ಚೆಯ್ಯಂಡಾಣೆ, ಅ. ೧೨: ಕೊಂಡAಗೇರಿಯ ಕೊಡಗು ಜಿಲ್ಲಾ ಮುಸ್ಲಿಂ ಅನಾಥಾಲಯದಲ್ಲಿ ತಾ.೧೩ ರಂದು (ಇಂದು) ಗ್ರಾಂಡ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಗ್ರಿಬ್ ನಮಾಜ್ ನಂತರ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸಯ್ಯದ್ ಮೆಹ್ದಿ ತಂಗಳ್ ಲಕ್ಷ ದೀಪ್, ಕೊಂಡAಗೇರಿ ಅನಾಥಾಲಯದ ಅಧ್ಯಕ್ಷ ಹುಸೈನ್ ಸಖಾಫಿ ಎಮ್ಮೆಮಾಡು, ಕಾರ್ಯಾಧ್ಯಕ್ಷ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಕೊಂಡAಗೇರಿ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ಝಹರಿ ಮತಿತ್ತರ ಉಲಮಾ, ಉಮರ, ನೇತಾರರು ಭಾಗವಹಿಸಲಿದ್ದಾರೆ ಎಂದು ಅನಾಥಾಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.