ಕೂಡಿಗೆ, ಅ. ೧೦: ಶ್ರೀ ದಂಡಿನಮ್ಮತಾಯಿ ನವರಾತ್ರಿ ಪೂಜಾ ಸೇವಾ ಸಮಿತಿ ಇವರ ವತಿಯಿಂದ ೭ನೇ ವರ್ಷದ ನವರಾತ್ರಿ ಪೂಜಾ ಕಾರ್ಯವು ೧೫ರಿಂದ ೨೩ರ ವರೆಗೆ ದಿನಂಪ್ರತಿ ದೇವಾಲಯದ ಆವರಣದಲ್ಲಿ ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. ತಾ.೨೦ ರಂದು ಆವರಣದಲ್ಲಿ ಹೋಮ ಹವನ, ದೇವಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ದೇವಿಗೆ ಬಾಗಿನ ಸಮರ್ಪಿಸಲಾಗುವುದು ಎಂದು ಸಮಿತಿ ತಿಳಿಸಿದೆ.