ಸುಂಟಿಕೊಪ್ಪ, ಅ. ೧೦: ಐಗೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೆಚ್.ಬಿ. ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಡಿ.ಎಸ್. ಚಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಐಗೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂಗಪ್ಪ ಅವರು ನಾಮಪತ್ರ ಸಲ್ಲಿಸಿದರು. ಆದರೆ ಉಳಿದ ಯಾವುದೇ ನಿರ್ದೇಶಕರು ಸ್ಪರ್ಧಿಸಲು ಉತ್ಸುಕತೆ ತೋರಿಸದೇ ಇದ್ದುದರಿಂದ ಅವರಿಬ್ಬರನ್ನು ವಿಜಯಿ ಎಂದು ಚುನಾವಣಾಧಿಕಾರಿ ಮಡಿಕೇರಿ ಸಹಕಾರ ಇಲಾಖೆಯ ಉಪನಿಬಂಧಕ ಕಚೇರಿಯ ಅಧಿಕಾರಿ ಸಂದೀಪ್ ಅವರು ಘೋಷಿಸಿದರು.

ಇದೇ ವೇಳೆ ನಿರ್ದೇಶಕರಾದ ಬಿ.ಎಸ್. ಸಂತೋಷ್, ಎಸ್.ಪಿ. ಕೀರ್ತಿ ಪ್ರಸಾದ್, ಕೆ.ಇ. ಕುಟ್ಟಪ್ಪ, ಲಕ್ಷö್ಮಣ, ಹೆಚ್.ಕೆ. ಬಸಪ್ಪ, ಬಿ.ಕೆ. ದಾಕ್ಷಾಯಿಣಿ, ಸುನು ಕಿಶೋರ್, ಎಲ್.ಎಂ. ರಾಜೇಶ್, ಕೆ.ಪಿ. ರೋಶನ್, ವಿಶ್ವನಾಥ ರಾಜ್ ಅರಸು, ಹೊನ್ನಪ್ಪ, ಸಿಇಒ ಡಿಕ್ಕಿ ರಾಜು ಇದ್ದರು.