ಕೂಡಿಗೆ, ಅ. ೧೪: ಕಳೆದ ೫ ವರ್ಷಗಳ ಹಿಂದೆ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲವಾಗುವಂತೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ವಾಗುವಂತೆ ಘಟಕಗಳನ್ನು ಜಿಲ್ಲಾ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಆರಂಭಿಸ ಲಾಗಿತ್ತು. ಆದರೆ, ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಮೂಲೆಗುಂಪಾಗುವುದರ ಜೊತೆಗೆ ಕಾಡುಮಯವಾಗುತ್ತಿವೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ಒಂದೊAದು ಘಟಕಗಳಿಗೆ ರೂ. ೪ ಲಕ್ಷಕ್ಕೂ ಹೆಚ್ಚು ಹಣವನ್ನು ಉಪಯೋಗಿಸಿ ಘಟಕವನ್ನು ಪ್ರಾರಂಭ ಮಾಡಲಾಗಿತ್ತು. ಈ ಘಟಕದಲ್ಲಿ ನೀರು ಪಡೆಯಲು ಒಂದು ರೂಪಾಯಿ ಹಣದ ಕಾಯಿನ್ ಹಾಕಿ ೨೦ ಲೀಟರ್ ನೀರು ಪಡೆಯುವ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ ಅದಕ್ಕೆ ಬೇಕಾಗುವ ಕರೆನ್ಸಿ ಮಾದರಿಯ ಕಾರ್ಡ್ಗಳನ್ನು ಗ್ರಾಮ ಪಂಚಾಯಿತಿಯ ವತಿಯಿಂದ ನೂರು ರೂಪಾಯಿ ಕಟ್ಟಿಸಿಕೊಂಡು ಗ್ರಾಹಕರಿಗೆ ನೀಡಲಾಗಿತ್ತು. ಆದರೆ ಪಡೆದ ಕರೆನ್ಸಿ ಕಾರ್ಡ್ ಉಪಯೋಗಕ್ಕೆ ಬಾರದೆ ಗ್ರಾಹಕರಲ್ಲೇ ಉಳಿದುಕೊಂಡಿವೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭದಿAದ ೫ ವರ್ಷಗಳವರೆಗೆ ಅವುಗಳ ನಿರ್ವಹಣಾ ಜವಾಬ್ದಾರಿ ಗುತ್ತಿಗೆದಾರ ನದ್ದಾಗಿರುತ್ತದೆ. ಆದರೆ ಯೋಜನೆ ಹಣವನ್ನು ಪಡೆದ ಗುತ್ತಿಗೆದಾರ ಇವುಗಳ ದುರಸ್ತಿಗೆ ಮುಂದಾಗದೆ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳ ಯಂತ್ರಗಳು ದುರಸ್ತಿ ಗೀಡಾಗಿ ತುಕ್ಕು ಹಿಡಿಯುವಂತಾಗಿದೆ.
ಗ್ರಾಮಾAತರ ಪ್ರದೇಶದ ಜನರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಈ ಯೋಜನೆಗೆ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಯೋಜನೆ ಯಡಿಯಲ್ಲಿ ಲಕ್ಷಾಂತರ ಹಣವನ್ನು ವ್ಯಯ ಮಾಡಿದರೂ ಜನರಿಗೆ ಮಾತ್ರ ನೀರಿನ ಸೌಲಭ್ಯ ಇಲ್ಲದಾಗಿದೆ. ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಾಮಫಲಕ ಮಾತ್ರ ಇದೆ. ಆದರೆ ಶುದ್ಧ ನೀರು ಮಾತ್ರ ಬರುತ್ತಿಲ್ಲ. ಜಿಲ್ಲೆಯ ಅನೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಕೆಲ ದಿನಗಳವರೆಗೆ ತಾಲೂಕು ಪಂಚಾಯಿತಿ ಅಧೀನದ ಗ್ರಾಮೀಣ ಕುಡಿಯುವ ನೀರು ವಿಭಾಗದವರು ನಿರ್ವಹಣೆ ಮಾಡಿ ನಂತರ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದು ಹೇಳುತ್ತಾ ಬಂದರು ಇದುವರೆಗೂ ತಾಲೂಕು ಪಂಚಾಯಿತಿಯಿAದ ಗ್ರಾಮ ಪಂಚಾಯಿತಿ ಹಸ್ತಾಂತರವಾಗಿಲ್ಲ. ಅದರಿಂದಾಗಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರು ಯಾವುದೇ ರೀತಿಯ ಜವಾಬ್ದಾರಿ ತೆಗೆದುಕೊಳ್ಳದೆ ಅನೇಕ ಘಟಕಗಳು ಮೂಲೆ ಗುಂಪಾಗಿ ಕಾಡುಪಾಲಾಗುತ್ತಿವೆ.
ಇದಕ್ಕೆ ಸಂಬAಧಿಸಿದ ತಾಲೂಕು ಮಟ್ಟದ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಘಟಕಗಳನ್ನು ನಿರ್ವಹಣೆಗೆ ವಹಿಸಲಾಗಿದ್ದ ಅಲ್ಲದೆ ಅದರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಯವರು ನೋಡಿ ಕೊಳ್ಳಬೇಕು ಎನ್ನುತ್ತಾರೆ. ಆದರೆ, ಇತ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ಹಸ್ತಾಂತರ ಇದುವರೆಗೂ ಆಗಿರುವುದಿಲ್ಲ, ಗ್ರಾಮ ವ್ಯಾಪ್ತಿಯಲ್ಲಿ ಜಲಜೀವನ್ ಯೋಜನೆಯಡಿಯಲ್ಲಿ ಗ್ರಾಮಗಳ ವಾರ್ಡ್ಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ಮತ್ತು ತಾಲೂಕು ಪಂಚಾಯಿತಿ ಕುಡಿಯುವ ನೀರಿನ ಸರಬರಾಜು ಯೋಜನೆಯ ಅಧಿಕಾರಿಗಳ ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೆ ಯೋಜನೆ ಯಲ್ಲಿ ಲಕ್ಷಾಂತರ ಹಣವನ್ನು ಖರ್ಚು ಮಾಡಿದ ಕುಡಿಯುವ ನೀರಿನ ಘಟಕಗಳು ಮೂಲೆ ಗುಂಪಾಗುತ್ತಿವೆ. ಮುಂದಿನ ದಿನಗಳಲ್ಲಿ ಸಂಬAಧಿಸಿದ ಇಲಾಖೆಯವರು ಘಟಕಗಳನ್ನು ಪರಿಶೀಲನೆ ನಡೆಸಿ ಅವುಗಳ ಚಾಲನೆಗೆ ಮುಂದಾಗಬೇಕೆAದು ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಗ್ರಹವಾಗಿದೆ. ಅಲ್ಲದೆ ಮೊದಲು ನೀಡಿರುವ ನೀರು ಪಡೆಯುವ ಕರೆನ್ಸಿಗಳ ಹಣವನ್ನು ಗ್ರಾಹಕರಿಗೆ ನೀಡುವಂತೆ ಸಾರ್ವಜನಿಕ ಮತ್ತು ಗ್ರಾಮಸ್ಥರ ಒತ್ತಾಯವಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ.