ಕಣಿವೆ, ಅ. ೧೦: ಇಲ್ಲಿಗೆ ಸಮೀಪದ ಚಿನ್ನೇನಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ರೈತರು ಬೆಳೆದಂತಹ ಅಪಾರ ಪ್ರಮಾಣದ ಜೋಳ ಮತ್ತು ಮರಗೆಣಸು ಫಸಲು ಕಾಡಾನೆಗಳ ಪಾಲಾಗುತ್ತಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದಾರೆ. ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು, ಚಿನ್ನೇನಹಳ್ಳಿ, ಹಳಗೋಟೆ, ಆರನೇ ಹೊಸಕೋಟೆ, ಅಳುವಾರ ವ್ಯಾಪ್ತಿಯ ಕಾಡಂಚಿನ ಉದ್ದಕ್ಕೂ ರೈತರು ಬೆಳೆದಂತಹ ಕೃಷಿ ಫಸಲು ಭಾಗಶಃ ಕಾಡಾನೆಗಳ ಪಾಲಾಗುತ್ತಿವೆ.

ತಿನ್ನುತ್ತಿದ್ದು ಚಿನ್ನೇನಹಳ್ಳಿ ಗ್ರಾಮದ ಕೃಷಿಕರಾದ ಯೋಗೇಶ, ಚಂದ್ರಣ್ಣ, ಜಗಣ್ಣ, ರಾಜಶೇಖರ, ಪೊನ್ನಮ್ಮ, ಜಯಮ್ಮ, ಸದಾಶಿವ, ಕಾಂತರಾಜು, ನಾರಾಯಣ ಮೊದಲಾದವರು ಬೆಳೆದ ಮರಗೆಣಸು ಹಾಗೂ ಜೋಳದ ಫಸಲು ನಷ್ಟವಾಗಿವೆ.

ಇನ್ನು ವೆಂಕಟೇಶ ಹಾಗೂ ಪ್ರಮೀಳ ದಂಪತಿ ಐದು ಎಕರೆ ಯಲ್ಲಿ ಬೆಳೆದ ಜೋಳದ ಬೆಳೆ ಸಂಪೂರ್ಣ ಕಾಡಾನೆಗಳ ಪಾಲಾಗಿದೆ.