ಭಾಗಮAಡಲ, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆದ ಮರುದಿನವಾದ ಇಂದು ಭಕ್ತಾದಿಗಳು ಭಗಂಡೇಶ್ವರ ಸನ್ನಿಧಿ ಹಾಗೂ ತಲಕಾವೇರಿಗೆ ತೆರಳಿ ಪದ್ಧತಿಯಂತೆ ಕೈಂಕರ್ಯ ನಡೆಸಿ ತೀರ್ಥ ಸ್ವೀಕರಿಸಿದರು.
ಕಾವೇರಿ ತೀರ್ಥ ರೂಪಿಣಿಯಾಗಿ ಆವೀರ್ಭವಿಸಿದ ಮರುದಿನ ಸ್ಥಳೀಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಗಳಿಗೆ ಆಗಮಿಸಿದರು. ಬುಧವಾರ ಬೆಳಗ್ಗಿನಿಂದ ಭಕ್ತರು ತ್ರಿವೇಣಿ ಸಂಗಮದಲ್ಲಿ ಕೇಶ ಮುಂಡನ ಮಾಡಿ ಪಿಂಡಪ್ರದಾನ ಮಾಡಿ ಭಾಗಮಂಡಲದ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಬಳಿಕ ಪಡಿಯಕ್ಕಿ ಪಡೆದುಕೊಂಡರು. ನಂತರ ತಲಕಾವೇರಿಗೆ ತೆರಳಿದ ಭಕ್ತರು ಕಾವೇರಿ ಮಾತೆಗೆ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಮಿಸಿದರು. ಪ್ರತಿ ವರ್ಷವೂ ತೀರ್ಥೋದ್ಭವದ ಮರುದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತಿತ್ತು. ಈ ವರ್ಷ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಕೊಡಗು ಏಕೀಕರಣ ರಂಗದ ವತಿಯಿಂದ ನಿರಂತರವಾಗಿ ಒಂದು ತಿಂಗಳ ಕಾಲ ಅನ್ನದಾನ ನಡೆಯಲಿದೆ. ಚಟ್ಟಿಯಾರ್ ವತಿಯಿಂದ ಎರಡು ದಿನಗಳ ಕಾಲ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಭಾಗಮಂಡಲದಿAದ ತಲಕಾವೇರಿಗೆ ಉಚಿತ ಬಸ್ಸು ವ್ಯವಸ್ಥೆ ಇತ್ತು. ಬಸ್ಸಿನಲ್ಲಿ ಪ್ರಯಾಣಿಸುವ ಭಕ್ತರ ಸಂಖ್ಯೆ ಇಂದು ವಿರಳವಾಗಿತ್ತು.
ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಹಾಗೂ ಸ್ಥಳೀಯ ತಂಡಗಳ ವತಿಯಿಂದ ಎರಡು ದಿನಗಳ ಕಾಲ ನಿರಂತರವಾಗಿ ತೀರ್ಥ ವಿತರಣೆ ನಡೆಯಿತು. ೧೫ ರಿಂದ ೨೦ ಯುವಕರ ತಂಡ ಸ್ವಯಂಸೇವಕರಾಗಿ ನಿರಂತರವಾಗಿ ತೀರ್ಥ ವಿತರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. -ಸುನಿಲ್ ಕುಯ್ಯಮುಡಿ