ಕೂಡಿಗೆ, ಅ. ೧೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದಲ್ಲಿರುವ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ, ಮಂಥರ್ ಗೌಡ ಅವರು ಭೇಟಿ ನೀಡಿ ವಿಶ್ವವಿದ್ಯಾಲಯದ ಸಂಪೂರ್ಣವಾದ ಮಾಹಿತಿಯನ್ನು ಕುಲಪತಿಗಳಿಂದ ಪಡೆದುಕೊಂಡರು.
ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರು ಅವರು ಕೊಡಗು ವಿಶ್ವವಿದ್ಯಾಲಯವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಬೇರ್ಪಡೆ ಯಾದ ವಿವರ ಮತ್ತು ಅದಕ್ಕೆ ಸಂಬAಧಿಸಿದ ಸವಿಸ್ತಾರವಾದ ಮಾಹಿತಿಯನ್ನು ಮತ್ತು ಅಭಿವೃದ್ಧಿಗೆ ಪೂರಕವಾದ ಯೋಜನೆಯ ಅಂಶಗಳ ಬಗ್ಗೆ ಮತ್ತು ವಿಶ್ವವಿದ್ಯಾನಿಲಯದ ಅಕಾಡೆಮಿ ಸ್ಥಾಪನೆ ಮಾಡುವ ಬಗ್ಗೆ ವಿಶ್ವವಿದ್ಯಾನಿಲಯ ಅಧೀನಕ್ಕೆ ಒಳಪಡುವ ಹೆಚ್ಚುವರಿ ಜಾಗದ ದಾಖಲೆಗಳನ್ನು ಸರಿಪಡಿಸುವ ಮತ್ತು ಈಗಾಗಲೇ ಮಾಜಿ ಸೈನಿಕರಿಗೆ ನೀಡಿರುವ ಜಾಗವನ್ನು ಕೇಂದ್ರಕ್ಕೆ ನೀಡಿ ಅವರುಗಳಿಗೆ ಬದಲಿ ಜಾಗವನ್ನು ನೀಡುವ ಬಗ್ಗೆ, ಪ್ರಮುಖವಾಗಿ ಅಳುವಾರದಿಂದ ವಿಶ್ವವಿದ್ಯಾಲಯ ಕೇಂದ್ರದ ಒಳಗೆ ಬರುವ ರಸ್ತೆಯನ್ನು ಅಗಲೀಕರಣ, ಹೊಸ ರಸ್ತೆಯ ನಿರ್ಮಾಣಕ್ಕೆ ಸಂಬAಧಿಸಿದAತೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಮತ್ತು ನೂತನ ಕೊಡಗು ವಿಶ್ವವಿದ್ಯಾಲಯ ನೂತನ ಕಟ್ಟಡ, ಹುಡುಗ, ಹುಡುಗಿಯ ಹಾಸ್ಟೆಲ್ ವ್ಯವಸ್ಥೆ ಸಂಬAಧಿಸಿದAತೆ ಹೆಚ್ಚುವರಿಯಾಗಿ ಬೇಕಾಗಿರುವ ಕಟ್ಟಡದ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬೇಕಾಗುವ ನೂತನ ಕಟ್ಟಡ ನಿರ್ಮಾಣ ಬಗ್ಗೆ ಮತ್ತು ಕೇಂದ್ರದಲ್ಲಿ ಹೊಸ ಹೊಸ ವಿಭಾಗಗಳ ತೆರೆಯುವ ಬಗ್ಗೆ ಮಾಹಿತಿಯನ್ನು ಉಸ್ತುವಾರಿ ಸಚಿವ ಗಮನಕ್ಕೆ ತರುವ ಮೂಲಕ ಮನವಿಯನ್ನು ಮಾಡಿದರು.
ಪ್ರಮುಖವಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿರುವ ರಸ್ತೆಯ ಕಾಮಗಾರಿಯನ್ನು ಅತಿ ಶೀಘ್ರವಾಗಿ ಆರಂಭಮಾಡು ವಂತೆ ಸಂಬAಧಿಸಿದ ನೀರಾವರಿ ಇಲಾಖೆಯ ಇಂಜಿನಿಯರ್ಗೆ ಸೂಚನೆ ನೀಡಿದರು.
ಈ ಸಂದರ್ಭ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವಿಶ್ವ ವಿದ್ಯಾಲಯ ವಿವಿಧ ವಿಭಾಗದ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಟೇಶ್ ಗೌಡ, ಕೃಷ್ಣಗೌಡ, ಚಂದ್ರಶೇಖರ್, ಮಂಜುನಾಥ, ರಮೇಶ್, ವಸಂತ್ ಸೇರಿದಂತೆ ವಿವಿಧ ಘಟಕ ಪ್ರಮುಖರು ಹಾಜರಿದ್ದರು.