*ಗೋಣಿಕೊಪ್ಪ, ಅ. ೧೭: ರಾಜ್ಯ ಸರ್ಕಾರ ಪೊನ್ನಂಪೇಟೆ ತಾಲೂಕು ವಾಸ್ತವತೆಯನ್ನು ಅರಿತು ಬರ ಘೋಷಣೆ ಮಾಡಿದೆ. ಆದರೆ, ಸೂಕ್ತ ಪರಿಹಾರವನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕೆಂದು ಕೊಡಗು ರೈತ ಸಂಘ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಒತ್ತಾಯಿಸಿದ್ದಾರೆ. ಸರ್ಕಾರ ಎರಡು ಪಟ್ಟಿಯಲ್ಲೂ ಕೂಡ ಪೊನ್ನಂಪೇಟೆ ತಾಲೂಕಿನ ನೈಜತೆಯನ್ನು ಅರಿತು ಬರ ಘೋಷಣೆ ಮಾಡಿರುವುದು ಸ್ವಾಗತಾರ್ಹ.

ಕಾಫಿ ಬೆಳೆ ಬೆಳವಣಿಗೆ ಕುಂಠಿತಗೊAಡಿರುವುದು ದೃಡಪಟ್ಟಿದೆ. ಭತ್ತ ಸಸಿಮಡಿ ಸಂದರ್ಭ ಸೂಕ್ತ ಮಳೆ ಇಲ್ಲದೆ ನಾಟಿ ಕಾರ್ಯ ಮಾಡಲು ತೊಡಕಾಗಿದೆ. ಇದರಂತೆ ಶೇ. ೭೦-೮೦ರಷ್ಟು ಬೆಳೆ ಫಸಲು ನಷ್ಟವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಎನ್‌ಡಿಆರ್‌ಎಫ್, ಎಸ್‌ಟಿಆರ್‌ಎಫ್ ಮೂಲಕ ಪರಿಹಾರವನ್ನು ತಕ್ಷಣ ನೀಡಬೇಕಿದೆ. ರಾಜ್ಯ ಸರ್ಕಾರ ರೂ. ೫ ಲಕ್ಷ ಸಾಲವನ್ನು ಶೂನ್ಯ ಬಡ್ಡಿದರರಲ್ಲಿ ನೀಡುವುದಾಗಿ ನೀಡಿದ ಭರವಸೆ ಈಡೇರಿಸಬೇಕು. ಈಗಾಗಲೇ ನೀಡಿರುವ ರೂ. ೩ ಲಕ್ಷ ಸಾಲದ ಜೊತೆಗೆ, ರೂ. ೨ ಲಕ್ಷ ಸಾಲವನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ನಲ್ಲೂರು ಸಂಚಾಲಕ ತೀತರಮಾಡ ರಾಜ, ಬೆಳ್ಳೂರು ಭಾಗದ ಸಂಚಾಲಕ ಗಿರೀಶ್, ಪೊನ್ನಂಪೇಟೆ ಸಂಚಾಲಕ ಚೊಟ್ಟೆಕಾಳಪಂಡ ಮನು ಇದ್ದರು.