ಮಡಿಕೇರಿ, ಅ. ೧೦: ಜಿಲ್ಲೆಯ ಏಕೈಕ ತಾಂತ್ರಿಕ ಕಾಲೇಜು ಆಗಿರುವ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ೨೫ನೇ ವರ್ಷದ ಸಂಭ್ರಮದಲ್ಲಿದ್ದು, ನ. ೨ ರಿಂದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಲಾಗುವುದು ಎಂದು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಮುಕ್ಕಾಟಿರ ಕಾರ್ಯಪ್ಪ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೯೯ರಲ್ಲಿ ಹಿರಿಯರ ಚಿಂತನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಮೊದಲ ಹಾಗೂ ಏಕೈಕ ಇಂಜಿನಿಯರಿAಗ್ ಕಾಲೇಜು ಇಂದು ಹಲವು ಸವಾಲುಗಳನ್ನು ಎದುರಿಸಿ, ಪ್ರತಿಷ್ಠಿತ ಕಾಲೇಜಾಗಿ ಹೊರಹೊಮ್ಮಿದೆ. ಸಾವಿರಾರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿ ಇರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಗತ್ಯ ಸೌಲಭ್ಯಗಳು, ನುರಿತ ಬೋಧಕರನ್ನು ಕಾಲೇಜು ಹೊಂದಿದೆ. ೨೫ರ ವರ್ಷಾಚರಣೆಯನ್ನು ಅದ್ದೂರಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.

ಬೆಳ್ಳಿಹಬ್ಬದ ಸಂಚಾಲಕಿ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಮಾತನಾಡಿ, ಬೆಳ್ಳಿ ಹಬ್ಬದ ಲೋಗೋವನ್ನು ನ. ೨ ರಂದು ಅನಾವರಣ ಮಾಡಲಾಗುವುದು. ಅಂದು ಬೆಳಿಗ್ಗೆ ವೀರಾಜಪೇಟೆಯಿಂದ ಹಳ್ಳಿಗಟ್ಟು ತನಕ ಬೈಕ್ ಜಾಥಾ, ಗೋಣಿಕೊಪ್ಪ ಕಾವೇರಿ ಕಾಲೇಜಿನಿಂದ ಸಿಐಟಿ ಕಾಲೇಜು ತನಕ ೧೦ ಕಿ.ಮೀ ಮ್ಯಾರಥಾನ್ ಆಯೋಜಿಸಲಾಗಿದೆ. ಜಿಲ್ಲೆಯ ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದಾಗಿದೆ. ನ. ೩ ಮತ್ತು ೪ ಹಾಗೂ ೫ ರಂದು ಕೃಷಿಯಂತ್ರ ಮೇಳವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಯೋಜನೆಗಳ ಪ್ರದರ್ಶನ, ಅಂತರ ಇಂಜಿನಿಯರಿAಗ್ ಕಾಲೇಜುಗಳ (ಮೊದಲ ಪುಟದಿಂದ) ನಡುವೆ ಟೆಕ್ನಿಕಲ್ ಫೆಸ್ಟ್, ನುರಿತರಿಂದ ಉಪನ್ಯಾಸ, ಸೆಮಿನಾರ್‌ಗಳು, ತಾಂತ್ರಿಕ, ಸಾಂಸ್ಕೃತಿಕ, ಕ್ರೀಡಾ ಹಬ್ಬಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಬೆಳ್ಳಿಹಬ್ಬವನ್ನು ಸಂಭ್ರಮಿಸಲಾಗುವುದು ಎಂದು ವಿವರಿಸಿದರು.

ಉಪನ್ಯಾಸಕ ಡಾ. ರಾಮಕೃಷ್ಣ ಮಾತನಾಡಿ, ನ. ೩ ರಿಂದ ೫ ರತನಕ ‘ಕೃಷಿದೇವೋಭವ’ ಹೆಸರಿನಲ್ಲಿ ಕೃಷಿಮೇಳ ಆಯೋಜಿಸಲಾಗಿದ್ದು, ದೇಶದ ವಿವಿಧೆಡೆಗಳಿಂದ ಕೃಷಿಗೆ ಪೂರಕ ಯಂತ್ರಗಳ ಮಾರಾಟ ಹಾಗೂ ಪ್ರದರ್ಶನದ ಜೊತೆಗೆ ಮಾಹಿತಿ ನೀಡುವ ಕಾರ್ಯಕ್ರಮ ಇರಲಿದೆ. ಇದೇ ಸಂದರ್ಭ ಉಚಿತ ಮಣ್ಣಿನ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು. ನ. ೫ ರಂದು ಖ್ಯಾತ ಸಂಗೀತಗಾರ ಪ್ರವೀಣ್ ಗೋಡ್ಕಿಂಡಿ ತಂಡದಿAದ ವಿಶೇಷ ಕಾರ್ಯಕ್ರಮ ಇರಲಿದೆ.

ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಮೂಲಕ ಕೃಷಿ ಸಚಿವರಿಗೆ ಆಹ್ವಾನ ನೀಡಿದ್ದೇವೆ. ಅವರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.