ಪಾಲಿಬೆಟ್ಟ, ಅ. ೧೭: ಪಾಲಿಬೆಟ್ಟ ಲಯನ್ಸ್ ಕ್ಲಬ್ನ ವತಿಯಿಂದ ಲಯನ್ಸ್ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಲಯನ್ಸ್ ಸಂಸ್ಥೆಯ ಪ್ರಾಂತ್ಯದ ಅಧ್ಯಕ್ಷ ಅಂಬೆಕಲ್ ನವೀನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಪಾಲಿಬೆಟ್ಟ ಲಯನ್ಸ್ ಕ್ಲಬ್ ಕಳೆದ ೪೮ ವರ್ಷಗಳಿಂದಲೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದರ ಮೂಲಕ ಜನ ಮೆಚ್ಚುಗೆ ಗಳಿಸಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಅನಂತ ರಾಂ ಮಾತನಾಡಿ ಲಯನ್ಸ್ ಕ್ಲಬ್ ವತಿಯಿಂದ ಆರೋಗ್ಯ, ಪರಿಸರ, ಶಿಕ್ಷಣ, ಮಾಹಿತಿ ಶಿಬಿರ, ಸಮಾಜ ಸೇವೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಪಾಲಿಬೆಟ್ಟ ಗ್ರಾಮದ ಹಲವು ಪ್ರಶಸ್ತಿಗಳ ವಿಜೇತೆ ಉತ್ತಮ ಶಿಕ್ಷಕಿ ಗೀತಾ ನಾಯ್ಡು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ನ ಪ್ರಮುಖರಾದ ಪ್ರತಾಪ್ ಕುಶಾಲಪ್ಪ, ಪ್ರಿಯ ಅಂಬೆಕಲ್, ಸದಾ ಕುಶಾಲಪ್ಪ, ಭವಿಷ್ಯ ಕುಮಾರ್, ವಿಶಾಲ್ ದೇವಯ್ಯ, ಧನು ಉತ್ತಯ್ಯ, ಶ್ಯಾಮ್, ಡಾ. ಎ.ಸಿ. ಗಣಪತಿ, ಅಯ್ಯಣ್ಣ, ಶಾರದಾ ಪೂನ್ನಪ್ಪ, ಡೋಮಿ ಪಿ ರೊಸಾರಿಯೊ, ಡಾ. ದೇವಗಿರಿ, ಕೆ. ರಾಣಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.