ಕೂಡಿಗೆ, ಅ. ೧೦ : ಕುಶಾಲನಗರ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ವತಿಯಿಂದ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಸುಗಳ ಸಾಕಾಣಿಕೆ ಮಾಡಿರುವ ರೈತರುಗಳ ಮನೆ ಮನೆಗೆ ತೆರಳಿ ಇಲಾಖೆಯ ವತಿಯಿಂದ ಉಚಿತವಾಗಿ ಕಾಲುಬಾಯಿ ಜ್ವರಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯನ್ನು ಹಾಕುವ ಕಾರ್ಯದಲ್ಲಿ ಇಲಾಖೆ ಸಿಬ್ಬಂದಿಗಳು ತೊಡಗಿದ್ದಾರೆ.

ಸರಕಾರದ ಆದೇಶದಂತೆ ಇಲಾಖೆ ಸೂಚನೆಯಂತೆ ಸಿಬ್ಬಂದಿಗಳು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆಕೂಡಿಗೆ, ಭುವನಗರಿ, ಸೀಗೆಹೊಸೂರು ಮಲ್ಲೇನಹಳ್ಳಿ, ಮದಲಾಪುರ ಗ್ರಾಮಗಳಿಗೆ ಇಲಾಖೆಯವರು ಮೂರು ತಂಡಗಳಾಗಿ ತೆರಳಿ ಹಸುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯವನ್ನು ಆರಂಭ ಮಾಡಿರುತ್ತಾರೆ. ಈ ಸಂದರ್ಭ ಇಲಾಖೆಯ ಸಿಬ್ಬಂದಿಗಳಾದ ಸುರೇಶ್, ಶೋಭಾ, ಸುಜಾತ, ವಿನೋದ್, ಗಣೇಶ್, ಪ್ರಿನಿಯಾರ್ ಇದ್ದರು.