ಗೋಣಿಕೊಪ್ಪ ವರದಿ, ಅ. ೧೭: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆ ಆತ್ಮ ಯೋಜನೆ ವತಿಯಿಂದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಬ್ಬರು ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಹುದಿಕೇರಿ ಹೋಬಳಿಯ ಸಿ.ಪಿ. ಕಾವೇರಮ್ಮ, ವೀರಾಜಪೇಟೆ ಹೋಬಳಿಯ ಸವಿತಾ ಮಾಚಯ್ಯ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭ ರೈತರಿಗೆ ತರಕಾರಿ ಬೀಜ ವಿತರಣೆ ಮಾಡಲಾಯಿತು. ಆತ್ಮನಿರ್ಭರ್ ಯೋಜನೆಯ ತರಬೇತಿ ಕಾರ್ಯಕ್ರಮ ನಡೆಯಿತು. ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿಗಳಾದ ಡಾ. ಭಾಗಿರತಿ, ಡಾ ಚಂದ್ರಶೇಖರ್, ಡಾ. ಜಡೇಗೌಡ, ಜಿಲ್ಲಾ ಆತ್ಮ ಯೋಜನೆ ಉಪ ಯೋಜನೆ ನಿರ್ದೇಶಕಿ ಪಿ. ಜಿ. ಮೈತ್ರಿ, ಕಾವ್ಯ, ಧಾಮಿನಿ ದೇಚಮ್ಮ, ಸಂಧ್ಯಾ, ಕಿರಣ ಇದ್ದರು.