ಮಡಿಕೇರಿ, ಅ. ೧೦: ಭಾಗಮಂಡಲದಲ್ಲಿ ಮೇಲ್ಸೇತುವೆ ಕೆಲಸ ಪೂರ್ಣಗೊಳ್ಳದೆ ತಲಕಾವೇರಿ ಜಾತ್ರೆಗೆ ವಾಹನ ತೆರಳಲು ತಲೆದೋರಿದ್ದ ಸಂಚಾರ ದುರವಸ್ಥೆಯನ್ನು ಜಿಲ್ಲಾಡಳಿತ ತಾತ್ಕಾಲಿಕ ರಸ್ತೆ ರಚನೆ ಮೂಲಕ ಶಮನಗೊಳಿಸಿದೆ.

ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಇತ್ತೀಚೆಗೆ ಭಾಗಮಂಡಲಕ್ಕೆ ತೆರಳಿ ಲೋಕೋಪಯೋಗಿ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಇಲಾಖೆ ವತಿಯಿಂದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾಗಮಂಡಲದಿAದ ಎರಡು ಬದಿಗಳಲ್ಲಿ ತಾತ್ಕಾಲಿಕ ರಸ್ತೆ ಸಿದ್ಧಗೊಳಿಸಿದ್ದು

(ಮೊದಲ ಪುಟದಿಂದ) ತಲಕಾವೇರಿಗೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಮೇಲ್ಸೇತುವೆ ನಿರ್ಮಾಣ ಸಂದರ್ಭ ಅಸ್ತವ್ಯಸ್ತಗೊಂಡಿದ್ದ ರಸ್ತೆಯನ್ನು ಸಮತಟ್ಟು ಮಾಡಿ ತಲಕಾವೇರಿ ಜಾತ್ರೆ ಸಂದರ್ಭ ವಾಹನ ಸಂಚಾರಕ್ಕೆ ಉಂಟಾಗಿದ್ದ ತೊಡಕನ್ನು ನಿವಾರಣೆ ಮಾಡಲಾಗಿದೆ.

ಇದೀಗ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳ ಗೋಡೆಗಳಿಗೆ, ಸ್ವಾಗತ ಕಮಾನಿಗೆ , ಗೋಪುರಗಳಿಗೆ ಬಣ್ಣ ಬಳಿಯುವ ಮೂಲಕ ಆಕರ್ಷಣೆಗೊಳಿಸಲಾಗುತ್ತಿದೆ. ಈ ದಿಸೆಯಲ್ಲಿ ಆಡಳಿತಾಧಿಕಾರಿ ಚಂದ್ರಶೇಖರ್ ಹಾಗೂ ಭಾಗಮಂಡಲ ದೇಗುಲ ಪಾರುಪತ್ತೆಗಾರರಾದ ಪೊನ್ನಣ್ಣ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕಾವೇರಿ ನದಿಯಲ್ಲಿ ತುಂಬಿದ್ದ ಮರಳು-ಹೂಳನ್ನು ಹೊರತೆಗೆಯುವ ಕೆಲಸ ನಿರ್ವಹಿಸಲಾಗಿದೆ. ತಲಕಾವೇರಿಯಲ್ಲಿ ಶುಚಿತ್ವ ನಿರ್ವಹಣೆ ಮಾಡಲಾಗಿದೆ. ತಾ. ೧೭ ರಂದು ಮಧ್ಯಾಹ್ನವೇ ಭಕ್ತಾದಿಗಳು ಭಾಗಮಂಡಲಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿರುವುದರಿಂದ ಎಲ್ಲರಿಗೂ ಅನ್ನ ಸಂತರ್ಪಣೆಯನ್ನು ದೇವಾಲಯ ಆಡಳಿತದಿಂದ ಭಾಗಮಂಡಲದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಈ ನಡುವೆ ಕೊಡಗು ಏಕೀಕರಣ ರಂಗದಿAದ ಎಂದಿನAತೆ ಅ. ೧೭ ರಿಂದ ಪ್ರಾರಂಭಗೊAಡು ಮುಂದಿನ ಕಿರು ಸಂಕ್ರಮಣದವರೆಗಿನ ಒಂದು ತಿಂಗಳ ಕಾಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬಿ.ಎಸ್. ತಮ್ಮಯ್ಯ ಅವರು ಖಾತರಿಪಡಿಸಿದ್ದಾರೆ.

ಈ ನಡುವೆ ಮೇಲ್ಸೇತುವೆ ಕಾಮಗಾರಿ ಕುರಿತು ಪ್ರಶ್ನಿಸಿದಾಗ ಜಾತ್ರೆ ಕಳೆದು ಕಾಮಗಾರಿ ಮುಂದುವರಿಯಲಿರುವುದಾಗಿ ಪ್ರಬಾರ ಇಂಜಿನಿಯರ್ ಶಿವಕುಮಾರ್ “ಶಕ್ತಿ” ಗೆ ತಿಳಿಸಿದ್ದಾರೆ. ತಡೆಗೋಡೆ ಸೇರಿದಂತೆ ಉಳಿದ ಎಲ್ಲಾ ಕೆಲಸಗಳನ್ನು ಮುಂದಿನ ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಗೊಳಿಸಿದ್ದಾರೆ. -“ಚಕ್ರವರ್ತಿ”