ನಾಪೋಕ್ಲು, ಅ. ೧೮: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತೆö್ಯÃಶ್ವರ ಹಾಗೂ ಶ್ರೀ ಕಣ್ವ ಮುನೀಶ್ವರ ದೇವಳಗಳಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಕಾವೇರಿ ನದಿ ತೀರದ ಎಡಭಾಗ ದಲ್ಲಿರುವ ಶ್ರೀ ಕಣ್ವ ಮುನೀಶ್ವರ ದೇವಳದಲ್ಲಿ ಬೆಳಿಗ್ಗೆಯಿಂದ ರುದ್ರಾಭಿ ಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು. ನಂತರ ಅಗಸ್ತೆö್ಯÃಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಭಕ್ತಾದಿಗಳು ಕಾವೇರಿ ಸಂಕ್ರಮಣದ ಪುಣ್ಯ ತೀರ್ಥ ಸ್ಥಾನ ಮಾಡಿ ಎರಡನೆಯ ಪುಣ್ಯಾತೀರ್ಥ ಸ್ಥಾನವನ್ನು ಇಲ್ಲಿ ಮಾಡುವುದು ತಲತಲಾಂತರಗಳಿAದ ನಡೆದು ಬಂದ ಪದ್ಧತಿಯಾಗಿದ್ದು, ಭಕ್ತರು ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಪ್ರಾರ್ಥಿಸಿ ಧನ್ಯತಾ ಭಾವವನ್ನು ಹೊಂದಿದರು.
ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ ಶ್ರದ್ಧಾಭಕ್ತಿಯಿಂದ ದೇವಾಲಯಕ್ಕೆ ಕೊಂಡೊಯ್ದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಿದರು. ಅನಂತರ ವಿಶೇಷ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಅಗಸ್ತೆö್ಯÃಶ್ವರ ದೇವಳದಲ್ಲಿ ಬೆಳಿಗ್ಗೆ ೫ ಗಂಟೆಯಿAದಲೇ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕೇಶಮುಂಡನ ಸೇವೆ, ಪಿಂಡ ಪ್ರದಾನ ಆರಂಭ ಗೊಂಡಿತು. ನಂತರ ದೇವಳದ ವತಿಯಿಂದ ಕಾವೇರಿ ನದಿ ತೀರದಲ್ಲಿ ಗಂಗಾ ಪೂಜೆ ಹಾಗೂ ಶ್ರೀ ಕಾವೇರಿ ಮಾತೆಗೆ ಮಹಾ ಆರತಿ ನೆರವೇರಿಸ ಲಾಯಿತು. ಬಳಿಕ ದೇವಳದಲ್ಲಿ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಳಕ್ಕೆ ಭೇಟಿ ನೀಡಿದ್ದರು. ಅಂಗಡಿ ವ್ಯಾಪಾರಗಳ ಭರಾಟೆ ಜೋರಾಗಿತ್ತು.
ಪೂಜಾ ವಿಧಿ ವಿಧಾನಗಳ ನೇತೃತ್ವವನ್ನು ಅರ್ಚಕ ರವಿ ಕಲ್ಲೂರಾಯ ಮತ್ತು ತಂಡ, ಮಧ್ಯಾಹ್ನ ೧೨ ಗಂಟೆಗೆ ಕಾವೇರಿ ನದಿಗೆ ಮಹಾಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್ ಮತ್ತು ತಂಡ ನೆರವೇರಿಸಿತು.
ಬಲಮುರಿ, ಮೂರ್ನಾಡು, ಪಾರಾಣೆ, ಕೈಕಾಡು, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡAಗೇರಿ ಸುತ್ತಮುತ್ತಲು ಗ್ರಾಮಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.
ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡುವದು ವಾಡಿಕೆ. ಕಾವೇರಿ ನದಿ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡ ಪ್ರದಾನ ಮಾಡುವ ಪದ್ಧತಿ ಹಿಂದಿನಿAದಲೂ ನಡೆದುಕೊಂಡು ಬಂದಿದೆ.
ದೇವಾಲಯದ ತಕ್ಕರು, ಅಗಸ್ತೆö್ಯÃಶ್ವರ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರAಡ ಸಾಧು ತಮ್ಮಯ್ಯ ಮಾತನಾಡಿ, ವರ್ಷಂಪ್ರತಿ ತಲಕಾವೇರಿಯಲ್ಲಿ ತೀರ್ಥೋದ್ಭವದ ಮರುದಿನ ಬಲಮುರಿಯಲ್ಲಿ ಜಾತ್ರೆ ನಡೆಯುತ್ತಿದೆ. ಕೇಶ ಮುಂಡನ, ತೀರ್ಥ ಸ್ನಾನ, ಪಿಂಡಪ್ರದಾನ ಸೇರಿದಂತೆ ಎಲ್ಲಾ ಕಾರ್ಯಗಳು ನಡೆದಿವೆೆ. ಎರಡು ವರ್ಷಗಳಿಂದ ಕಾವೇರಿ ಮಾತೆಗೆ ಮಹಾಮಂಗಳಾರತಿಯನ್ನು ನೆರವೇರಿಸಲಾಗುತ್ತಿದೆ. ದೇವಾಲಯ ದಲ್ಲಿ ಮಹಾಪೂಜೆ, ಅನ್ನಸಂತರ್ಪ ಣೆಯು ನಡೆದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದರು.
ಅನ್ನದಾನ ಸಮಿತಿಯ ಅಧ್ಯಕ್ಷ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಮಾತನಾಡಿ, ಗ್ರಾಮಸ್ಥರು ೨೦೨೨ ರಿಂದ ಒಟ್ಟುಗೂಡಿ ಅನ್ನದಾನ ಸಮಿತಿ ರಚಿಸಿದ್ದೇವೆ. ಗ್ರಾಮಸ್ಥರ ದೇಣಿಗೆಯನ್ನು ಬಳಸಿ ಜಾತ್ರೆಯಂದು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತಿದೆ. ತಲಕಾವೇÀರಿಯಂತೆ ಇಲ್ಲಿಯ ತೀರ್ಥ ಸ್ಥಾನಕ್ಕೂ ವಿಶೇಷ ಮಹತ್ವ ಇದೆ. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಇದೀಗ ಭಾಗವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಶ್ರೀ ಕಣ್ವ ಮುನೀಶ್ವರ ದೇವಳದಲ್ಲಿ ದೇವಳ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಉತ್ತಪ್ಪ, ಕಾರ್ಯದರ್ಶಿ ಚೆಯ್ಯಂಡ ತಿಮ್ಮಯ್ಯ, ತಕ್ಕಮುಖ್ಯಸ್ಥರು, ಶ್ರೀ ಅಗಸ್ತೇಶ್ವರ ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚನ ಜಯ, ಅನ್ನದಾನ ಸಮಿತಿಯ ಕಾರ್ಯದರ್ಶಿ ಪಾಲಂದಿರ ಚಂಗಪ್ಪ, ನಿರ್ದೇಶಕರುಗಳಾದ ತೊತ್ತಿಯಂಡ ಪುಟ್ಟಯ್ಯ, ಕುಂದನ ಪ್ರಭಾನಂದ, ಕಟ್ರತನ ಉತ್ತಪ್ಪ, ಕಟ್ರತನ ಲೋಕನಾಥ್, ಪೊನ್ನಚನ ಹೊನ್ನಪ್ಪ, ಕಾಂಗೀರ ಮಾದಪ್ಪ, ಪಾಲಂದಿರ ನಾಚಪ್ಪ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟೀರ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-ಪ್ರಭಾಕರ್/ದುಗ್ಗಳ