ವೀರಾಜಪೇಟೆ, ಅ. ೧೪: ಕಾಕೋಟುಪರಂಬು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಪೂಳಂಡ ವಿನು ಪೆಮ್ಮಯ್ಯ ಅವರು ಮುಂದಿನ ಐದು ವರ್ಷಗಳ ಅವಧಿಗೆ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಳ್ಳಿರ ಕೆ ಪ್ರಕಾಶ್, ನಿರ್ದೇಶಕರಾಗಿ ಮಂಡೇಟಿರ ಅನಿಲ್ ಅಯ್ಯಪ್ಪ, ಕಾಳಮಂಡ ಅಪ್ಪಚ್ಚ, ಮೇವಡ ಸಚಿನ್ ಬೋಪಣ್ಣ, ಅಮ್ಮಂಡಿರ ಗಣಪತಿ, ಅರೆಯಂಡ ಭೀಮಯ್ಯ, ಅಮ್ಮಂಡಿರ ಕೆ. ಮುತ್ತಮ್ಮ, ಕೇತಿರ ಕೆ. ಬೊಜಮ್ಮ, ಕಟ್ಟೆರ ಬಿ. ಮಾಚಯ್ಯ, ಮರಾಠಿ ಬಿ. ರವಿ, ಚಂಗೆಕುಟ್ಟ ತಿಮ್ಮಯ್ಯ, ಇವರುಗಳು ಆಯ್ಕೆಯಾಗಿದ್ದಾರೆ.

ಆರ್ಜಿ ಪಂಚಾಯಿತಿ ಕಾರ್ಯದರ್ಶಿ ಬಿ. ರಾಜನ್ ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಟ್ಟೆರ ಪೂಣಚ್ಚ ಉಪಸ್ಥಿತರಿದ್ದರು.