ಮಡಿಕೇರಿ, ಅ. ೧೪: ಆಧುನಿಕ ಕ್ರಾಂತಿಯ ನಡುವೆ ಇದೊಂದು ಹೊಸತಾದ ಸಾಧನೆ. ಮಾನವ ಜನ್ಮ ಪಡೆದಿದ್ದರೂ ಕಾರಣಾಂತರಗಳಿAದ ಮಾನವನ ವಿಶೇಷತೆಯಲ್ಲಿ ಒಂದಾಗಿರುವ ಮಾತನಾಡುವ ಅವಕಾಶವಿಲ್ಲದ ಕೊರಗಿಗೆ ಇದೊಂದು ಸಿಹಿ ಸುದ್ದಿ. ಯುವ ವಿದ್ಯಾರ್ಥಿಗಳ ತಂಡವೊAದು ಮಾತುಬಾರದವರ ಪಾಲಿಗೆ ಹೊಸ ಆಶಾಕಿರಣವಾಗಿದೆ. ಬರೆದದ್ದನ್ನು ಧ್ವನಿಯಾಗಿಸುವ ವಿಶ್ವದ ಮೊದಲ ಆ್ಯಪ್‌ವೊಂದು ಇದೀಗ ಆವಿಷ್ಕಾರಗೊಂಡಿದೆ. ಬರವಣಿಗೆಗಳನ್ನು ಧ್ವನಿರೂಪಕ್ಕೆ ಇಳಿಸಬಹುದಾದ ಹೊಸ ತಂತ್ರಜ್ಞಾನವಿದು. ಶಿವಮೊಗ್ಗದ ಯುವ ಇಂಜಿನಿಯರ್‌ಗಳ ತಂಡವೊAದು ಇದಕ್ಕೆ ತಕ್ಕುದಾದ ಲ್ಯಾಪ್ಟಾಪ್ ಅಭಿವೃದ್ಧಿಪಡಿಸಿದೆ. ಈ ವಿಶಿಷ್ಟವಾದ ಆ್ಯಪ್ ‘ರೈಟೆಲ್’ (Wಡಿiಣeಟಟ) ಹೆಸರಿನಲ್ಲಿ ಇದೀಗ ಸಂಚಲನ ಮೂಡಿಸುತ್ತಿದೆ.

ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬರವಣಿಗೆಯನ್ನೆ ಧ್ವನಿಯಾಗಿಸುವ ವಿಶಿಷ್ಟವಾದ ಆ್ಯಪ್ ‘ರೈಟೆಲ್' ಉಚಿತವಾಗಿ ಲಭ್ಯವಾಗುತ್ತಿದೆ. ಶಿವಮೊಗ್ಗದ ಯುವ ಇಂಜಿನಿಯರ್‌ಗಳಾದ ಅಕ್ಷಯ್ ವಿ. ನಾಯಕ್, ಬಿ.ಎಸ್. ಕಾರ್ತಿಕ್, ಶಿವರಾಜ್, ಮೋನಿಶ್ ಮತ್ತು ಇವರ ಸ್ನೇಹಿತರು ಸೇರಿ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಆ್ಯಪ್‌ನಲ್ಲಿ ಬರೆದದ್ದು ಯಥಾಪ್ರಕಾರವಾಗಿ ಧ್ವನಿಯಾಗಿ ಕೇಳಿಬರುವಂತೆ ಮಾಡಲಾಗಿದೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಗುಜರಾತಿ, ಉರ್ದು, ಮರಾಠಿ ಭಾಷೆಗಳನ್ನು ಬರೆದು ಧ್ವನಿಯಾಗಿಸಬಹುದು.

ವ್ಯಾಸಂಗದಲ್ಲೇ ಪ್ರಯೋಗ: ಮೈಸೂರಿನ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರಿAಗ್‌ನಲ್ಲಿ ವ್ಯಾಸಂಗ ಮಾಡುವಾಗ ಇವರು ಮಾತು ಬರದವರು ಸಂವಹನಕ್ಕಾಗಿ ಬಳಸುವ ಸನ್ನೆ ಭಾಷೆ(ಸೈನ್ ಲಾಂಗ್ವೇಜ್)ಯನ್ನು ಧ್ವನಿರೂಪಕ್ಕೆ ಇಳಿಸುವ ಪ್ರಯತ್ನ ನಡೆಸಿದ್ದರು. ವ್ಯಾಸಂಗ ಮುಗಿದ ಬಳಿಕ ಎಲ್ಲ ಆರು ಜನರು ಬೇರೆ ಕಡೆ ಕೆಲಸ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಈ ಪ್ರಯತ್ನ ಮುಂದುವರಿಸಿದ್ದರು. ಆದರೆ ಒಂದು ಹಂತದಲ್ಲಿ ಇವರು ಪೂರ್ಣಪ್ರಮಾಣದಲ್ಲಿ ಇದೇ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೆಲಸ ತೊರೆದು ತಮ್ಮದೆ ಆದ ಆನ್ರೀಡಲ್ ಟೆಕ್ನಾಲಜಿಸ್ ಹೆಸರಿನಲ್ಲಿ ಸ್ಟಾರ್ಟ್ಅಪ್ ಆರಂಭಿಸಿದರು.

