ಮಡಿಕೇರಿ, ಅ. ೧೦: ಆನೆದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳೊಂದಿಗೆ ಒಂದು ಆನೆದಂತವನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಮೂಲದವರಾದ ಬೆಟ್ಟಪ್ಪ ಹಾಗೂ ಮಹಾಲಿಂಗ ಬಂಧಿತ ಆರೋಪಿಗಳು. ಇವರಲ್ಲಿ ಬೆಟ್ಟಪ್ಪ ಕೆಲವು ವರ್ಷಗಳಿಂದ ಕೊಡಗಿನ ವಿವಿಧೆಡೆ ಕೂಲಿ ಕೆಲಸ ನಿರ್ವಹಿಸುತ್ತಿದ್ದರೆ ಮತ್ತೋರ್ವ ಆರೋಪಿ ಮಹಾಲಿಂಗ ಚಾಮರಾಜನಗರ ಅನೂರಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದಾನೆ.

ಮಡಿಕೇರಿ ಮಂಗಳೂರು ರಾಷ್ಟಿçÃಯ ಹೆದ್ದಾರಿಯ ಎಂ.ಆರ್.ಎಫ್. ಟಯರ್ ಶಾಪ್ ಮುಂಭಾಗದ ತಿರುವು ರಸ್ತೆಯ ಬದಿಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕ ನಿನ್ನೆ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭ ಆನೆ ದಂತದೊAದಿಗೆ ಇಬ್ಬರು ಸಿಕ್ಕಿ ಬಿದ್ದಿದ್ದು ವಿಚಾರಣೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಎಸ್.ಪಿ. ಸುಧೀರ್‌ಕುಮಾರ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕರಾದ ಕಾಶಿ ಮಾರ್ಗದರ್ಶನದಲ್ಲಿ ಸಂಚಾರಿ ದಳದ ಪಿ.ಎಸ್.ಐ.ಸಿ.ಯು ಸವಿ, ಹೆಡ್ ಕಾನ್ಸ್ಟೇಬಲ್‌ಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ್, ಸಿಬ್ಬಂದಿಗಳಾದ ಸ್ವಾಮಿ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು.