ಶನಿವಾರಸಂತೆ, ಅ. ೧೨: ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಾಭಿವೃದ್ಧಿ, ಪಂಚಾಯಿತಿ ಕಟ್ಟಡಗಳ ಅಳತೆ ಮತ್ತು ದರ ಪರಿಷ್ಕರಣೆ, ಪರವಾನಗಿ ಪಡೆಯದೆ ಅಂಗಡಿ ತೆರೆದಿರುವ ಬಗ್ಗೆ, ಸಾಮಾಜಿಕ ಅರಣ್ಯೀಕರಣ ಕಾಮ ಗಾರಿ, ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನ, ಮಾರುಕಟ್ಟೆ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ. ರಸ್ತೆ ಬದಿ ಅಳವಡಿಸಿರುವ ಫಲಕ ತೆಗೆಸುವ ಬಗ್ಗೆ ವಾಣಿಜ್ಯೋದ್ಯಮಿಗಳ ಸಂಘದ ಮನವಿ, ಮುಚ್ಚಿರುವ ಗ್ರಂಥಾಲಯ ಸಮಸ್ಯೆ, ಬೀದಿ ದೀಪಗಳ ಅಳವಡಿಕೆ, ಬಸ್ ನಿಲ್ದಾಣ ನಿರ್ಮಾಣ, ೧೫ನೇ ಹಣಕಾಸು ಯೋಜನೆ, ಕೆಡಿಪಿ ಸಭೆ ಕರೆಯುವ ಬಗ್ಗೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸದ ಸ್ಯರ ಸುದೀರ್ಘ ಚರ್ಚೆ ನಡೆಯಿತು.

ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿ, ಯಾವುದೇ ವಿಷಯ ವಾಗಲಿ ನಡಾವಳಿಕೆಯಿಂದ ತೀರ್ಮಾ ನವಾಗಲಿ. ಕಾನೂನುಬದ್ಧವಾಗಿ ಮಾಡಿದರೆ ಅಧಿಕ ವೆಚ್ಚ. ಮ್ಯಾನ್ ಪವರ್‌ನಿಂದ ಮಾಡಿದರೆ ಉಳಿತಾಯ ಮಾಡಬಹುದು. ಕೆಲವು ವರ್ತಕರು ರಸ್ತೆಯಲ್ಲಿ ಫಲಕ ಅಳವಡಿಸಿದ್ದು ಫಲಕ ತೆಗೆಸುವ ಬಗ್ಗೆ ವರ್ತಕರ ಸಭೆ ಕರೆಯುವಂತೆ ತಿಳಿಸಿದರು.

ವಾಣಿಜ್ಯೋದ್ಯಮಿಗಳ ಸಂಘದ ಪಧಿಕಾರಿಗಳಾದ ಶ್ರೀನಿವಾಸ, ದಿವಾ ಕರ್, ಪ್ರತಾಪ್, ನಾರಾಯಣ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಮೊದಲು ಫಲಕ ತೆಗೆಸಬೇಕು. ಪಟ್ಟಣದಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಆಗಬೇಕು ಎಂದರು. ಸದಸ್ಯ ಎಸ್.ಸಿ. ಶರತ್ ಶೇಖರ್ ಮಾತ ನಾಡಿ, ದೇವಸ್ಥಾನದಿಂದ ದುಂಡಳ್ಳಿ ಗ್ರಾಮ ಪಂಚಾಯಿತಿಯವರೆಗೂ ಪಾರ್ಕಿಂಗ್ ವ್ಯವಸ್ಥೆ ಇದೆ ಈ ಬಗ್ಗೆ ಆರ್.ಟಿ.ಒ. ಅವರಿಗೆ ಮಾಹಿತಿ ಇದೆ ಎಂದು ಸ್ಪಷ್ಟಪಡಿಸಿದರು.

ಸದಸ್ಯರಾದ ಎಸ್.ಎನ್. ರಘು ಹಾಗೂ ಆದಿತ್ಯಾ ಮಾತನಾಡಿ, ಕಸ ವಿಲೇವಾರಿ ಚಾಲಕರ ಸಂಬಳದ ಬಗ್ಗೆ ಹಾಗೂ ಘಟಕದ ಸಮಸ್ಯೆ ಬಗ್ಗೆ ಚರ್ಚಿಸಿದರು. ಈ ಬಗ್ಗೆ ತುರ್ತು ಸಭೆ ಕರೆಯುವಂತೆ ತೀರ್ಮಾನಿ ಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಪಂಚಾಯಿತಿ ಅಭಿವೃದ್ಧಿ ಸಾಧ್ಯ. ಸಮಸ್ಯೆ ಪರಿಹಾರಕ್ಕೆ ಪರಸ್ಪರ ಹೊಂದಾಣಿಕೆ ಮನೋಭಾವವೂ ಮುಖ್ಯ ಎಂದರು.

ಪAಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮದ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಆದಿತ್ಯಗೌಡ, ಎಸ್.ಆರ್. ಮಧು, ಕಾವೇರಿ, ಫರ್ಜಾನಾ, ಸರಸ್ವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ವಸಂತ್ ಕುಮಾರ್, ಲೀಲಾವತಿ, ಫೌಜಿಯಾ ಹಾಜರಿದ್ದರು.