ಸುಂಟಿಕೊಪ್ಪ, ಅ. ೧೨: ಏಳನೇ ಹೊಸಕೋಟೆ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದ ವ್ಯವಸ್ಥಾಪಕ ರಮೇಶ್ ಅವರು ಮೃತಪಟ್ಟ ಹಿನ್ನೆಲೆ ಕುಶಾಲನಗರ ತಾಲೂಕು ತಹಶೀಲ್ದಾರ್ ನಿರ್ದೇಶನದಂತೆ ಸುಂಟಿಕೊಪ್ಪ ಹೋಬಳಿ ಉಪತಹಶೀಲ್ದಾರ್ ಶಿವಪ್ಪ ಹಾಗೂ ಸಿಬ್ಬಂದಿಯವರು ಅನಾಢಾಶ್ರಮಕ್ಕೆ ಭೇಟಿ ನೀಡಿದರು.

೨೭ ಮಂದಿ ಆಶ್ರಮ ವಾಸಿಗಳನ್ನು ಭೇಟಿಯಾಗಿ ಅವರ ಆರೋಗ್ಯದ ಹಾಗೂ ಮೂಲಸೌಕರ್ಯಗಳ ಬಗ್ಗೆ ವಿಚಾರಿಸಿ ಕುಂದುಕೊರತೆಗಳನ್ನು ಪರಿಶೀಲಿಸಿ ಆಶ್ರಮವಾಸಿಗಳಿಗೆ ಸಾಂತ್ವನ ಹೇಳಿ ಪ್ರಸ್ತುತ ಪರಿಸ್ಥಿತಿ ಬಗ್ಗೆ ತಾಲೂಕು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಕಂದಾಯ ಪರಿವೀಕ್ಷಕರಾದ ಎಂ.ಹೆಚ್.ಪ್ರಶಾAತ್, ಆಡಳಿತ ಅಧಿಕಾರಿ ಪಿ.ಎಂ. ನಸೀಮ, ಸಹಾಯಕ ಶಿವಪ್ಪ ಇತರರು ಹಾಜರಿದ್ದರು.