ಕುಶಾಲನಗರ, ಅ. ೧೨: ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುವುದರ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಹಾಗೂ ಆರ್.ಪಿ.ಐ. ಪಕ್ಷದ ಜಿಲ್ಲಾಧ್ಯಕ್ಷ ಕೆ.ಬಿ. ರಾಜು ಆರೋಪಿಸಿದರು.
ಕುಶಾಲನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ಹಿಂದಿನಿAದಲೂ ಮಹಿಷಾ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಮಹಿಷಾ ಡ್ರಾವಿಡರ ಪೂರ್ವಜ ಮೈಸೂರನ್ನು ಆಳಿದ ಅರಸರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಸಂಸದರು ದೆವ್ವ ಮತ್ತು ರಾಕ್ಷಸನಿಗೆ ಹೋಲಿಸಿರುವುದು ಖಂಡನೀಯ. ಮಹಿಷನನ್ನು ವಿರೋ ಧಿಸಲು ಸಂಸದ ಪ್ರತಾಪ್ ಸಿಂಹ ಅವರಿಗೆ ನಿಖರ ಏನಾದರೂ ಕಾರಣಗಳು ಇದ್ದ ಬಗ್ಗೆ ತಿಳಿಸಬೇಕು.
ಅವರ ಪೂರ್ವಜರಿಗೆ ಏನಾದರು ವ್ಯಾಜ್ಯ ಇದ್ದಲ್ಲಿ ಅದನ್ನಾದರೂ ಜನರಿಗೆ ತಿಳಿಸಲಿ. ನಮ್ಮ ಪೂರ್ವ ಜನಾಗಿರುವ ಮಹಿಷಾ ದಸರಾ ಆಚರಿ ಸುವುದರಲ್ಲಿ ತಪ್ಪೇನಿದೆ. ಸಂಸದರು ಪ್ರಚಾರಕ್ಕಾಗಿ ಬಿಜೆಪಿಯಲ್ಲಿ ಖಾಲಿ ಇರುವ ರಾಜ್ಯಾಧ್ಯಕ್ಷ ಹುದ್ದೆಗಾಗಿ ಈ ರೀತಿ ಇಲ್ಲಸಲ್ಲದ ಹೇಳಿಕೆಯೊಂದಿಗೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಚಾಮುಂಡಿ ಮಹಿಷನನ್ನು ಸಂಹರಿಸಿಲ್ಲ ಎಂಬುದಕ್ಕೆ ಕಾಲಘಟ್ಟಗಳೆ ಸಾಕ್ಷಿ ಹೇಳುತ್ತಿವೆ. ಸಮಾಜದಲ್ಲಿ ಇಲ್ಲಸಲ್ಲದ ಕಾರಣಗಳನ್ನು ನೀಡಿ ಶಾಂತಿ ಕದಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ತಮ್ಮ ಸಂಘಟನೆ ಕೂಡ ಮಹಿಷಾ ದಸರಾಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಆರ್.ಪಿ.ಐ. ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ. ಲತಾ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ವೀಣಾ ಇದ್ದರು.