ಕೊಡಗು ಜಿಲ್ಲೆಯವರಾದ ಟೆನ್ನಿಸ್‌ಪಟು ರೋಹನ್ ಬೋಪಣ್ಣ, ಭಾರತ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಸುರೇಶ್ ಹಾಗೂ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಚೇನಂಡ ವಿಶು ಕುಟ್ಟಪ್ಪ ಅವರು ಸನ್ಮಾನ - ನಗದು ಪುರಸ್ಕಾರ ಪಡೆದರು.

ಚಿನ್ನದ ಪದಕ ಗಳಿಸಿದ ಅವರು ರೂ. ೫ ಲಕ್ಷ ನಗದು ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಪಟು ಗಳನ್ನು ಗೌರವಿಸಿದರು. ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ಮತ್ತಿರರ ಪ್ರಮುಖರು ಪಾಲ್ಗೊಂಡಿದ್ದರು.