ಕೈಗವಸು(ಗ್ಲೌಸ್)ಗಳ ಸಹಾಯದಿಂದ ಸನ್ನೆ ಭಾಷೆಯನ್ನು ಧ್ವನಿರೂಪಕ್ಕೆ ಇಳಿಸುವ ಪ್ರಯತ್ನ ನಡೆಯುತ್ತಿರುವಾಗಲೇ ಅಕ್ಷಯ್ ಅವರಿಗೆ ಒಂದು ಸವಾಲು ಎದುರಾಗಿತ್ತು. ಬೀರೂರಿನ ಮಾಜಿ ಸೈನಿಕರೊಬ್ಬರು ಧ್ವನಿಪೆಟ್ಟಿಗೆಯ ಶಸ್ತçಚಿಕಿತ್ಸೆ ಮಾಡಿಸಿಕೊಂಡಿದ್ದರಿAದ ಮಾತನಾಡಲು ಸಾಧ್ಯವಾಗದೆ ಎಲ್ಲವನ್ನು ಬರೆದು ತೋರಿಸುವ ಮೂಲಕ ಸಂವಹನ ನಡೆಸುತ್ತಿದ್ದರು. ಅವರಿಗೆ ಸನ್ನೆ ಭಾಷೆ ಸಹ ಬರದ ಕಾರಣ ತುಂಬ ಕಿರಿಕಿರಿಯಾಗುತ್ತಿತ್ತು. ಅಕ್ಷಯ್‌ಗೆ ಪರಿಚಯವಾದ ಅವರು ಸ್ಲೇಟ್‌ನಲ್ಲಿ ಬರೆದದ್ದು ಧ್ವನಿರೂಪಕ್ಕೆ ಬರುವಂತೆ ಮಾಡಿದರೆ ತಮಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಇದನ್ನು ಸವಾಲಾಗಿ ಸ್ವೀಕರಿಸಿದ ಅಕ್ಷಯ್ ಮತ್ತು ಅವರ ಸ್ನೇಹಿತರು ನಿರಂತರ ಎರಡೂವರೆ ತಿಂಗಳ ಕಾಲ ಶ್ರಮಿಸಿ ಹೊಸ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ೧೦ ಭಾಷೆಗಳಲ್ಲಿ ಏನನ್ನೆ ಬರೆದರೂ ಧ್ವನಿರೂಪಕ್ಕೆ ಇಳಿಸುತ್ತದೆ. ಪುರುಷರು ಮತ್ತು ಮಹಿಳೆಯರು ಐದಾರು ಧ್ವನಿರೂಪವನ್ನು ಅಡಕ ಮಾಡಿರುವುದರಿಂದ ಇಲ್ಲಿ ತಮಗೆ ಬೇಕಾದ ಧ್ವನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ೭೦೦ಕ್ಕೂ ಹೆಚ್ಚು ಜನರು ಇದನ್ನೆ ಡೌನ್‌ಲೋಡ್ ಮಾಡಿಕೊಂಡು ಉಪಯೋಗ ಪಡೆದುಕೊಂಡಿದ್ದಾರೆ. ಬರವಣಿಗೆ ಗೊತ್ತಿದ್ದು ಮಾತು ಬಾರದವರಿಗೆ ಇದು ಸಂಜೀವಿನಿಯಾಗಿದೆ.

