ಗೋಣಿಕೊಪ್ಪ ವರದಿ, ಅ. ೧೭: ದಸರಾ ಶೋಭಾಯಾತ್ರೆಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿ ಕಾನೂನು ಪಾಲನೆ ಇರಲಿ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಹೇಳಿದರು.

ಗೋಣಿಕೊಪ್ಪ ದಸರಾ ಪ್ರಯುಕ್ತ ಕಾಮತ್ ನವಾಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾತ್ರಿ ಹೊತ್ತು ಶಬ್ದಮಾಲಿನ್ಯಕ್ಕೆ ನಿರ್ಬಂಧ ಹೇರಿರುವುದನ್ನು ಮಂಟಪ ಸಮಿತಿಗಳು ಪಾಲನೆ ಮಾಡಬೇಕಿದೆ. ಡಿಜೆ ಶಬ್ದದ ದುಷ್ಪರಿಣಾಮದ ಬಗ್ಗೆ ಅರಿವು ಅಗತ್ಯ. ಸರ್ವೋಚ್ಚ ನ್ಯಾಯಾಲಯ ಕೂಡ ರಾತ್ರಿ ಹೊತ್ತು ಶಬ್ದ ಬಳಕೆಗೆ ಸಾರ್ವಜನಿಕ ಹಿತ ದೃಷ್ಠಿಯಿಂದ ನಿರ್ಬಂಧ ಹೇರಿದೆ. ಈ ನಿಟ್ಟಿನಲ್ಲಿ ಸಮಿತಿಗಳ ಸಹಕಾರ ಅಗತ್ಯ ಎಂದರು. ಸಾಂಸ್ಕೃತಿಕ ಕಲೆ, ಕಲಾಭಿಮಾನಿಗಳ ಸಂಭ್ರಮಕ್ಕೆ ಒತ್ತು ನೀಡಬೇಕಿದೆ. ಶಬ್ದ ಮಾಲಿನ್ಯ ನಿಯಂತ್ರಣ ಮುಖ್ಯ. ದಸರಾ ವಾಹನ ದಟ್ಟಣೆ, ಜನರ ನಿಯಂತ್ರಣ, ಮಾರ್ಗದಲ್ಲಿನ ಬದಲಾವಣೆ ಯೋಜನೆ ರೂಪಿಸಲು ಇಲಾಖೆ ಸಿದ್ಧವಾಗಿದೆ. ಎಲ್ಲರ ಸಹಕಾರದಿಂದ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ ್ಳಬಹುದು ಎಂದರು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಎಲ್ಲ ಮಂಟಪಗಳ ಜೊತೆ ಪೊಲೀಸ್ ಇಲಾಖೆಯ ಸಹಕಾರ ಮುಖ್ಯ ಎಂದರು. ನಿಕಟಪೂರ್ವ ಸಮಿತಿ ಅಧ್ಯಕ್ಷ ಬಿ. ಎನ್. ಪ್ರಕಾಶ್ ಕಾರ್ಯಕ್ರಮಗಳ ಮಾಹಿತಿ ಹಂಚಿಕೊAಡರು.

ಡಿವೈಎಸ್‌ಪಿ ಗಂಗಾದರಪ್ಪ, ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು, ಉಪನಿರೀಕ್ಷಕ ರೂಪಾದೇವಿ ಬಿರಾದರ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ದಶಮಂಟಪ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಇದ್ದರು.