ಚೆಟ್ಟಳ್ಳಿ, ಅ. ೧೦: ಚೆಟ್ಟಳ್ಳಿ ಕೈಲ್ಪೊಳ್ದ್ ಸಂತೋಷಕೂಟ ಹಾಗೂ ಕೊಡವ ಸಮಾಜದ ವಾರ್ಷಿಕ ಮಹಾಸಭೆ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಚೆಟ್ಟಳ್ಳಿಯ ಜೋಮಾಲೆ ಪೊಮ್ಮ ಕ್ಕಡ ಕೂಟದ ಮುತುವರ್ಜಿಯ ಫಲವಾಗಿ ಚೆಟ್ಟಳ್ಳಿ ಕೊಡವ ಸಮಾ ಜದ ಸ್ಥಾಪನೆಯಾಯಿತು. ಕೊಡವ ಜನಾಂಗದ ಆಚಾರ, ವಿಚಾರ, ಒಗ್ಗಟ್ಟು, ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ ಶ್ರಮಿಸಲಿದೆ. ಎಲ್ಲರು ಸಹಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ತಿಳಿಸಿದರು. ಸಂಘದ ಸದಸ್ಯರಾಗಿದ್ದ ಮೃತಪಟ್ಟ ಬಲ್ಲಾರಂಡ ಕಾಳಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು.
ಕಳೆದ ವರ್ಷದ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ. ಲೆಕ್ಕಪತ್ರವನ್ನು ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ ಮಂಡಿಸಿದರು. ಸಮಾಜದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಪಳಂಗAಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ ಸ್ವಾಗತಿಸಿ, ಉಪಾಧ್ಯಕ್ಷೆ ಐಚೆಟ್ಟೀರ ಸುನಿತಾ ಮಾಚಯ್ಯ ವಂದಿಸಿದರು.
ನAತರದಲ್ಲಿ ಕೈಲ್ಪೊಳ್ದ್ ಸಂತೋಷಕೂಟದ ಅಂಗವಾಗಿ ಹಿರಿಯ ಸದಸ್ಯ ವಾಯುಪಡೆಯ ನಿವೃತ್ತ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಕೋವಿ-ಕತ್ತಿಗೆ ಪೂಜೆ ಸಲ್ಲಿಸಿದಲ್ಲದೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸಾಂಪ್ರದಾಯಿಕ ಆಚರಣೆಯನ್ನು ಮಾಡಲಾಯಿತು. ನಂತರದಲ್ಲಿ ವಿವಿಧ ಮನೋರಂಜನಾ ಸ್ಪರ್ಧೆ ಏರ್ಪಡಿಸಲಾಯಿತು. ಮಹಿಳೆಯರು ತಯಾರಿಸಿದ ಎಲೆ ಊಟದ ಭೋಜನ ವಿಶೇಷವಾಗಿತ್ತು.
ಸಮಾರೋಪ: ಮಧ್ಯಾಹ್ನದ ನಂತರ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕೊಂಗೇಟಿರ ಡ್ಲೂö್ಯ ಚಂಗಪ್ಪ, ಬಲ್ಲಾರಂಡ ಗೌತಮಿ, ಬಿದ್ದಂಡ ಮಾದಯ್ಯ, ಕೊಂಗೇಟಿರ ರಾಣಾ ಪೂವಯ್ಯ ವೇದಿಕೆಯಲ್ಲಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಹಾಗೂ ವಿವಿಧ ಸಂಘ-ಸAಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ಮನೋರಂಜನಾ ಕ್ರೀಡೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಜಂಟಿ ಖಜಾಂಚಿ ಐಚೆಟ್ಟೀರ ಮಾಚಯ್ಯ, ನಿರ್ದೇಶಕರುಗಳಾದ ಬಟ್ಟೀರ ಕಾಳಪ್ಪ, ಬಿದ್ದಂಡ ಮಾದಯ್ಯ, ಪುತ್ತರಿರ ಕಾಶಿ ಸುಬ್ಬಯ್ಯ, ಕೆಚೆಟ್ಟೀರ ರತಿ ಕಾರ್ಯಪ್ಪ, ಕಾನೂನು ಸಲಹೆಗಾರ ವಕೀಲ ಕಡೇಮಡ ವಿನ್ಸಿ ಅಪ್ಪಯ್ಯ, ಅಡಿಕೇರ ಶಾಂತಿಜಯ, ಪಳಂಗAಡ ಶ್ಯಾಂ ಕಾಳಪ್ಪ ಹಾಗೂ ಸಮಾಜದ ಸದಸ್ಯರುಗಳು ಭಾಗವಹಿಸಿದ್ದರು.