ಮತ್ತಷ್ಟು ಅಭಿವೃದ್ಧಿ ಬೇಡಿಕೆ: ಬಹಳಷ್ಟು ಜನರು ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರಂತೆ. ಈಗ ತಂಡವು ವಿಶ್ವದ ಎಲ್ಲ ಭಾಷೆಗಳ ಜನರು ಬಳಕೆ ಮಾಡುವಂತೆ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದೆ. ಅಷ್ಟೆ ಅಲ್ಲದೆ ಒಂದೇ ಕೀನಲ್ಲಿ ನಮಸ್ಕಾರ, ಶುಭೋದಯ ಮತ್ತು ಇತರೆ ಧ್ವನಿಗಳನ್ನು ಹೊರಡಿಸುವ ಮೊಬೈಲ್ನಲ್ಲಿ ಇರುವಂತೆ ಎರಡು ಅಕ್ಷರಗಳನ್ನು ಕೀ ಮಾಡುತ್ತಿದ್ದಂತೆ ಪದಗಳು(ಫ್ರೀ ಟೈಪ್) ಬರುವಂತೆ ಹಾಗೂ ಬರೆಯುವುದಕ್ಕಿಂತ ತಮಗೆ ಟೈಪಿಸುವುದು ಸುಲಭ ಎನ್ನುವವರಿಗೆ ಟೈಪಿಂಗ್ನಲ್ಲಿ ಧ್ವನಿ ಹೊರಡಿಸುವ ಪ್ರಯತ್ನಗಳು ನಡೆದಿದೆ. ಬೇಡಿಕೆಗಳಿಗೆ ಅನುಸಾರವಾಗಿ ಹಂತಹAತವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎನ್ನುತ್ತಾರೆ ಅಕ್ಷಯ್.

ಇದರ ಮಧ್ಯೆ ಸನ್ನೆ ಭಾಷೆಯನ್ನು ವಿಶಿಷ್ಟವಾದ ಗ್ಲೌಸ್ ಬಳಸಿ ಧ್ವನಿರೂಪಕ್ಕೆ ಇಳಿಸುವ ತಾಂತ್ರಿಕ ಪ್ರಯೋಗವನ್ನು ತಂಡ ಮುಂದುವರಿಸಿದೆ.

ಆವಿಷ್ಕಾರದ ತಂಡದಲ್ಲಿ

ಹೊಸ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕೊಡಗು ಮೂಲದವರಾದ ಪ್ರಸ್ತುತ ಶಿವಮೊಗ್ಗದಲ್ಲಿ ಇಂಜಿನಿಯರ್ ಆಗಿರುವ ಬಿ.ಎಸ್. ಕಾರ್ತಿಕ್ ಕೂಡ ಒಬ್ಬರು. ಬಿ.ಎಸ್. ಕಾರ್ತಿಕ್ ಹಾಗೂ ಅಕ್ಷಯ್ ವಿನಾಯಕ್ ಈ ತಂಡದ ನಾಯಕರಂತಿದ್ದಾರೆ. ಇವರೊಂದಿಗೆ ಭಟ್ಕಳದ ಶಿವರಾಜ್, ಶಿವಮೊಗ್ಗದ ಮೋನಿಷ್ ಮತ್ತಿತರರಿದ್ದಾರೆ.

ಕಾರ್ತಿಕ್ ಅವರ ತಾಯಿ ಕಲ್ಪನ ಈ ಹಿಂದೆ ಶನಿವಾರಸಂತೆಯ ಸುತ್ತಮುತ್ತಲ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲ್ಪನಾ ಹಾಗೂ ಕಾರ್ತಿಕ್‌ನ ಸಹೋದರ ನಾಗರಾಜ್ ಶನಿವಾರಸಂತೆ ಎರಡನೇ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಕಾರ್ತಿಕ್ ಈ ಹಿಂದೆ ಅಲ್ಲಿನ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಬಾಲ್ಯವನ್ನು ಕೊಡಗಿನಲ್ಲೇ ಕಳೆದಿದ್ದರು. ಇದೀಗ ಈ ನೂತನ ಆವಿಷ್ಕಾರದಲ್ಲಿ ಇವರೂ ಒಬ್ಬರು ಪಾತ್ರಧಾರಿಯಾಗಿರುವುದು ಹೆಮ್ಮೆಯಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕಾರ್ತಿಕ್ ತಮ್ಮೆಲ್ಲರ ಪೋಷಕರ ಸಹಕಾರದಿಂದ ಇದು ಯಶಸ್ಸು ಕಂಡಿದೆ. ಇದೀಗ ಹಲವಾರು ಜನರು ಸೇರಿದಂತೆ ರೋಟರಿಯಂತಹ ಸಂಸ್ಥೆಗಳು ಪೂರಕ ಸಹಕಾರ ನೀಡಲು ಮುಂದೆ ಬರುತ್ತಿರುವುದಾಗಿ ಹರ್ಷ ವ್ಯಕ್ತಪಡಿಸಿದರು.