ಶನಿವಾರಸAತೆ, ಅ. ೧೨: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಉತ್ತಮ ಮಳೆ ಸುರಿಯು ತ್ತಿದೆ. ಜೂನ್, ಜುಲೈ, ಆಗಸ್ಟ್ನಲ್ಲಿ ಮುನಿಸಿ ಕೊಂಡಿದ್ದ ವರುಣದೇವ ಅಕ್ಟೋಬರ್ ನಲ್ಲಿ ಪ್ರಸನ್ನನಾಗಿರುವಂತೆ ಮಳೆಯಾಗುತ್ತಿದೆ. ಬೆಳಿಗ್ಗೆ ಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ವಿದ್ದು ನಂತರ ದಟ್ಟವಾಗಿ ಮೋಡ ಕವಿದು ಗುಡುಗು ಸಹಿತ ಜೋರಾಗಿ ಮಳೆ ಸುರಿಯುತ್ತಿದೆ.

ಈ ವ್ಯಾಪ್ತಿಯ ರೈತರಿಗೇನೋ ಅಕಾಲ ದಲ್ಲಿ ಸುರಿಯುತ್ತಿರುವ ಮಳೆ ಖುಷಿ ನೀಡುತ್ತಿ ದೆಯಾದರೂ ಜೊತೆಯಲ್ಲೆ ಆತಂಕವೂ ಮೂಡುತ್ತಿದೆ. ಕಾಫಿ ಗಿಡಗಳಲ್ಲಿ ಕಾಫಿ ಹಣ್ಣಾಗು ತ್ತಿದೆ. ಮಳೆ ಕೊರತೆಯಿಂದ ಕಾಫಿ ಹಣ್ಣಾದರೂ ಗುಣಮಟ್ಟದ ಕಾಫಿ ಫಸಲು ದೊರೆಯುವುದು ಅನುಮಾನ. ಕಾಫಿ ಬೇಳೆ ಗಾತ್ರದಲ್ಲಿ ಚಿಕ್ಕದಾ ಗುವ ಸಂಭವವೇ ಹೆಚ್ಚಾಗಿದೆ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ. ಉಮಾಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಳು ಮೆಣಸಿನ ಬಳ್ಳಿಯಲ್ಲಿ ಮಳೆಯ ಏರುಪೇರಿನಿಂದ ಬಹಳ ತಡವಾಗಿ ಕೊತ್ತು ಬಂದಿದ್ದು ಕಾಳುಗಟ್ಟದೆ ಕೊತ್ತು ಉದುರಲು ಪ್ರಾರಂಭವಾಗಿದೆ. ಕಾಳು ಮೆಣಸಿನ ಬೆಳೆ ಕೂಡ ನಷ್ಟವಾಗುವುದು ಖಂಡಿತ. ಹಾಗೆಯೇ ಕಿತ್ತಳೆ ಹಣ್ಣಿನ ಗಾತ್ರ ಸಹ ಚಿಕ್ಕದಿದ್ದು ಕೊಯ್ಲು ಸಮಯ ಡಿಸೆಂಬರ್-ಜನವರಿಯಲ್ಲಿ ಫಸಲು ಉದುರಿ ಹೋಗುವ ಸಂಭವ ಜಾಸ್ತಿ ಇದೆ ಎಂದು ಉಮಾಶಂಕರ್ ಆತಂಕ ವ್ಯಕ್ತಪಡಿಸಿದರು.

ಭತ್ತ ಬೆಳೆವ ಬೆರಳೆಣಿಕೆಯ ರೈತರಲ್ಲೂ ಮಳೆ ಆತಂಕ ಸೃಷ್ಟಿಸಿದೆ. ಭತ್ತದ ಗದ್ದೆಗಳಲ್ಲೂ ಈ ಸಮಯದಲ್ಲೂ ಕೊಳವೆ ಬಾವಿಯಿಂದ ನೀರನ್ನು ಹಾಯಿಸುತ್ತಿದ್ದು ಭತ್ತದ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬಹುದೇನೋ ಆದರೆ, ನೀರಿನ ಆಶ್ರಯ ಇಲ್ಲದ ರೈತರಿಗೆ ಬೆಳೆ ಉಳಿಯದೆ ಒಣಗಿ ಹೋಗುವ ಸಂಭವ ಜಾಸ್ತಿ ಇದೆ. ಒಟ್ಟಿನಲ್ಲಿ ಈ ವರ್ಷ ಎಲ್ಲಾ ಬೆಳೆಗಳಿಂದಲೂ ರೈತರು ನಷ್ಟ ಅನುಭವಿ ಸುವ ಸಂಭವ ಹೆಚ್ಚಾಗಿದೆ ಎಂದು ಬೆಳೆಗಾರರ ಸಂಘದ ಪದಾಧಿಕಾರಿ ಹಾಗೂ ಕೃಷಿಕ ಉಮಾಶಂಕರ್ ಮತ್ತಿತರ ರೈತರು ಬೆಳೆಯ ಬಗ್ಗೆ ಭವಿಷ್ಯ ನುಡಿದರು.

ಗುಡುಗಿನ ಆರ್ಭಟದೊಂದಿಗೆ ಸುರಿಯುವ ಮಳೆ ರೈತರಲ್ಲಿ ಬೆಳೆಯ ಬಗ್ಗೆ ಆತಂಕ ಭಾವನೆ ಮೂಡಿಸುತ್ತಿದ್ದರೇ ಜನಸಾಮಾನ್ಯರಲ್ಲಿ ಮುಂಬರುವ ದಸರಾ ಹಬ್ಬದ ಸಂಭ್ರಮಕ್ಕೆ ಮಳೆ ಮಂಕು ಕವಿಸುತ್ತದೆಯೋ ಎಂಬ ಕೊರಗು ಮೂಡಿಸುತ್ತಿದೆ. -ಶ.ಗ. ನಯನತಾರಾ